
ಆನೇಕಲ್ ಪುರಸಭಾ ಕೌನ್ಸಿಲ್ ಸಭೆಗಳಿಗೆ ಗೈರು ಹಾಜರಾದ ನಾಲ್ವರು ಸದಸ್ಯರ ಕ್ರಮಕ್ಕೆ ವರದಿ ಕೇಳಿ ಜಿಲ್ಲಾಧಿಕಾರಿಗಳಿಂದ ನೋಟೀಸ್.
ಬೆಂ,ಆನೇಕಲ್,ಆ,04: ಆನೇಕಲ್ ಪುರಸಭೆಯ ನಾಲ್ವರು ಸದಸ್ಯರು ಕ್ರಮವಾಗಿ ಮೂರು ತಿಂಗಳು ವರದಿ ನೀಡದೆ ಗೈರು ಹಾಜರಾದ ಕುರಿತು ಸದಸ್ಯ ರಾಜೇಂದ್ರ ಪ್ರಸಾದ್ ದೂರು ನೀಡಿದ ಹಿನ್ನಲೆ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಪುರಸಭಾ ಮುಖ್ಯಾಧಿಕಾರಿಗೆ ಮಾಹಿತಿ ಕೇಳಿ ನೋಟೀಸ್ ನೀಡಲಾಗಿದೆ. ಜುಲೈ 17ರಂದು ಬಂದ ನೋಟೀಸ್ಗೆ ಮುಖ್ಯಾಧಿಕಾರಿ ವರದಿ ಸಲ್ಲಿಸುವುದೊಂದು ಬಾಕಿ ಇದೆ.
ಅದರಂತೆ ವಾರ್ಡ್ ಸಂಖ್ಯೆ ,11ರ ಪ್ರಗತಿ ಬಿವಿ, 13ರ ಭಾಗ್ಯಲಕ್ಷ್ಮಿ, 14ರ ಶ್ಯಾಮಲಾ ಮತ್ತು 18ರ ರವಿಚೇತನ್ ನಾಲ್ವರು ಸದಸ್ಯರು ಅಕ್ಟೋಬರ್24ರ ಸಾಮಾನ್ಯ ಸಭೆ, ಜನವರಿ 25 ರ ವಿಶೇಷ ಸಭೆ ಹಾಗು ಬಜೆಟ್ಗೆ ಸಂಬಂದಿಸಿದ ನಾಲ್ಕು ಸಭೆಗಳಿಗೂ ಕಾರಣ ತಿಳಿಸದೆ ಗೈರು ಹಾಜರಾಗಿದ್ದಾರೆ ಎಂದು ರಾಜೇಂದ್ರ ಪ್ರಸಾದ್ ದೂರನ್ನು ಸಲ್ಲಿಸಿದ್ದರು.
ಸದಸ್ಯರ ಈ ನಡುವಳಿಕೆ ಪುರಸಭೆಗಳ ಅಧಿ ನಿಯಮ1964 ಕಲಂ16(2)(ಸಿ) ಪ್ರಕಾರ ಅನರ್ಹಗೊಳಿಸಲು ಸಾಧ್ಯವಿದೆ ಎಂದು
ಉಲ್ಲೇಖಿಸಿ ಸಂಪೂರ್ಣ ಹಾಜರಾತಿ ವರದಿಯನ್ನು ಜಿಲ್ಲಾಧಿಕಾರಿಗಳು ಕೇಳಿದ್ದಾರೆ.
