ರಾತ್ರಿ ಕುಡಿದ ಮತ್ತಿನಲ್ಲಿ ತಮ್ಮನನ್ನ ಕೊ*ಲೆಗೈದ ಅಣ್ಣ.
1 min read
ರಾತ್ರಿ ಕುಡಿದ ಮತ್ತಿನಲ್ಲಿ ತಮ್ಮನನ್ನ ಕೊ*
ಲೆಗೈದ ಅಣ್ಣ.
ಬೆಂ,ಆನೇಕಲ್,ಆ,04: ರಾತ್ರಿ ಭಾನುವಾರದ ಕುಡಿತದ ಮತ್ತಿನಲ್ಲಿ ತೇಲಾಡುತ್ತಿದ್ದ ಗಾರೆ ಕಾರ್ಮಿಕರ ಮದ್ಯೆ ಗಲಾಟೆ. ಕೊಲೆಯಲ್ಲಿ ಅಂತ್ಯಗೊಂಡಿದೆ.
ಆನೇಕಲ್ ಪಟ್ಟಣದ ಹೊಸೂರು ಮುಖ್ಯ ರಸ್ತೆಯ ಕೆಎಸ್ಆರ್ಟೀಸಿ ಬಡಾವಣೆಯ ಕೌಶಲ್ಯಾಬಾಯಿ ಬಾಡಿಗೆ ಮನೆಯಲ್ಲಿ ಕೊಲೆಯಾಗಿದೆ.
ಬಿಹಾರ ರಾಜ್ಯ ಮೂಲದ ಸುರೇಶ 25 ವರ್ಷ ಕೊಲೆಯಾದ ಕಾರ್ಮಿಕನಾಗಿದ್ದಾನೆ.
ಮುತ್ತಗಟ್ಟಿ ದಿನ್ನೆ ಅನಿಲ್ ಕುಮಾರ್ ಮೇಸ್ತ್ರಿ ಬಳಿಕೆಲಸ ಮಾಡುತ್ತಿದ್ದ ಸುರೇಶ ಶನಿವಾರದ ಬಟವಾಡೆಯಲ್ಲಿ ಭಾನುವಾರ ರಾತ್ರಿ ಕುಡಿದು ಅಣ್ಣನೊಂದಿಗೆ ಜಗಳ ಮಾಡಿದ್ದ. ಜಗಳ ವಿಪರೀತಕ್ಕೆ ಹೋದಾಗ 112 ಗೆ ಕರೆ ಮಾಡಿ ಪೊಲೀಸರು ಸ್ಥಳಕ್ಕೆ ಬಂದು ಸಮಾಧಾನಿಸಿ ಹೊರಟಿದ್ದರು.
ಅಲ್ಲಿಗೂ ನಿಲ್ಲದ ಖ್ಯಾತೆ ಮುಂಜಾನೆ ಅಣ್ಣ ಕೊಲೆಯಾದ ಸುರೇಶನ ಅಣ್ಣ ಮುನ್ನ ಕೊಲೆ ಮಾಡಿದ್ದಾನೆ.
ಕೊಲೆಯಾದ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರಿಗೆ ಆರೋಪಿ ಮುನ್ನ ಸೆರೆ ಸಿಕ್ಕಿದ್ದಾನೆ.
ಇನ್ನು ಸ್ಥಳಕ್ಕೆ ಬೆರಳಚ್ಚು ತಜ್ಞರು ಪೊಲೀಸ್ ಉನ್ನತಾಧಿಕಾರಿಗಳ ತಂಡ ಭೇಟಿ ನೀಡಬೇಕಿದೆ.
