ಕಾಂಗ್ರೆಸ್ ಪ್ರತಿನಿತ್ಯ ನೀಡುತ್ತಿರುವ ಜಾಹೀರಾತನ್ನು ನಾನು ಖಂಡಿಸುತ್ತೇನೆ-ಶಾಸಕ ಎಂ ಟಿ ಕೃಷ್ಣಪ್ಪ
1 min read
ತುರುವೇಕೆರೆ : ಇದೇ ವೇಳೆ ಮಾತನಾಡಿದ ಅವರು ಕೇಂದ್ರ ಸರ್ಕಾರದ ಆಪರೇಷನ್ ಸಿಂಧೂರದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಯುದ್ಧದಲ್ಲಿ ನಮ್ಮ ಭಾರತಕ್ಕೆ ಗೆಲುವಾಗಿದೆ ಇದರ ಕ್ರೆಡಿಟ್ NDA ಮೈತ್ರಿಕೂಟದ ಕೇಂದ್ರ ಸರ್ಕಾರಕ್ಕೆ ಸಲ್ಲಬೇಕು ಆದರೆ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದರ ಕ್ರೆಡಿಟ್ ಮಿಲಿಟರಿಗೆ ಸೇರಬೇಕು ಎಂದು ಹೇಳಿದ್ದಾರೆ ಎಂದು ಶಾಸಕ ಎಂ ಟಿ ಕೃಷ್ಣಪ್ಪ ಹೇಳಿದರು. ತುಮಕೂರು ಜಿಲ್ಲೆ ತುರುವೇಕೆರೆ,ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಮಾಧ್ಯಮ ಗೋಷ್ಟಿ ನಡೆಸಿ ಮಾತನಾಡಿದ ಅವರು ಕೇಂದ್ರದಲ್ಲಿ ಸರ್ಕಾರ ಭಾರತದ ಮತ್ತು ಪಾಕಿಸ್ತಾನ ನಡುವೆ ನಡೆದ ಯುದ್ಧಕ್ಕೆ ಆಪರೇಷನ್ ಸಿಂಧೂರ ಮಾಡಿತ್ತು . ಪ್ರಧಾನ ಮಂತ್ರಿ ಮತ್ತು ಕ್ಯಾಬಿನೆಟ್ ಹಾಗಾಗಿ ಇದರ ಕ್ರೆಡಿಟ್ ಎನ್ ಡಿ ಎ ಮೈತ್ರಿಕೂಟದ ಕೇಂದ್ರ ಸರ್ಕಾರಕ್ಕೆ ಸಲ್ಲಬೇಕು, ಆದರೆ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಟ್ಟೆ ಉರಿಗೋಸ್ಕರ ಈ ರೀತಿ ವಿನಾಕಾರಣ ಹೇಳಿಕೆ ಕೊಡುತ್ತಿರುವುದು ವಿಷಾದಕರವಾಗಿದೆ, ಇದಲ್ಲದೆ ರಾಜ್ಯ ಸರ್ಕಾರದಿಂದ ಕೊಡುತ್ತಿರುವ 5 ಗ್ಯಾರಂಟಿಗಳ ಬಗ್ಗೆ ಪ್ರತಿನಿತ್ಯ ಜಾಹೀರಾತು ನೀಡುತ್ತಿದ್ದು ಆದರೆ ಈ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ 5 ಗ್ಯಾರಂಟಿಯ ಹಣ ತೆರಿಗೆಯಿಂದ ಬಂದಂತಹ ಹಣ ಇದು ಸಿದ್ದರಾಮಯ್ಯ ಅವರ ಮನೆಯಿಂದ ಅಥವಾ ಕಾಂಗ್ರೆಸ್ ಪಾರ್ಟಿ ಫಂಡ್ ಇಂದ ತಂದಿರುವಂತ ಹಣವಲ್ಲ, ಹಾಗಾಗಿ ಐದು ಗ್ಯಾರಂಟಿಗಳ ಕ್ರೆಡಿಟ್, ತೆರಿಗೆ ಹಣ ನೀಡುತ್ತಿರುವವರಿಗೆ ಸಲ್ಲಬೇಕು ಎಂದು ಹೇಳಿದರು.
ಕಾಂಗ್ರೆಸ್ ಪ್ರತಿನಿತ್ಯ ಪೇಜ್ಗಟ್ಟಲೆ ನೀಡುತ್ತಿರುವ ಜಾಹೀರಾತನ್ನು ನಾನು ಖಂಡಿಸುತ್ತೇನೆ, ಇದಲ್ಲದೆ ತೆರಿಗೆ ಹಣದಲ್ಲಿ ಬರುವಂತಹ ಹಣದಿಂದ ಗ್ಯಾರಂಟಿಗಳ ನೆಪದಲ್ಲಿ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಪದಾಧಿಕಾರಿಗಳಿಗೆ ಸಂಬಳವಾಗಿ ಹಣವನ್ನು ನೀಡುತ್ತಿದ್ದಾರೆ ಇದರ ವಿಷಯವಾಗಿ ಹಲವು ಬಾರಿ ನಾನೇ ಈ ಹಿಂದೆ ಅನೇಕ ಬಾರಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನೆ ಆದರೆ ಸಿದ್ದರಾಮಯ್ಯ ಅವರ ಚರ್ಮ ದಪ್ಪ ಇದೆ, ಅವರಿಗೆ ಏನೇ ಹೇಳಿದರು ಅರ್ಥವಾಗುವುದಿಲ್ಲ, ತಮ್ಮ ಸ್ವಾರ್ಥಕೋಸ್ಕರ ಈ ರಾಜ್ಯದ ತೆರಿಗೆ ಹಣವನ್ನು ಈ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಈ ಸರ್ಕಾರಕ್ಕೆ ಅಭಿವೃದ್ಧಿಗೆ ಹಣ ಕೊಡಲು ಯೋಗ್ಯತೆ ಇಲ್ಲ ಸುಮ್ಮನೆ ವಿನಾಕಾರಣ ದಿನನಿತ್ಯ ಗ್ಯಾರಂಟಿಗಳ ಜಾಹೀರಾತನ್ನು ಪೇಜ್ಗಟ್ಟಲೆ ನೀಡಿಕೊಂಡು ನಮ್ಮ ಸರ್ಕಾರ ಅಭಿವೃದ್ಧಿ ಮಾಡುತ್ತಿದೆ ಎಂದು ಸುಳ್ಳು ಹೇಳುತ್ತಿದೆ. ಎಂದರು
ಈ ಸರ್ಕಾರ ಅಭಿವೃದ್ಧಿಯಲ್ಲಿ ಖಂಡಿತವಾಗಿಯೂ ಶೂನ್ಯ, ಇದಲ್ಲದೆ ಹೊಸಪೇಟೆಯಲ್ಲಿ ನಡೆಯುತ್ತಿರುವ ಸಮಾವೇಶಕ್ಕೆ ಜನಗಳಿಗೆ ತಲಾ 250 ಕೊಟ್ಟು ಸಮಾವೇಶದಲ್ಲಿ ಜನಗಳನ್ನು ಸೇರಿಸಲು ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ, ಹಾಗಾಗಿ ಈಗಾಗಲೇ ಈ ಕೆಟ್ಟ ಕಾಂಗ್ರೆಸ್ ಸರ್ಕಾರದ ಮೇಲೆ ಮತ್ತು ಇವರುಗಳ ಮೇಲೆ ಗೌರವ ಪ್ರೀತಿ ಇಲ್ಲ ಎಂಬುದು ತಿಳಿದಿದೆ, ಆದರೂ ವಿನಾಕಾರಣ ಜನಗಳಿಗೆ ಹಣ ನೀಡಿ ಅಧಿಕಾರಿಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಅವರ ಮುಖಾಂತರ ಈ ಸಮಾವೇಶ ಮಾಡಲು ಹೊರಟಿದ್ದಾರೆ ಇದು ನಾಚಿಕೆಗೇಡಿನ ಸಮಾವೇಶವಾಗಿದೆ ಜೊತೆಗೆ ಈ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ ಈ ಸರ್ಕಾರಕ್ಕೆ ಯಾವುದೇ ನೈತಿಕತೆ ಇಲ್ಲ ಎಂದರು,
ಮುಂದುವರೆದು ಮಾತನಾಡಿದ ಅವರು ಪಿ ಎಲ್ ಡಿ ಬ್ಯಾಂಕಿನ ಚುನಾವಣೆ ಹತ್ತಿರ ಬರುವ ಸಂದರ್ಭದಲ್ಲಿ ಸುಮಾರು 8000 ಮತದಾರರನ್ನು ವಜಾ ಮಾಡಿದ್ದು ಇದಕ್ಕೆ ಕಾರಣ ಏನೆಂಬುದು ತಿಳಿದಿಲ್ಲ ಆದರೂ ಇದನ್ನು ಇಲ್ಲಿಗೆ ಬಿಡದೆ ಇದು ಕಾನೂನುಬಾಹಿರ ಇದಕ್ಕೆ ಸಂಬಂಧಪಟ್ಟಂತೆ ವೀಕ್ಸ್ಟಾರ್ ಗೆ ಕೂಡಲೇ ಪತ್ರ ಬರೆದು ತನಿಖೆಯೇ ನಡೆಸುವಂತೆ ಒತ್ತಾಯ ಮಾಡುತ್ತೇನೆ ಜೊತೆಗೆ ಕೋರ್ಟ್ ನಲ್ಲಿ ದಾವೆಯನ್ನು ಹೂಡಿ ಕೈಬಿಟ್ಟಿರುವ ಎಲ್ಲಾ ಮತದಾರರು ಮತ ಚಲಾಯಿಸುವಂತಹ ಅಧಿಕಾರ ನೀಡಲು ಪ್ರಯತ್ನ ಮಾಡುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ಜೆ ಡಿ ಎಸ್ ಮುಖಂಡ ವೆಂಕಟಪುರ ಯೋಗೀಶ್, ಮಂಗಿ ಕುಪ್ಪೆ ಬಸವರಾಜ್, ಹೊನ್ನೇನಹಳ್ಳಿ ಕೃಷ್ಣಪ್ಪ, ರಾಮಡಿಹಳ್ಳಿ ದೇವರಾಜು, ಇನ್ನು ಹಲವು ಮುಖಂಡರು ಇದ್ದರು.
ವರದಿ, ಮಂಜುನಾಥ್ ಕೆ ಎ ತುರುವೇಕೆರೆ.
