c24kannada

ವಸ್ತುಸ್ಥಿತಿಯತ್ತ

ಮಾಯಸಂದ್ರ ಪ್ರಾ.ಕೃ.ಪ.ಸ.ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎಂ.ಎಲ್.ಲೋಕೇಶ್ ಅವಿರೋಧ ಆಯ್ಕೆ.

Share it

ತುರುವೇಕೆರೆ  : ತಾಲೂಕಿನ ಮಾಯಸಂದ್ರ ಹೋಬಳಿ ಮಾಯಸಂದ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮಾಯಸಂದ್ರ ಎಂ.ಎಲ್. ಲೋಕೇಶ್ ”
ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಈ ಹಿಂದಿನ ಅಧ್ಯಕ್ಷರಾಗಿದ್ದ ಪಂಚಾಕ್ಷರಿ ರವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆಗುರುವಾರ ಚುನಾವಣೆ ನಡೆಯಿತು. 12 ನಿರ್ದೇಶಕ ಬಲವುಳ್ಳ ಸಂಘದಲ್ಲಿ ಎಂ.ಎಲ್.ಲೋಕೇಶ್ ರವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾದ ಸಹಕಾರ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಡಿ ಎಚ್ ರವರು ಅವಿರೋಧ ಆಯ್ಕೆ ಎಂದು ಘೋಷಿಸಿದರು.

 

ಈ ವೇಳೆ ಪತ್ರಕರ್ತರೊಂದಿಗೆ ನೂತನ ಅಧ್ಯಕ್ಷರಾದ ಎಂ.ಎಲ್.ಲೋಕೇಶ್ ರವರು ಮಾತನಾಡಿ, ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ ಸರ್ವ‌ ನಿರ್ದೇಶಕರುಗಳಿಗೆ ಮತ್ತು ‌ ಸಹಕರಿಸಿದ ಸರ್ವರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮತ್ತು ನಮ್ಮ ಸಂಘದ ಸರ್ವ ನಿರ್ದೇಶಕರ ಜೊತೆಗೂಡಿ ಸಂಘದ ವ್ಯಾಪ್ತಿಯಲ್ಲಿನ ಎಲ್ಲಾ ಹಳ್ಳಿಗಳಿಗ ರೈತರುಗಳಿಗೆ ಮತ್ತು ಸಹಕಾರ ಸಂಘದ ಶ್ರೇಯೋಭಿವೃದ್ಧಿಗಾಗಿ, ಸಂಘದ ಏಳಿಗೆಗಾಗಿ ಶ್ರಮಿಸಿದಾಗಿ ತಿಳಿಸಿದರು.

 

ನೂತನ ಅಧ್ಯಕ್ಷರ ಆಯ್ಕೆಯ ಘೋಷಣೆಯಾಗುತ್ತಿದ್ದಂತೆ ತಮ್ಮ ಬೆಂಬಲಿಗರು, ಅಭಿಮಾನಿಗಳು, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು ಹಾಗೂ ‌ ಸ್ಥಳೀಯ ಮುಖಂಡರುಗಳು, ಸಂಘದ ಆಡಳಿತ ಮಂಡಳಿಯೂ ನೂತನ ಅಧ್ಯಕ್ಷರನ್ನು ಅಭಿನಂದಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾ.ಜಿ.ಪಂ. ಸದಸ್ಯರು ಹಾಗೂ ತಾಲೂಕು ತೆಂಗು ಅಡಿಕೆ ಬೆಳೆಗಾರ ಸಂಘದ ಅಧ್ಯಕ್ಷರಾದ ಜಯರಾಮ್. ಮಾಯಸಂದ್ರ ಗ್ರಾ.ಪಂ. ಅಧ್ಯಕ್ಷ ಚಂದ್ರ. ಮಾಜಿ ಅಧ್ಯಕ್ಷರಾದ ಪಂಚಾಕ್ಷರಿ. ಉಪಾಧ್ಯಕ್ಷರಾದ ಜಯಮ್ಮ.ಸಂಘದ ನಿರ್ದೇಶಕರುಗಳಾದ ಜವರೇಗೌಡ. ಕೆ ಸಿ ನಟರಾಜು. ಶ್ಯಾಮಲ. ಅಶೋಕ್ ಕುಮಾರ್ .ಗಿರಿಧರ್. ವಾಸು. ಗಂಗಯ್ಯ.ನಂದೀಶ್. ಸಿಇಒ ಮಮತಾ. ಹಾಗೂ ಗ್ರಾ.ಪಂ. ಮಾಜಿ ಅಧ್ಯಕ್ಷ ಶ್ರೀನಿವಾಸ್ (ಕಾಳಿ). ಸ್ಥಳೀಯ ಮುಖಂಡರಾದ ಸುಬ್ರಹ್ಮಣ್ಯ.ಕುಮಾರ್. ಸಿದ್ದೇಗೌಡ. ರಾಜೀವ್. ಹರ್ಷಿತ್ ಜೈನ್.ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ಯುವ ಮುಖಂಡರುಗಳು. ಪದಾಧಿಕಾರಿಗಳು, ಗ್ರಾಮಸ್ಥರು, ಸ್ಥಳೀಯ ಜನಪ್ರತಿನಿಧಿಗಳು, ಮುಂತಾದವರು ಉಪಸ್ಥಿತರಿದ್ದರು.

Loading

Leave a Reply

Your email address will not be published. Required fields are marked *

error: Content is protected !!