ಕಾರ್ಯಕ್ರಮದ ವೇದಿಕೆ ಮೇಲೆಯೇ ಕುಸಿದು ಬಿದ್ದ ತಮಿಳು ಸಿನಿಮಾ ನಟ ವಿಶಾಲ್.. ಆಸ್ಪತ್ರೆಗೆ ದಾಖಲು
1 min read
ವಿಲ್ಲುಪುರಂ : ತಮಿಳು ಸಿನಿಮಾ ನಟ ವಿಶಾಲ್ ಅವರು ವೇದಿಕೆ ಮೇಲಿನಿಂದ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ. ಚಿತ್ತಿರೈ ಆಚರಣೆ ಹಿನ್ನೆಲೆಯಲ್ಲಿ ತಮಿಳುನಾಡಿನ ವಿಲ್ಲುಪುರಂನ ಕೂವಾಗಮ್ ಗ್ರಾಮದ ದೇವಾಲಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ವಿಶಾಲ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಿಸ್ ಕೂವಾಗಮ್ ಎಂದು ತೃತೀಯ ಲಿಂಗಿಗಳ ಸೌಂದರ್ಯ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ ವಿಶಾಲ್ ವೇದಿಕೆ ಮೇಲಿದದರು.
ಆದರೆ ಈ ವೇಳೆ ವೇದಿಕೆ ಮೇಲಿದ್ದ ವಿಶಾಲ್ ಚೆನ್ನಾಗಿಯೇ ಎಲ್ಲರ ಜೊತೆ ನಗು ನಗುತ್ತ ಮಾತನಾಡುತ್ತ ಇದ್ದರು. ಆದರೆ ಅದು ಏನಾಯಿತೋ ಏನೋ ಗೊತ್ತಿಲ್ಲ. ಇದ್ದಕ್ಕಿದ್ದಾಗೆ ಪ್ರಜ್ಞೆ ತಪ್ಪಿ ವಿಶಾಲ್ ವೇದಿಕೆ ಮೇಲಿಂದ ಕುಸಿದು ಬಿದ್ದಿದ್ದಾರೆ. ಇದರಿಂದ ಕಾರ್ಯಕ್ರಮ ಆಯೋಜಕರು, ಸ್ಥಳೀಯರು ಗಾಬರಿ ಆಗಿದ್ದರು. ಕೂಡಲೇ ವಿಶಾಲ್ ಅವರ ತಂಡ, ಮಾಜಿ ಸಚಿವ ಕೆ.ಪೊನ್ನುಡಿ ಹಾಗೂ ಕಾರ್ಯಕ್ರಮ ಆಯೋಜಕರು ಸ್ಟಾರ್ ನಟನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಚಿಕಿತ್ಸೆ ಪಡೆದುಕೊಂಡ ವಿಶಾಲ್ ಚೇತರಿಕೆ ಕಂಡಿದ್ದು ಆರೋಗ್ಯವಾಗಿದ್ದಾರೆ ಎಂದು ಹೇಳಲಾಗಿದೆ.
ಇತ್ತೀಚೆಗೆ ತಾವೇ ನಟಿಸಿದ್ದ ಮದ ಗಜ ರಾಜ ಎನ್ನುವ ಸಿನಿಮಾ ಕುರಿತು ಮಾಧ್ಯಮಗೋಷ್ಠಿ ನಡೆಸುವಾಗ ವಿಶಾಲ್ ಅವರು ಮೈಕ್ ಹಿಡಿದುಕೊಂಡು ಮಾತಾಡುತ್ತಿದ್ದರು. ಈ ವೇಳೆ ಅವರ ಕೈ ಎಲ್ಲ ಅಲುಗಾಡುತ್ತಿತ್ತು. ಮೈಕ್ ಅನ್ನು ಹಿಡಿದುಕೊಳ್ಳಲು ಆಗುತ್ತಿಲ್ಲ ಎನ್ನುವುದರ ಮಟ್ಟಿಗೆ ಕೈ ಶೇಕ್ ಆಗಿತ್ತು. ಅಲ್ಲದೇ ತೊದಲುತ್ತ ಮಾತನಾಡಿದ್ದರು. ಇದರ ಬೆನ್ನಲ್ಲೇ ಇದೀಗ ವೇದಿಕೆ ಮೇಲೆಯೇ ಪ್ರಜ್ಞೆ ತಪ್ಪಿ ಕುಸಿದಿದ್ದಾರೆ. ಇದು ಅವರ ಅಭಿಮಾನಿಗಳಿಗೆ ನೋವುಂಟು ಮಾಡಿದೆ. ವಿಶಾಲ್ಗೆ ಏನಾಗಿದೆ ಎಂದು ಫ್ಯಾನ್ಸ್ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
