ಉಗ್ರರ ಮೇಲೆ ಸೇನೆ ದಾಳಿ, ಮಾಜಿ ಸಚಿವ ಸಿ. ಸಿ ಪಾಟೀಲ ಸುದ್ದಿಗೋಷ್ಠಿ
1 min read
ಗದಗ: ದೇಶಕ್ಕೆ ಕರಾಳ ದಿನವಾಗಿದೆ. ಭೂ ಲೋಕದ ಸ್ವರ್ಗ ಫಹಲ್ಗಾಮ್ ನಲ್ಲಿ 26ಜನ ಅಮಾಯಕರನ್ನು ಧರ್ಮ ಪತ್ನಿ, ಮಕ್ಕಳ ಎದುರು ಬಟ್ಟೆ ಬಿಚ್ಚಿಸಿ ಹಿಂದೂಗಳು ಅಂತ ತಿಳಿದ ಮೇಲೆ ಎದೆಗೆ ಗುಂಡಿಟ್ಟರು. ದುರ್ಘಟನೆಯಲ್ಲಿ ಶತ್ರು ರಾಷ್ಟ್ರವಾದ ಪಾಕಿಸ್ತಾನದ ಐಎಸ್ ಐ, ಲಷ್ಕರ್ ಎ ತೊಯ್ಬಾ ಕೈವಾಡ ಇರುವುದನ್ನು ಎನ್ ಐ ಎ ದೃಢಪಡಿಸಿದೆ ಅಂತ ಮಾಜಿ ಸಚಿವ ಸಿ.ಸಿ ಪಾಟೀಲ ಹೇಳಿದರು.,
ಈ ಕೃತ್ಯಕ್ಕೆ ಪ್ರತಿಕಾರ ಬೇಕು ಎನ್ನುವುದು ದೇಶಭಕ್ತ ನಾಗರಿಕರಲ್ಲಿತ್ತು. ಇದಕ್ಕೆ ಸ್ಫಂದಿಸಿ, ಈ ಘಟನೆಗೆ ಕಾರಣಿಕರ್ತರಾದವರನ್ನು ಹಾಗೂ ಅವರಿಗೆ ಬೆಂಬಲ ನೀಡಿದವರನ್ನು ಊಹೆಗೂ ಮಿರಿ ಶಿಕ್ಷೆ ಕೊಡುತ್ತೇವೆ ಅಂತ ಮೋದಿ ಹೇಳಿದ್ದರು. ಅದರಂತೆ ಮಂಗಳವಾರ ತಡರಾತ್ರಿ ಉಗ್ರರ ತರಬೇತಿ ನೀಡುವ ಮನೆ, 9 ಜಾಗಗಳನ್ನು ಗುರುತಿಸಿ ದಾಳಿ ಮಾಡಿದರು. ದಾಳಿ ಮುಗಿಸಿ ತಾಯ್ನಾಡಿಗೆ ಮರಳಿದ ಯೋಧರನ್ನು ಬಿಜೆಪಿ ಅಭಿನಂದಿಸುತ್ತದೆ. ದೇಶದ ಹೆಮ್ಮೆಯ ಪ್ರಧಾನಿ ಮೋದಿ ರಕ್ಷಣಾ ಸಚಿವರು, ವಿದೇಶಾಂಗ ವ್ಯವಹಾರಗಳ ಸೇಚಿವರು ಸೇರಿದಂತೆ ಹಲವಾರು ಸಭೆ ಮಾಡಿ ದಾಳಿಯ ಬಗ್ಗೆ ಬ್ಲ್ಯೂ ಪ್ರಿಂಟ್ ರೆಡಿ ಮಾಡಿ ನಾರಾರೂ ಉಗ್ರರನ್ನು ಸೆದೆ ಬಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೂರು ಸೇನೆಯ ಮಹಾ ದಂಡನಾಯಕರು ಮೋದಿಯ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚೀನಾ ಮೂಲಕ ಎರಡು ವಿಮಾನವನ್ನು ನಮ್ಮ ಸೇನೆ ಹೊಡೆದುರುಳಿಸಿದೆ. ಜೆ 7 ವಿಮಾನ ಹೊಡೆದುರುಳಿಸಿದ್ದು ಚೀನಾಗೆ ಭಾರಿ ಮುಗಭಂಗವಾಗಿದೆ. ರಾಜನಾಥ್ ಸಿಂಗ್ ಅಜಿತ್ ದೋವೆಲ್, ಅಮಿತ್ ಷಾ, ಮೋದಿ ಯವರಿಗೆ ಯಶಸ್ಸು ಸಲ್ಲುತ್ತದೆ. ಸಿಂದೂ ನದಿ ಒಪ್ಪಂದ ರದ್ದು ಪಾಕಿಸ್ತಾನದ ಕಡೆ ಹರಿಯುವ ನೀಡನ್ನು ಬಂದ್ ಮಾಡಲಾಗಿದೆ. ಪಾಕಿಸ್ತಾನ ಆಂತರಿಕವಾಗಿ ಹಿನ್ನಡೆ ಅನುಭವಿಸಿದೆ ಅಂತ ಹೇಳಿದ್ರು.
ಕರೋನಾ ಸಮಯದಲ್ಲಿ ಟರ್ಕಿ ದೇಶಕ್ಕೆ ಭಾರತ ಅನೇಕ ರೀತಿಯಲ್ಲಿ ಸಹಾಯ ಸಹಕಾರ ನೀಡಿತ್ತು. ಆದರೆ, ಈಗ ಟರ್ಕಿ ಪಾಕ್ ಪರ ನಿಂತಿರುವುದು ನೋವಿನ ಸಂಗತಿಯಾಗಿದೆ. ಎಲ್ಲ ದೇಶ ಪ್ರೇಮಿಗಳು ಸೈನಿಕರು ಕೇಂದ್ರ ಸರ್ಕಾರದ ಜೊತೆ ನಿಲ್ಲೋಣ. ಪ್ರಪಂಚದಲ್ಲಿ ಒಂದು ರಾಷ್ಟ್ರ ಕಣ್ಮರೆ ಆಗುತ್ತದೆ ಅಂತ ಕೊಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಬಹುಶಃ ಪಾಕಿಸ್ತಾನ ಇನ್ನೊಂದು ಹೆಜ್ಜೆ ಮುಂದಿಟ್ಟರೇ ಕೊಡಿಮಠದ ಶ್ರೀಗಳು ಹೇಳಿದ ಭವಿಷ್ಯ ಪಾಕಿಸ್ತಾನದ ರೂಪದಲ್ಲಿ ನೀಜವಾಗಬಹುದು ಎಂದ್ರು.
