ಶುಕ್ರವಾರ ರಾಶಿ ಭವಿಷ್ಯ-ಮಾರ್ಚ್11-2025
1 min read
ಮೇಷ ರಾಶಿ
ಅಧಿಕಾರ ಪ್ರಾಪ್ತಿಯಲ್ಲಿ ಕಿರಿಕಿರಿ ಉಂಟಾಗಬಹುದು
ಇಂದು ಸಂಗಾತಿಯೊಂದಿಗೆ ವಿರಸ, ಕಲಹ ಉಂಟಾಗಬಹುದು
ಇಂದು ಹೊಸ ಹೊಸ ಯೋಜನೆಗಳನ್ನು ಕೈಗೊಳ್ಳಲು ಅವಕಾಶವಿದೆ
ಸಹೋದ್ಯೋಗಿಗಳಿಂದ ತೊಂದರೆಯಾಗಬಹುದು
ಆದಾಯಕ್ಕಿಂತ ಖರ್ಚು ಹೆಚ್ಚಾಗಿರುತ್ತದೆ
ಕುಟುಂಬದಲ್ಲಿ ವಾದ-ವಿವಾದಗಳಿಂದ ರಾಜಿಯಾಗಬಹುದು
ನ್ಯಾಯವಾದಿಗಳಿಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ಲಾಭದ ದಿನ
ಗುರುಗಳನ್ನು ಪ್ರಾರ್ಥನೆ ಮಾಡಬೇಕು
ವೃಷಭ ರಾಶಿ
ಇಂದು ನಿಂದನೆಗೆ ಒಳಗಾಗುವ ಸಾಧ್ಯತೆಯಿದೆ ಎಚ್ಚರಿಕೆ
ನಿಮ್ಮ ವಿರೋಧಿಗಳೇ ನಿಮಗೆ ಆಶ್ಚರ್ಯವಾಗುವ ರೀತಿಯಲ್ಲಿ ಬೆಂಬಲ ನೀಡಬಹುದು
ನಿಮ್ಮ ಸಮಸ್ಯೆಗಳಿಗೆ ಸರಳವಾದ ಪರಿಹಾರ ಕಂಡುಕೊಳ್ಳುತ್ತೀರಿ
ಪಾರಂಪರಿಕ ವೃತ್ತಿಯಲ್ಲಿ ಗೌರವ ಸಿಗುವ ದಿನವಾಗಿದೆ
ರಾಜಕಾರಣಿಗಳಿಗೆ ಹೆಚ್ಚಿನ ಒತ್ತಡವಿರುವ ದಿನ
ಕಟ್ಟಡ ಸಾಮಾಗ್ರಿ ವ್ಯಾಪಾರಿಗಳಿಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ
ಅಪರಿಚಿತರಿಂದ ಮೋಸ ಹೋಗುವ ಸಾಧ್ಯತೆಯಿದೆ ಎಚ್ಚರಿಕೆ
ಶಂಕರನಾರಾಯಣನನ್ನು ಪ್ರಾರ್ಥನೆ ಮಾಡಬೇಕು
ಮಿಥುನ ರಾಶಿ
ಕುಟುಂಬದಲ್ಲಿ ಕಿರಿಕಿರಿ ಆಗುವ ದಿನ
ಇಂದು ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ
ದಂಪತಿಗಳು ಹಾಗೂ ಮಕ್ಕಳ ಮಧ್ಯೆ ಬೇಸರದ ವಾತಾವರಣ ಉಂಟಾಗಬಹುದು
ವ್ಯವಹಾರದಲ್ಲಿ ಎಚ್ಚರಿಕೆಯಿಂದಿರಬೇಕು
ಇಂದು ಅಧಿಕವಾಗಿ ಆರ್ಥಿಕ ನಷ್ಟವಾಗಬಹುದು
ಮಾನಸಿಕ ನೆಮ್ಮದಿ ಇಲ್ಲದೆ ಇರುವ ದಿನ
ನಿಮ್ಮ ಆರೋಗ್ಯದ ಕಡೆ ಗಮನಕೊಡಿ
ಮೂಲವ್ಯಾಧಿ ಇರುವವರಿಗೆ ಶಸ್ತ್ರ ಚಿಕಿತ್ಸೆಯಾಗುವ ಸಾಧ್ಯತೆ ಇದೆ
ವಿಷ್ಣುತ್ರಯೀ ಮಂತ್ರವನ್ನು ಜಪಿಸಬೇಕು
ಕಟಕ ರಾಶಿ
ವಾತ್ಸಲ್ಯಪೂರ್ಣ ಮಾತಿನಿಂದಾಗಿ ಕುಟುಂಬದಲ್ಲಿ ಹೆಚ್ಚಿನ ವಿಶ್ವಾಸಗಳಿಸ್ತೀರಿ
ನಿಮ್ಮನ್ನು ಮಕ್ಕಳು ಹೆಚ್ಚು ಪ್ರೀತಿಸುವ ದಿನವಾಗಿದೆ
ಪ್ರಯಾಣದ ವಿಚಾರವಾಗಿ ಬೇಸರವಾಗುತ್ತದೆ
ಅನಿರೀಕ್ಷಿತ ಧನಾಗಮ ಆಗಲಿದೆ
ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಜಯ ನಿಮ್ಮದಾಗುತ್ತದೆ
ನಿರ್ಧಾರಗಳನ್ನು ಬದಲಿಸುವುದರಿಂದ ನೌಕರಿಯಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆ
ರಾಮರಕ್ಷಾ ಸ್ತೋತ್ರ ಪಠಿಸಬೇಕು
ಸಿಂಹ ರಾಶಿ
ಇಂದು ಯಾವುದೇ ಆತುರವಾದ ನಿರ್ಧಾರ ಬೇಡ
ಉದ್ಯೋಗ ಕ್ಷೇತ್ರದಲ್ಲಿ ಹಿನ್ನಡೆ ಉಂಟಾಗಬಹುದು
ಸ್ತ್ರೀಯರಿಗೆ ಸಾಂಸಾರಿಕ ಜೀವನದಲ್ಲಿ ತೃಪ್ತಿ ಸಿಗುವ ದಿನ
ನೆರೆ ಹೊರೆಯವರೊಂದಿಗೆ ವಿಶ್ವಾಸದಿಂದಿರಿ
ಇಂದು ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ
ಧಾರ್ಮಿಕ, ಆದ್ಯಾತ್ಮಿಕ, ಸಾಮಾಜಿಕ ಚಿಂತನೆಗಳತ್ತ ಮನಸ್ಸು ಹರದಾಡುತ್ತೆ ಗಮನ ಹರಿಸಿ
ಜೀವನದ ಸಾರ್ಥಕತೆಯ ಬಗ್ಗೆ ಹುಡುಕಾಟ ನಡೆಯಬಹುದು
ಬಲರಾಮನನ್ನು ಪ್ರಾರ್ಥನೆ ಮಾಡಬೇಕು
ಕನ್ಯಾ ರಾಶಿ
ಮನಸ್ಸಿನ ಬೇಸರ ನಿವಾರಣೆಗೆ ಹೊಸ ಜಗತ್ತಿನ ಅರಿವಿನ ಅಗತ್ಯವಿರುತ್ತದೆ
ಯಾವುದು ಸರಿ ಅನಿಸುತ್ತೆ ಅದನ್ನ ಮಾತ್ರ ಮಾಡಿ
ಹೊಸ ಸಂಬಂಧ, ಗೆಳತನ ಎಲ್ಲವೂ ಲಭ್ಯವಾಗುವ ದಿನ
ಆರೋಗ್ಯದಲ್ಲಿ ಸಮಸ್ಯೆಗಳಾಗಬಹುದು ಜಾಗ್ರತೆವಹಿಸಿ
ಇಂದು ಸಾಲ ಮರುಪಾವತಿಸಿ ಗೌರವ ಉಳಿಸಿಕೊಳ್ಳುವಿರಿ
ವಸ್ತ್ರ ವ್ಯಾಪಾರಿಗಳಿಗೆ ಲಾಭದ ದಿನ
ಪಿತ್ರಾರ್ಜಿತ ಆಸ್ತಿಯ ವಿಚಾರಕ್ಕೆ ಮನಸ್ತಾಪವಾಗಬಹುದು
ದಧಿವಾಮನ ಮಂತ್ರ ಜಪಿಸಿ ಬೇಕು
ತುಲಾ ರಾಶಿ
ಬೇರೆಯವರಿಂದ ನಿಮ್ಮ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗಿರತ್ತೆ
ನಿಮ್ಮ ಬಗ್ಗೆ ಇರೋ ಅಭಿಪ್ರಾಯ ಮನಸ್ಸಿಗೆ ಹಿತವೆನಿಸುತ್ತದೆ
ದಾಂಪತ್ಯದಲ್ಲಿ ವಿರಸ ಮೂಡಬಹುದು ಸರಿ ಪಡಿಸಿಕೊಳ್ಳಿ
ಹೊರಗಡೆ ಆಹಾರ ಸೇವಿಸಬೇಕಾದರೆ ಜಾಗರೂಕರಾಗಿರಿ
ಅಗ್ನಿ ವಿಚಾರದಲ್ಲಿ ಎಚ್ಚರಿಕೆ ಅಗತ್ಯ
ಸಂಪನ್ಮೂಲಗಳನ್ನ ಕ್ರೋಡಿಕರಿಸಲು ಹಲವಾರು ರೀತಿ ಪ್ರಯತ್ನಿಸುತ್ತೀರಿ
ತರಕಾರಿ ವ್ಯಾಪಾರಿಗಳಿಗೆ ಹಾಗೂ ಪ್ರಾಣಿಗಳನ್ನ ಮಾರುವ ದಲ್ಲಾಳಿಗಳಿಗೆ ಆತಂಕದ ದಿನ
ಏಕಾಕ್ಷರ ನರಸಿಂಹ ಮಂತ್ರ ಶ್ರವಣ ಮಾಡಬೇಕು
ವೃಶ್ಚಿಕ ರಾಶಿ
ನಿರಾಸೆಯಿಂದ ಹೊರಬಂದು ನಿಮ್ಮ ಕೆಲಸ ಕಾರ್ಯದಲ್ಲಿ ತೊಡಗಿರಿ
ಯಾವುದೇ ಮುಲಾಜಿಗೆ ಒಳಗಾಗದೆ ವ್ಯವಹಾರ ಮಾಡಿದರೆ ಒಳಿತು
ವಿದ್ಯಾರ್ಥಿಗಳಿಗೆ ತುಂಬಾ ಕಿರಿಕಿರಿ ಉಂಟಾಗುವ ದಿನ
ದೀರ್ಘಕಾಲದ ಖಾಯಿಲೆಯಿಂದ ಗುಣಮುಖರಾಗುತ್ತೀರಿ
ಆಧಾತ್ಮಿಕ ಚಿಂತನೆ ನಿಮ್ಮ ಮನಸಲ್ಲಿ ನಡೆಯುತ್ತದೆ
ವಿವಾಹ ವಿಚಾರಕ್ಕೆ ಚಾಲನೆ ಸಿಗುವಂತಹ ದಿನ
ಎರಡನೇ ಮದುವೆಗೆ ಇಂದು ಶುಭಫಲವಿದೆ
ಕೂರ್ಮ ಮಂತ್ರ ಶ್ರವಣ ಮಾಡಬೇಕು
ಧನಸ್ಸು ರಾಶಿ
ನಿಮ್ಮ ಯೋಜನೆಗಳಿಗೆ ವಿಶೇಷ ಬೆಂಬಲ ಸಿಗುವ ದಿನ
ಕ್ರೀಡಾಪಟುಗಳಿಗೆ ಉತ್ತಮ ಲಾಭ, ಗೌರವ-ಪುರಸ್ಕಾರಗಳು ಸಿಗುವ ದಿನವಾಗಿದೆ
ಆರ್ಥಿಕ ವಿಚಾರಗಳಲ್ಲಿ ಎಚ್ಚರಿಕೆ ವಹಿಸಿ
ಸಾಲಕ್ಕಾಗಿ ಪ್ರಿಯರು, ಸಂಬಂಧಿಕರು ಮನೆ ಹತ್ತಿರ ಬರುವ ಸಾಧ್ಯತೆ ಇದೆ
ನಯವಾಗಿ, ಸಮಾಧಾನದಿಂದ ಅವರೊಂದಿಗೆ ವ್ಯವಹರಿಸಿ
ಲಕ್ಷ್ಮೀವಾಸುದೇವ ಮಂತ್ರವನ್ನು ಜಪಿಸಬೇಕು
ಮಕರ ರಾಶಿ
ವೃತ್ತಿಯಲ್ಲಿ ನಿಮ್ಮ ಗುರಿಯನ್ನು ನಿರಾಯಾಸವಾಗಿ ತಲುಪುತ್ತೀರಿ
ನಿಮ್ಮ ಕೆಲಸದಲ್ಲಿ ಯಾವತ್ತೂ ಹಿಂಜರಿಯಬೇಡಿ ಯಶಸ್ಸು ನಿಮ್ಮದಾಗುತ್ತೆ
ಆಂತರಿಕ ಶತ್ರುಗಳಿಂದ ಅಡಚಣೆ ಉಂಟಾಗಬಹುದು ಎಚ್ಚರಿಕೆ ಇರಲಿ
ಕುಟುಂಬದಲ್ಲಿ ನಿಮ್ಮ ವ್ಯಯಕ್ತಿಕ ವಿಚಾರಗಳನ್ನ ಪ್ರದರ್ಶನ ಮಾಡಿ ಬೇಸರಕ್ಕೆ ಗುರಿಯಾಗುತ್ತೀರಿ
ಸತ್ಯಶೋಧನೆಯಿಂದ ಉಂಟಾಗುವ ಆಂತರಿಕ ಗೊಂದಲಗಳು ಇಂದು ನಿವಾರಣೆಯಾಗುತ್ತವೆ
ಜಗನ್ಮೋಹನ ಮಂತ್ರವನ್ನು ಪಠಿಸಬೇಕು
ಕುಂಭ ರಾಶಿ
ವಾಹನಗಳ ಬಿಡಿ ಭಾಗಗಳನ್ನು ಮಾರಾಟ ಮಾಡುವವರಿಗೆ ಶುಭಫಲವಿದೆ
ಯಂತ್ರೋಪಕರಣಗಳನ್ನ, ವಾಹನಗಳನ್ನ ಬಾಡಿಗೆಗೆ ಕೊಡುವವರಿಗೆ ಉತ್ತಮ ದಿನ
ಪ್ರೇಮಿಗಳಿಗೆ ಬಹಳ ಹಿನ್ನಡೆಯ ದಿನವಾಗಲಿದೆ
ನಿಮ್ಮ ತೀರ್ಮಾನಗಳು ಭವಿಷ್ಯಕ್ಕೆ ಬುನಾದಿಯಾಗುವ ದಿನ
ಮಕ್ಕಳ ವಿಚಾರದಲ್ಲಿ ವಾದ-ವಿವಾದಗಳಿಂದ ಬೇಸರವಾಗುವ ಸಂಭವ
ಮಾನಸಿಕವಾಗಿ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ
ಗೋಪಾಲ ಕೃಷ್ಣನನ್ನು ಪ್ರಾರ್ಥನೆ ಮಾಡಬೇಕು
ಮೀನ ರಾಶಿ
ನಿಮ್ಮ ಆಕರ್ಷಕ ವ್ಯಕ್ತಿತ್ವ ಇತರರಿಗೆ ಸಂತೋಷವನ್ನುಂಟುಮಾಡತ್ತದೆ
ನಿಮ್ಮ ನಿರ್ಧಾರ ಬೇರೆಯವರಿಗೆ ಮಾದರಿಯಾಗಿ ಪ್ರಶಂಸೆಗೆ ಪಾತ್ರರಾಗುತ್ತೀರಿ
ನಿಮ್ಮ ಜೀವನದಲ್ಲಿ ಬದಲಾವಣೆಯ ಘಟ್ಟ ಎನ್ನಬಹುದು
ನೌಕರಿಯಲ್ಲಿ ಪ್ರಗತಿ ಕಾಣುವ ದಿನವಾಗಿದೆ
ಅಪೇಕ್ಷಿಸಿದ ಸ್ಥಳಕ್ಕೆ ವರ್ಗಾವಣೆಯಾಗುವುದರಿಂದ ಇಂದು ಸಂತೋಷವಾಗಿರುತ್ತೀರಿ
ವಿವಾದಾಸ್ಪದ ವಿಷಯಗಳಲ್ಲಿ ಹುಷಾರಾಗಿರಿ
ಶ್ವಾಸಕೋಶದ ಸಮಸ್ಯೆ ಉಂಟಾಗಬಹುದು ಜಾಗ್ರತೆ
ವಿದ್ಯಾರಾಜಗೋಪಾಲ ಮಂತ್ರ ಪಠಿಸಬೇಕು
