ಮಹಿಳಾ ಪೊಲೀಸ್ ಅಧಿಕಾರಿ ಸೊಂಟಕ್ಕೆ ಕೈ ಹಾಕಿದ ಕಾರ್ಯಕರ್ತ! ಸಿಟ್ಟಿಗೆದ್ದ ಮಹಿಳಾ ಪೊಲೀಸ್ ಅಧಿಕಾರಿ ಮಾಡಿದ್ದೇನು..?
1 min read
ಕೇರಳ : ಪ್ರತಿಭಟನೆಯಲ್ಲಿ ತಳ್ಳಾಟ , ನೂಕಾಟ ಅನ್ನೋದು ಸಾಮಾನ್ಯವಾಗಿ ಕಂಡು ಬರುತ್ತದೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕು. ಆದರೆ ಅದೇ ಪ್ರತಿಭಟನೆ ವೇಳೆ ಕಾರ್ಯಕರ್ತನೊಬ್ಬ ಮಹಿಳಾ ಪೊಲೀಸ್ ಅಧಿಕಾರಿಯ ಜೊತೆ ಅಸಭ್ಯವಾಗಿ ವರ್ತಿಸಿದ ಘಟನೆ ಕೇರಳದಲ್ಲಿ ಸಂಭವಿಸಿದೆ. ಪ್ರತಿಭಟನಾನಿರತ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆಯುವ ವೇಳೆ ಮಹಿಳಾ ಆಫೀಸರ್ ಎಂಟ್ರಿಯಾದರು. ಪ್ರತಿಭಟನಾಕಾರರನ್ನು ಹಿಡಿದು ಕರೆದುಕೊಂಡು ಹೋಗುವಾಗ ಹಿಂದಿನಿಂದ ಕಾರ್ಯಕರ್ತನೊಬ್ಬ ಮಹಿಳಾ ಅಧಿಕಾರಿ ಸೊಂಟಕ್ಕೆ ಕೈ ಹಾಕಿದ್ದಾನೆ.
ಮಹಿಳಾ ಅಧಿಕಾರಿ ಕಾರ್ಯಕರ್ತನ ಕೈಯನ್ನು ತಳ್ಳಿ ದೂರವಾದರೂ ಮತ್ತೆ ಹತ್ತಿರ ಬಂದ ಆ ವ್ಯಕ್ತಿ ಅಸಭ್ಯವಾಗಿ ವರ್ತಿಸಿದ್ದಾನೆ. ಕೊನೆಗೆ ಸಿಟ್ಟಿಗೆದ್ದ ಮಹಿಳಾ ಅಧಿಕಾರಿ ಹಿಡಿದಿದ್ದ ವ್ಯಕ್ತಿಯನ್ನು ಬಿಟ್ಟು ಸೊಂಟಕ್ಕೆ ಕೈ ಹಾಕಿದವನ್ನು ಮೊದಲು ಹಿಡಿದು ಪೊಲೀಸ್ ಜೀಪ್ ಹತ್ತಿಸಿದರು. ಮಹಿಳಾ ಪೊಲೀಸ್ ಅಧಿಕಾರಿ ಜೊತೆ ಅಸಭ್ಯವಾಗಿ ವರ್ತಿಸಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯುವಕನ ವರ್ತನೆಗೆ ಜನರಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.
