ಇನ್ಸ್ಟಾಗ್ರಾಂ ನಲ್ಲೇ ಪತ್ನಿಯ ಮದುವೆ ನೋಡಿ ಶಾಕ್ ಆದ ಪತಿ ಮತ್ತು ಕುಟುಂಬ
1 min read
https://youtu.be/r-9L1Crc_uE?si=UGGuCeKb_D6q7jIO
ನೆಲಮಂಗಲ : ಮದುವೆಯಾಗಿ 13 ವರ್ಷದ ನಂತರ ಇನ್ ಸ್ಟಾಗ್ರಾಮ್ ಪರಿಚಯವಾದವನೊಂದಿಗೆ ಪತ್ನಿ ಎಸ್ಕೇಪ್ ಆಗಿ, ಎರಡನೇ ಮದುವೆಯಾಗಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ನಡೆದಿದೆ. ನೇತ್ರಾವತಿ ಎಂಬಾಕೆ ಜಕ್ಕಸಂದ್ರದ ರಾಘವೇಂದ್ರ ನಗರ ನಿವಾಸಿಯಾದ ರಮೇಶ್ ಎಂಬುವರನ್ನು ಮದುವೆಯಾಗಿ 13 ವರ್ಷವಾಗಿತ್ತು. ಒಬ್ಬ ಮಗ ಕೂಡ ಇದ್ದಾನೆ. ಕಳೆದ 1 ವಾರದ ಹಿಂದೆ ಇನ್ ಸ್ಟಾದಲ್ಲಿ ನೇತ್ರಾವತಿಗೆ ಸಂತೋಷ್ ಎಂಬಾತನ ಪರಿಚಯವಾಗಿತ್ತು. ಈ ಪರಿಚಯವು ಪ್ರೀತಿಗೆ ತಿರುಗಿತ್ತು. ನೇತ್ರಾವತಿಯು ಕೆಲವೇ ದಿನಗಳ ಪ್ರೀತಿಗಾಗಿ ಮೊದಲ ಪತಿಗೆ ಕೈಕೊಟ್ಟು, ಸಂತೋಷ್ ಜೊತೆ ದೇವಾಲಯಲ್ಲಿ ಎರಡನೇ ಮದುವೆಯಾಗಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಈ ಮದುವೆಯ ವಿಡಿಯೋವನ್ನು ನೋಡಿ ಮೊದಲ ಪತಿ ಶಾಕ್ ಆಗಿದ್ದಾರೆ. ಪೊಲೀಸರ ಭದ್ರತೆಯಲ್ಲಿ ಬಟ್ಟೆ ಹಾಗೂ ಇನ್ನಿತರ ವಸ್ತುಗಳನ್ನ ತೆಗೆದುಕೊಂಡು ಹೋಗಲು ಮನೆ ಬಳಿ ಬಂದ ನೇತ್ರಾವತಿಗೆ ಸ್ಥಳೀಯರು ಕ್ಲಾಸ್ ತೆಗೆದುಕೊಂಡಿದ್ದಾರೆ. ನೇತ್ರಾವತಿ ವಿರುದ್ಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿ ಹಾಗೂ ಆತನ ಕುಟುಂಬ ದೂರು ನೀಡಿ ಆಕ್ರೋಶ ಹೊರಹಾಕಿದ್ದಾರೆ.
