ಪನ್ನೀರ್ ತಿನ್ನೋ ಮುನ್ನ ಹುಷಾರ್… ಬೆಚ್ಚಿ ಬೀಳಿಸುವ ಅಂಶ ಬಯಲು..!
1 min read
ಬೆಂಗಳೂರು : ಹುಷಾರ್.. ಹುಷಾರ್.. ಗೋಬಿ, ಕಬಾಬ್, ಇಡ್ಲಿ, ಹಸಿರು ಬಟಾಣಿ ಬಳಿಕ ಇದೀಗ ಪನ್ನೀರ್ ಕೂಡ ಶುದ್ಧವಾಗಿಲ್ಲ ಅನ್ನೋ ಅಂಶ ಹೊರ ಬಿದಿದೆ. . ಸಸ್ಯಹಾರಿಗಳ ಫೆವರೇಟ್ ಪನ್ನೀರ್ ಕಲುಷಿತಗೊಂಡಿದ್ದು, ಪನ್ನೀರಿನ ಅಸಲಿ ಘಮದ ಹಿಂದೆ ಕೂಡ ಕೆಮಿಕಲ್ನ ಕೆಟ್ಟ ವಾಸನೆ ಅಡಗಿರೋದು ಇದೀಗ ರಿಪೋರ್ಟ್ನಲ್ಲಿ ರಿವೀಲ್ ಆಗಿದೆ. ಇಡ್ಲಿಗೆ ಪ್ಲಾಸ್ಟಿಕ್ ಕವರ್ ಡೇಂಜರ್, ಗೋಬಿಗೆ ಕಲರ್ ಮಿಕ್ಸಿಂಗ್, ಕಬಾಬ್‌ಗೆ ಬಣ್ಣ ಹಾಕಿದ್ರೆ ಹುಷಾರ್. ಇದೀಗ ಇದೇ ಲಿಸ್ಟ್‌ಗೆ ಮತ್ತಷ್ಟು ಆಹಾರ ಪದಾರ್ಥ ಸೇರ್ಕೊಂಡಿದೆ. ಅದು ಪನ್ನೀರ್, ಪನ್ನೀರ್ ಕೂಡ ಡೇಂಜರ್ ಅನ್ನೋದು ಲ್ಯಾಬ್ ರಿಪೋರ್ಟ್ನಲ್ಲಿ ಬಯಲಾಗಿದೆ.
ಪನ್ನೀರ್ನಲ್ಲಿ ಕೂಡ ಕ್ಯಾಲ್ಸಿಯಂ ಹಾಗೂ ಫ್ರೋಟೀನ್ ಅಂಶ ಕಡಿಮೆ ಇರೋದು ಇದೀಗ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ನಡೆಸಿದ ರಿಪೋರ್ಟ್ನಿಂದ ರಿವೀಲ್ ಆಗಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಕಳೆದ ಕೆಲ ದಿನಗಳ ಹಿಂದೆ ರಾಜ್ಯದ 163 ಭಾಗಗಳಲ್ಲಿ ಪನ್ನೀರಿನ ಸ್ಯಾಂಪಲ್ ಕಲೆಕ್ಟ್ ಮಾಡಿ, ಅವುಗಳನ್ನ ಲ್ಯಾಬ್ ಟೆಸ್ಟ್ಗೆ ಒಳಪಡಿಸಲಾಗಿತ್ತು. ಇದೀಗ ಅವುಗಳ ರಿಪೋರ್ಟ್ ಹೊರ ಬಿದ್ದಿದ್ದು, ಪನ್ನೀರ್ ಸ್ವಾಫ್ಟ್ ಬರಲು ಕೆಲವೆಡೆ ಕೆಮಿಕಲ್ ಕಾರಕ ಕೃತಕ ಬಣ್ಣ ಬಳಕೆ ಮಾಡಿರೋದು ಲ್ಯಾಬ್ ರಿಪೋರ್ಟ್ನಲ್ಲಿ ರಿವೀಲ್ ಆಗಿದೆ.
ಪನ್ನೀರ್ನಲ್ಲಿ ಕ್ಯಾಲ್ಸಿಯಂ ಮತ್ತು ಫ್ರೋಟಿನ್ ಅಂಶ ಕಡಿಮೆ ಇರೋದರಿಂದ, ಇದು ಜನರ ಆರೋಗ್ಯದ ಮೇಲೆ ದುಷ್ಟಪರಿಣಾಮ ಬೀರುತ್ತಿದೆ. ಇಂತಹ ಪನ್ನೀರ್ ತಿನ್ನೋದರಿಂದ ಜನರಿಗೆ ಹಲವು ರೀತಿಯ ಆರೋಗ್ಯ ಸಮಸ್ಯೆ ಕೂಡ ಕಾಡಲಿದೆ. ಕಡಿಮೆ ಕ್ಯಾಲ್ಸಿಯಂ ಮತ್ತು ಫ್ರೋಟಿನ್ ಅಂಶ ಇರೋ ಪನ್ನೀರ್ ತಿನ್ನೋದರಿಂದ ಏನೇನ್ ಆರೋಗ್ಯ ಸಮಸ್ಯೆ ಕಾಡುತ್ತೆ ಅಂದ್ರೆ…
ಕೆಮಿಕಲ್ ಮಿಶ್ರಿತ ಪನ್ನೀರ್ ತಿನ್ನೋದರಿಂದ ಹೃದಯ ಸಂಬಂಧಿ ಖಾಯಿಲೆ ಉಂಟಾಗೋ ಸಾಧ್ಯತೆ ಇದೆ. ಇನ್ನೂ ಕೆಲವೆಡೆ ಪನ್ನೀರ್ ಸ್ವಾಫ್ಟ್ ಬರೋದಕ್ಕೆ ಕೆಮಿಕಲ್ ಬಳಕೆ ಮಾಡ್ತಿದ್ದು, ಇದು ಕ್ರೂರಿ ಕ್ಯಾನ್ಸರ್ಗೆ ಕಾರಣವಾಗಬಹುದುದೆಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕೆಮಿಕಲ್ ಮಿಶ್ರಿತ ಪನ್ನೀರ್ನಿಂದ ಕೊಬ್ಬಿನ ಪ್ರಮಾಣ ಹೆಚ್ಚಾಗೋದು ಮಾತ್ರವಲ್ಲ, ಕಿಡ್ನಿ ಸಮಸ್ಯೆ ಕೂಡ ಉಂಟಾಗಲಿದೆ ಅನ್ನೋ ಆತಂಕಕಾರಿ ಮಾಹಿತಿ ಕೂಡ ಇದೀಗ ಹೊರ ಬಿದ್ದಿದೆ. ಒಟ್ಟಿನಲ್ಲಿ ಜನರು ನಿತ್ಯ ತಿನ್ನುತ್ತಿದ್ದ ಆಹಾರವೇ ಇದೀಗ ಅನ್ಸೇಫ್ ಎಂದು ವರದಿ ಬರ್ತಿದ್ದು,ತಮ್ಮ ಸ್ವಾರ್ಥಕ್ಕಾಗಿ ಜನರ ಆರೋಗ್ಯದ ಮೇಲೆ ಚೆಲ್ಲಾಟವಾಡ್ತಿರೋರ ಮೇಲೆ ಅಧಿಕಾರಿಗಳು ಶಿಸ್ತು ಕ್ರಮ ಜರುಗಿಸುತ್ತಾರ ಅನ್ನೋದು ಕಾದು ನೋಡಬೇಕು…
