[t4b-ticker]

ಸಮುದ್ರಸೌತೆ ಒಂದೆರಡು ಸಿಕ್ಕರೆ ಕೋಟ್ಯಧೀಶರಾಗಬಹುದು..ಸಮುದ್ರ ಸೌತೆಕಾಯಿಯ ಬಗ್ಗೆ ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸುವಿರಾ? 

1 min read
Share it

ಭೂಮಿ ಮೇಲಿನ ಜೀವಿಗಿಂತ ನೀರಿನಲ್ಲಿರುವ ಜೀವಿಗಳು ಹೆಚ್ಚು ಔಷಧಿ ಗುಣ ಹೊಂದಿರುತ್ತವೆ ಎಂದು ತಿಳಿದ ಮಾನವರು ಅವುಗಳ ಮೇಲೆಯೂ ಪ್ರಭಾವ ಬೀರುತ್ತಾರೆ.. ಹೀಗೆ ಪ್ರಭಾವದಿಂದ ಕೆಲ ಜೀವಿಗಳು ಅಳಿವಿನಂಚಿನಲ್ಲಿವೆ. ಇದರಲ್ಲಿ ಸಮುದ್ರದ ಸೌತೆ ಕೂಡ ಒಂದಾಗಿದೆ.ಸಮುದ್ರದೊಳಗೆ ಇವುಗಳನ್ನು ನೋಡಿದರೆ ನಮಗೆ ನೆನಪಾಗೋದೆ ಸೌತೆಕಾಯಿ. ಇವು ಸೇಮ್ ಟು ಸೇಮ್ ಸೌತೆಕಾಯಿ ಇರುವಂತೆ ಇರುವುದರಿಂದ ಇವುಗಳನ್ನು ಸಮುದ್ರಸೌತೆ ಎಂದು ಕರೆಯುತ್ತಾರೆ.  ಇದ್ದು ತುಂಬಾ ಮೃದುವಾಗಿರುತ್ತವೆ.

 

ಜಲಚರ ಪರಿಸರ ವ್ಯವಸ್ಥೆಗೆ ಸಮುದ್ರ ಸೌತೆ ಬಹಳ ಮುಖ್ಯವಾಗಿದ್ದು ಪರಿಸರ ರಕ್ಷಣೆ ಮಾಡುತ್ತವೆ. ಸಮುದ್ರದ ಆಳದಲ್ಲಿ ಸ್ವಚ್ಛತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇದರ ಜೊತೆಗೆ ಇವುಗಳಲ್ಲಿ ಔಷಧೀಯ ಗುಣ ಇರುವುದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ಸಮುದ್ರ ಸೌತೆಗಳನ್ನ ಹೆಚ್ಚಾಗಿ ಚೀನಾ ಹಾಗೂ ದಕ್ಷಿಣ ಏಷ್ಯಾ ಭಾಗದಲ್ಲಿ ಔಷಧಕ್ಕಾಗಿ ಬಳಸಲಾಗುತ್ತದೆ. ಇವುಗಳನ್ನು ಮೀನಿನಂತೆ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಮನುಷ್ಯರಲ್ಲಿ ಹೆಚ್ಚುತ್ತದೆ. ಸಂಧಿವಾತ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಸಮುದ್ರಸೌತೆ ಉತ್ತಮ ಆಹಾರ ಎಂದು ಹೇಳಲಾಗುತ್ತದೆ. ಇತರ ಜೀವಿಗಳಿಗೆ ಹೋಲಿಸಿದರೆ ಇವು ಅಧಿಕ ಪ್ರಮಾಣದ ಪ್ರೋಟೀನ್ ಹೊಂದಿರುವುದರಿಂದ ಹೆಚ್ಚಾಗಿ ಶ್ರೀಮಂತರು ಆಹಾರವಾಗಿ ಸೇವಿಸುತ್ತಾರೆ. ಇದಲ್ಲದೆ ಸಮುದ್ರಸೌತೆಗಳ ಚರ್ಮ ಫ್ಯೂಕೋಸಿಲೇಟೆಡ್ , ಗ್ಲೈಕೋಸಾಮಿನೋಗ್ಲೈಕನ್  ಎಂಬ ರಾಸಾಯನಿಕವನ್ನು ಹೆಚ್ಚಿಗೆ ಹೊಂದಿರುತ್ತವೆ. ಇದೇ ರಾಸಾಯನಿಕ ಸಂಧಿವಾತದಂತಹ ಕೀಲು ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.

 

ಯುರೋಪ್​ ರಾಷ್ಟ್ರಗಳಲ್ಲಿ ಇವುಗಳನ್ನು ಕೆಲ ಕ್ಯಾನ್ಸರ್ ಚಿಕಿತ್ಸೆ ಹಾಗೂ ರಕ್ತ ಹೆಪ್ಪುಗಟ್ಟುವಿಕೆ ತಡೆಯಲು ಬಳಸಲಾಗುತ್ತದೆ. ಒಂದು ಕಾಲದಲ್ಲಿ ಆಹಾರದಲ್ಲಿ ಬಳಸಲಾಗುತ್ತಿದ್ದ ಇವುಗಳನ್ನು ಈಗ ಯೋರೋಪ್​ ರಾಷ್ಟ್ರಗಳಲ್ಲಿ ಔಷಧ ಕಂಪನಿಗಳಲ್ಲಿ ಉಪಯೋಗಿಸಲಾಗುತ್ತದೆ. ಇದರಿಂದಲೇ ಇವುಗಳಿಗೆ ಎಲ್ಲೆಡೆ ಭಾರೀ ಬೇಡಿಕೆ ಇದೆ. ಕೆಲ ದೇಶಗಳು ಹೆಚ್ಚಾಗಿ ಇವುಗಳನ್ನು ಬಳಸಿದ್ದರಿಂದ ಈ ಪ್ರಭೇದಗಳು ಅಳಿವಿನಂಚಿಗೆ ತಲುಪಿವೆ.

 

ಇಡೀ ಸಮುದ್ರಸೌತೆಗಳಲ್ಲೇ ಜಪಾನ್​ ಸಮುದ್ರಸೌತೆ ಬಹಳ ವಿಶಿಷ್ಟವಾಗಿರುತ್ತದೆ. ಇವು ವಿಶಿಷ್ಟ ಜೀವಿಗಳಾಗಿದ್ದರಿಂದ ಕೆಲವೊಮ್ಮೆ ಸಮುದ್ರ ಈಜುಪಟುಗಳು ತಮ್ಮ ಪ್ರಾಣಪಣಕ್ಕಿಟ್ಟು ಹಿಡಿಯಲು ನೀರಿನ ಆಳಕ್ಕೆ ಹೋಗ್ತಾರೆ. ಇವು ಭಾರತದಲ್ಲಿ ತಮಿಳುನಾಡಿನ ಕರಾವಳಿ ಪ್ರದೇಶ ಹಾಗೂ ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಮಾತ್ರ ತೀರ ಆಳದಲ್ಲಿ ಕಂಡುಬರುತ್ತವೆ. ಇವುಗಳ ಬೆಲೆ ಕೋಟಿ ಕೋಟಿ ರೂಪಾಯಿ ಆದರೂ ಭಾರತದಲ್ಲಿ ಮಾರಟ ಮಾಡುವಂತಿಲ್ಲ. ಆದರೆ ದೇಶ- ವಿದೇಶಗಳಲ್ಲಿ ಸಮುದ್ರಸೌತೆ ಬೆಲೆ ಮಾತ್ರ ಭಾರೀ ದುಬಾರಿ ಇದ್ದಿದ್ದರಿಂದ ಕಳ್ಳಸಾಗಣೆ ನಡೆಯುತ್ತಿರುತ್ತದೆ.ಸಮುದ್ರ ಸೌತೆ ಸಾಮಾನ್ಯ ಜೀವಿಯಂತೆ ಎಲ್ಲ ಕಡೆ ಕಂಡುಬರುವುದಿಲ್ಲ. ಒಂದೆರಡು ಸಿಕ್ಕರೂ ಇದು ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಬಹುದು. ನೂರಾರು ಕೆ.ಜಿಗಟ್ಟಲೇ ಸಿಕ್ಕರೇ ನೀವು ಕೋಟ್ಯಧೀಶರಾಗಬಹುದು. ಹೀಗಾಗಿಯೇ ಸಮುದ್ರ ಸೌತೆಗಳನ್ನ ವಿದೇಶಗಳಿಗೆ ಕಳ್ಳಸಾಗಣೆ ಮಾಡಲಾಗುತ್ತದೆ.

 

 

ಕೋಟಿ ಕೋಟಿ ರೂಪಾಯಿಗೆ ಬೆಲೆ ಬಾಳಿದರೂ ಭಾರತದ ಮಾರುಕಟ್ಟೆಯಲ್ಲಿ ಇವುಗಳನ್ನು ಮಾರಾಟ ಮಾಡುವಂತಿಲ್ಲ. ಸಂರಕ್ಷಿತ ಜೀವಿಗಳ ಜಾತಿಗಳ ಪಟ್ಟಿಗೆ ಸೇರಿಸಿದ್ದರಿಂದ ಮಾರಾಟ ಮಾಡಿದ್ರೆ ಕಾನೂನು ಬಾಹಿರವಾಗುತ್ತದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ಅವುಗಳನ್ನು ಹಿಡಿಯುವುದು, ಮಾರಾಟ ಮಾಡುವುದು, ರಫ್ತು ಮಾಡುವುದು ಕಾನೂನುಬಾಹಿರವಾಗಿದೆ. ಆದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇವುಗಳಿಗೆ ಬೇಡಿಕೆ ಇರುವುದರಿಂದ ಕಳ್ಳಸಾಗಣೆಕೆ ನಡೆಯುತ್ತಲೇ ಇರುತ್ತದೆ ಎಂದು ಹೇಳಲಾಗುತ್ತದೆ.

 

 

 

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?