[t4b-ticker]

9 ತಿಂಗಳ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ವನವಾಸ ಕೊನೆಗೂ ಅಂತ್ಯ..ಭೂಮಿಗೆ ಬಂದು ತಲುಪಿದ ಸುನೀತಾ ವಿಲಿಯಮ್ಸ್

1 min read
Share it

9 ತಿಂಗಳ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ವನವಾಸ ಕೊನೆಗೂ ಅಂತ್ಯವಾಗಿದೆ. ವಿಶ್ವದ ಕೋಟ್ಯಾಂತರ ಜನರ ಪ್ರಾರ್ಥನೆ ಫಲಿಸಿದೆ. ಕೊನೆಗೂ ಸುನೀತಾ ವಿಲಿಯಮ್ಸ್​ ಹಾಗೂ ಬಿಲ್ ವಿಲ್ಮೋರ್​ ಸುರಕ್ಷಿತವಾಗಿ ಫ್ಲೋರಿಡಾದ ಕರಾವಳಿಗೆ ಬಂದು ತಲುಪಿದ್ದಾರೆ. ನಾಸಾ ತನ್ನ ಸಪ್ತ ಸವಾಲುಗಳನ್ನು ಅಂದುಕೊಂಡಂತೆ ಎದುರಿಸಿ ಗೆದ್ದಿದೆ.

 

ಗಲ್ಫ್​ ಆಫ್​ ಮೆಕ್ಸಿಕೋ ಸಮುದ್ರ- ಅಂಟ್ಲಾಟಿಕ್ ಸಮುದ್ರದ ನಡುವೆ ಡ್ರ್ಯಾಗನ್ ಕ್ಯಾಪ್ಸುಲ್ ಟಚ್​ಡೌನ್ ಮಾಡುವ ಸವಾಲು ನಾಸಾದ ಎದುರಿಗಿತ್ತು. ಅದರಂತೆ ಈಗ ಕ್ಯಾಪ್ಸುಲ್ ಟಚ್​ಡೌನ್ ಆಗಿದೆ. ನಿಗದಿತ ಜಾಗದಲ್ಲಿಯೇ ಆಗಿದ್ದು ಇನ್ನೊಂದು ಸಾಧನೆ. ಟಚ್​ಡೌನ್ ಆದ ಸ್ಥಳದಲ್ಲಿಯೇ ಗಂಟೆಗೆ 17 ಕಿಲೋ ಮೀಟರ್​ಗಿಂತ ವೇಗವಾಗಿ ಬೀಸುವ ಗಾಳಿ ಇರಬಾರದಿತ್ತು. ಹವಾಮಾನ ವಿಜ್ಞಾನಿಗಳಿಗೆ ಸಹಕಾರ ನೀಡಿದೆ. ಇನ್ನು ಗುಡುಗು ಮಿಂಚು ಕೂಡ ಇರಲಾರದ ಸ್ಥಿತಿಯೂ ಇದ್ದ ಕಾರಣ ಟಚ್​ಡೌನ್ ಸರಳವಾಗಿದೆ. ಮೆಕ್ಸಿಕೋ ಸಮುದ್ರದಲ್ಲಿ 7 ಡಿಗ್ರಿಗಿಂತ ಹೆಚ್ಚಿನ ಪ್ರಮಾಣದ ಅಲೆಗಳು ಕೂಡ ಇರಲಿಲ್ಲ. ಸ್ಪೆಸ್ ಎಕ್ಸ್​ ಬಾಹ್ಯಾಕಾಶ ನೌಕೆ ಟಚ್​ಡೌನ್​ಗೆ ಸ್ಪಷ್ಟವಾದ ವೇಳೆಯ ಅವಕಾಶವಿತ್ತು. ಲ್ಯಾಂಡಿಂಗ್​ಗೆ ಸರಿಯಾದ ತಾಪಮಾನವೂ ಕೂಡ ಇತ್ತು. ಲ್ಯಾಂಡಿಂಗ್​ಗೆ ಇದ್ದ ಸಪ್ತ ಸವಾಲುಗಳನ್ನು ಮೀರಿ ಸೇಫಾಗಿ ಈಗ ಉಭಯ ಗಗನಯಾತ್ರಿಗಳು ಭೂಮಿಯನ್ನು ತಲುಪಿದ್ದಾರೆ.

 

ಇನ್ನು ಸಮುದ್ರಕ್ಕೆ ಕ್ಯಾಪ್ಸೂಲ್ ಬದ್ದ ತಕ್ಷಣ ಮುಂದಿನ ಕಾರ್ಯಾಚರಣೆ ಶುರುವಾಯಿತು. 4 ಲೇವಲ್ ಬ್ಯಾಕಪ್ ಮೂಲಕ ಕಾರ್ಯಚರಣೆ ಆರಂಭಗೊಳ್ಳುತ್ತದೆ. ಟಚ್​ಡೌನ್​ ವೇಳೆ ಒಟ್ಟು 2 ಶಿಪ್​ಗಳು ಸಮುದ್ರದ ಸನಿಯ ರೆಡಿಯಿಡಲಾಗಿರುತ್ತದೆ. ಹಡಗಿನ ಕಮ್ಯೂನಿಕೇಷನ್ ವ್ಯವಸ್ಥೆ ಮತ್ತು ರೆಡಾರ್ ಸಿಸ್ಟಮ್​ನ್ನು ಪ್ರಮುಖ ಪಾತ್ರವಹಿಸುತ್ತವೆ. ಸಮುದ್ರಕ್ಕೆ ಕ್ಯಾಪ್ಸೂಲ್  ಬಿದ್ದ ತಕ್ಷಣ ಮುಂದಿನ ಹಂತದ ಕಾರ್ಯಾಚರಣೆ ಶುರುವಾಗುತ್ತದೆ. ಟಚ್​ಡೌನ್ ವೇಳೆಗೆ ಒಟ್ಟು 2 ಶಿಪ್​ಗಳು ಸಮುದ್ರದ ಸನಿಹ ರೆಡಿ ಇರಬೇಕು. ಹಡಗು ಮಾತ್ರವಲ್ಲದೇ ಹೆಲಿಕಾಪ್ಟರ್ಸ್‌ ಕೂಡ ಸಮುದ್ರದ ದಡದಲ್ಲಿ ಸಜ್ಜಾಗಿರುತ್ತೆ. ಸಮುದ್ರಕ್ಕೆ ಕ್ಯಾಪ್ಸೂಲ್ ಬಿದ್ದ ಬಳಿಕ ಸಜ್ಜಾಗಿರೋ ಹಡಗಿನ ಮೂಲಕ ರಕ್ಷಣೆ.

 

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?