ವೈದ್ಯಕೀಯ ಲೋಕದಲ್ಲಿ ಮತ್ತೊಂದು ವಿಸ್ಮಯ..ಕೃತಕ ಹೃದಯದೊಂದಿಗೆ ಬದುಕಿದ ವ್ಯಕ್ತಿ
1 min read
https://youtu.be/ceCpgXtn_Ek?si=aieXbat0ynxG2jdo
ಆಸ್ಟ್ರೇಲಿಯಾದಲ್ಲೊಂದು ವೈದ್ಯಕೀಯ ವಿಸ್ಮಯ ನಡೆದಿದೆ. ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿ ಒಬ್ಬ ವ್ಯಕ್ತಿ ಕೃತಕ ಹೃದಯ ಅಳವಡಿಸಿಕೊಂಡು ನೂರು ದಿನ ಬದುಕಿದ ಘಟನೆಯೊಂದು ಜರುಗಿತ್ತು. ಇದು ಇತಿಹಾಸದಲ್ಲಿಯೇ ಮೊದಲ ಬಾರಿ ಘಟಿಸಿದ ಅದ್ಭುತ ಎಂದೇ ಬಣ್ಣಿಸಲಾಗುತ್ತಿದೆ. ಹೆಸರು ಬಹಿರಂಗಪಡಿಸಲಾಗದ ವ್ಯಕ್ತಿಯೊಬ್ಬನ್ನಿಗೆ ನೂರು ದಿನಗಳ ಹಿಂದೆ ಟೈಟಾನಿಯಮ್ ಕೃತಕ ಹೃದಯವನ್ನು ಅಳವಡಿಸಲಾಗಿತ್ತು. ಕೃತಕ ಟೈಟಾನಿಯಮ್ನಿಂದ ತಯಾರಿಸಲಾದ ಹೃದಯವನ್ನು ದೇಹದಲ್ಲಿ ಇಟ್ಟುಕೊಂಡು ನೂರು ದಿನಗಳ ಕಾಲ ಬದುಕಿದ್ದಾನೆ. ಈತ ಜಗತ್ತಿನಲ್ಲಿ ಹೀಗೆ ಕೃತಕ ಹೃದಯದಿಂದ ಬದುಕಿದ 6ನೇ ವ್ಯಕ್ತಿ ಹಾಗೂ ಆಸ್ಟ್ರೇಲಿಯಾದ ಮೊದಲ ವ್ಯಕ್ತಿ ಎಂದು ಹೇಳಲಾಗುತ್ತಿದೆ.
40 ವರ್ಷದ ನ್ಯೂ ಸೌತ್ ವೇಲ್ಸ್ನ ರೋಗಿಯೊಬ್ಬನಿಗಾಗಿ ಸಿಡ್ನಿಯ ಎಸ್ಟಿ ವಿನ್ಸೆಂಟ್ ಆಸ್ಪತ್ರೆಯಲ್ಲಿ BiVACOR ಸಾಧನವನ್ನು ತರೆಸಿಕೊಳ್ಳಲಾಗಿತ್ತು. ಸುಮಾರು 6 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ಸರ್ಜನ್ ಪೌಲ್ ಜನ್ಸ್ ಕೃತಕ ಹೃದಯನ್ನು ಕಸಿ ಮಾಡಿದ್ದರು. ಈ ಒಂದು ಶಸ್ತ್ರ ಚಿಕಿತ್ಸೆ ಕಳೆದ ವರ್ಷ ನವೆಂಬರ್ನಲ್ಲಿ ನಡೆದಿತ್ತು. ಹೀಗೆ ಟೈಟಾನಿಯಂನಿಂದ ಸಿದ್ಧಗೊಂಡ ಹೃದಯವನ್ನು ಅಳವಡಿಸಿಕೊಂಡ ವ್ಯಕ್ತಿ 100 ದಿನಗಳ ಕಾಲ ಆರೋಗ್ಯವಾಗಿಯೇ ಇದ್ದ ಎಂದು ವೈದ್ಯರು ಹೇಳುತ್ತಿದ್ದಾರೆ.
ವೈದ್ಯರು ಹೇಳುವ ಪ್ರಕಾರ ಈ ಒಂದು ಶಸ್ತ್ರಚಿಕಿತ್ಸೆಯನ್ನು ಮಾಡಲು ಅವರು ಸುಮಾರು ಒಂದು ವರ್ಷದಿಂದ ತಯಾರಿ ನಡೆಸಿದ್ದರಂತೆ. ಆಸ್ಟ್ರೇಲಿಯಾದ ಮೊದಲ ವ್ಯಕ್ತಿಯೊಬ್ಬನಿಗೆ ಕೃತಕ ಹೃದಯ ಅಳವಡಿಸುವಲ್ಲಿ ನಾವು ಯಶಸ್ವಿಯಾಗಿದ್ದಕ್ಕೆ ನಮಗೆ ತುಂಬಾ ಹೆಮ್ಮೆಯಿಂದೆ ಎನ್ನುತ್ತಾರೆ ಸರ್ಜನ್ ಪೌಲ್
ವ್ಯಕ್ತಿ ಕೃತಕ ಹೃದಯ ಸಾಧನವನ್ನು ಅಳವಡಿಸಿಕೊಂಡು ಹೋಗುವಾಗ ಯಾವುದೇ ದೊಡ್ಡ ಮಟ್ಟದ ಸಮಸ್ಯೆಗಳು ಕಾಣಿಸಿಕೊಳ್ಳಲಿಲ್ಲ. ಈ ತಿಂಗಳು ಆತ ದಾನಿಗಳಿಂದ ಮಾನವ ಹೃದಯವನ್ನು ಪಡೆದುಕೊಂಡ. ಕಳೆದ ವಾರ ಅದನ್ನೂ ಕೂಡ ಅಳವಡಿಸುವ ಮೂಲಕ ದೊಡ್ಡಮಟ್ಟದ ವೈದ್ಯಕೀಯ ಯಶಸ್ಸನ್ನು ನಾವು ಸಾಧಿಸಿದ್ದೇವೆ ಎಂದ ಆಸ್ಪತ್ರೆಯ ಸಿಬ್ಬಂದಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ.
ಈ ಒಂದು ಸಾಧನವನ್ನು ಆವಿಷ್ಕರಿಸಿದ್ದು ಕ್ವೀನ್ಸ್ಲ್ಯಾಂಡ್ ಡಾ. ಡೆನೀಲ್ ಟಿಮ್ಸ್ ಎಂಬುವವರು. BiVACOR ಎಂಬುದು ಹೃದಯದ ರೀತಿ ಕೆಲಸ ಮಾಡುವ ಒಂದು ರಿಪ್ಲೆಸ್ಮೆಂಟ್ ಸಾಧನ. ಇದು ಮನುಷ್ಯನನ್ನು ಅಸಲಿ ಹೃದಯವನ್ನು ಕಸಿ ಮಾಡುವವರೆಗೂ ಜೀವಂತವಾಗಿ ಇಡುವಲ್ಲಿ ಸಹಾಯಕವಾಗುತ್ತದೆ. ಇದು ಹೃದಯ ರೀತಿಯಲ್ಲಿಯೇ ರಕ್ತವನ್ನು ಪಂಪ್ ಮಾಡುವ ಕಾರ್ಯ ಮಾಡುತ್ತದೆ. ದೇಹದಲ್ಲಿ ನಿರಂತರ ರಕ್ತಚಲನೆ ಸಹಜವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ.
