[t4b-ticker]

ಚಿನ್ನಸ್ವಾಮಿ ಮೈದಾನದಲ್ಲಿ ಇವತ್ತು ಆರ್​​​ಸಿಬಿ ಕಹಳೆ.. ಹಾಡು, ಡಾನ್ಸ್​, ಕಲರ್​​ಫುಲ್ ಜೋಶ್‌​; ಫ್ಯಾನ್ಸ್​ಗೆ ಬಾಡೂಟ

1 min read
Share it

 

ಐಪಿಎಲ್​ ಆರಂಭವಾಗೋದು ಮಾರ್ಚ್​ 22ಕ್ಕೆ. RCB ಫಸ್ಟ್ ​ ಮ್ಯಾಚ್​ ಆಡೋದೂ ಮಾರ್ಚ್​ 22ಕ್ಕೆ.  ಬೆಂಗಳೂರಲ್ಲಿ ಫಸ್ಟ್​ ಮ್ಯಾಚ್​ ಇರೋದು ಎಪ್ರಿಲ್​ನಲ್ಲಿ.. ಆದ್ರೆ, ಇವತ್ತೇ ಚಿನ್ನಸ್ವಾಮಿ ಮೈದಾನದಲ್ಲಿ ಆರ್​​ಸಿಬಿ, ಆರ್​​ಸಿಬಿ ಎಂಬ ಕಹಳೆ ಮೊಳಗಲಿದೆ. ಅಖಾಡಕ್ಕಿಳಿಯೋಕು ಮುನ್ನವೇ ಫ್ಯಾನ್ಸ್​​ಗೆ ಜಬರ್ದಸ್ತ್​ ಎಂಟರ್​​ಟೈನ್​ಮೆಂಟ್​ ನೀಡಲು ಆರ್​ಸಿಬಿ ಸಜ್ಜಾಗಿದೆ. ಐಪಿಎಲ್​ ಜಾತ್ರೆಯ ಫೀವರ್ ಕ್ರಿಕೆಟ್​ ಲೋಕದಲ್ಲಿ​​ ಜೋರಾಗ್ತಿದೆ. ಸೀಸನ್​​ 18ರ ಟ್ರೋಫಿ ಗೆಲ್ಲೋ ಕನವರಿಕೆಯಲ್ಲಿರೋ ಫ್ರಾಂಚೈಸಿಗಳು ಟೂರ್ನಿಗೆ ಭರ್ಜರಿ ಸಿದ್ಧತೆ ನಡೆಸಿದೆ.  ಹೊಸ ಸೀಸನ್​ಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಕಸರತ್ತು ಕೂಡ ಜೋರಾಗಿದೆ. ಒಂದೆಡೆ ಆಟಗಾರರು ಟೂರ್ನಿಗೆ ಸಿದ್ಧತೆ ಆರಂಭಿಸಿದ್ರೆ, ಇನ್ನೊಂದೆಡೆ ಮ್ಯಾನೇಜ್​ಮೆಂಟ್, ಟೂರ್ನಿಗೂ ಮುನ್ನವೇ​ ಫ್ಯಾನ್ಸ್​ಗೆ ಫುಲ್​ ​ಟ್ರೀಟ್​ ಕೊಡಲು ಸಜ್ಜಾಗಿದೆ.

 

ಕಳೆದ 3 ಸೀಸನ್​ಗಳಂತೆ ಈ ಸೀಸನ್​ ಆರಂಭಕ್ಕೂ ಮುನ್ನ ಕೂಡ ಆರ್​​ಸಿಬಿ ಅನ್​ಬಾಕ್ಸ್​ ಇವೆಂಟ್​ ​ನಡೆಯಲಿದೆ. ಹೊಸ ಜೆರ್ಸಿ ರಿವೀಲ್​, ಹೊಸ ಆಟಗಾರರ ಸ್ವಾಗತ ಮಾಡೋದ್ರ ಜೊತೆಗೆ ಮಾಜಿ ಆಟಗಾರರಿಗೆ ಹಾಲ್​ ಆಫ್​ ಫೇಮ್​ ಗೌರವವನ್ನ ನೀಡಲಾಗುತ್ತೆ. ಎಬಿ ಡಿವಿಲಿಯನ್ಸ್​, ಕ್ರಿಸ್​ ಗೇಲ್​, ವಿನಯ್​ ಕುಮಾರ್​ ಬಳಿಕ ಹಾಲ್​ ಆಫ್​ ಫೇಮ್​ ಗೌರವ ಯಾರಿಗೆ ಒಲಿಯುತ್ತೆ ಅನ್ನೋದು ಈವರೆಗೂ ಸಸ್ಪೆನ್ಸ್​ ಆಗಿ ಉಳಿದಿದೆ. ಚಿನ್ನಸ್ವಾಮಿ ಅಂಗಳದಲ್ಲಿ ಎಂಟರ್​​ಟೈನ್​​ಮೆಂಟ್​ನ ಬಾಡೂಟ ಫ್ಯಾನ್ಸ್​ಗೆ ಕಾದಿದೆ. ಬೌಂಡರಿ, ಸಿಕ್ಸರ್​​ಗಳ ಮೇಳಕ್ಕೂ ಮುನ್ನ ಚಿನ್ನಸ್ವಾಮಿ ಮೈದಾನ ಇಂದು ಹಾಡು, ಡಾನ್ಸ್​ನ ಕಲರ್​​ಫುಲ್​ ಸಂಜೆಗೆ ಸಾಕ್ಷಿಯಾಗಲಿದೆ.

 

ನಾಳಿನ ಕಲರ್​ಫುಲ್​ ಇವೆಂಟ್​ನ ಮೇನ್​ ಅಟ್ರಾಕ್ಷನ್​​ ಈ ಟಿಮ್​ ಟ್ರಂಪೆಟ್​​.! ಆಸ್ಟ್ರೇಲಿಯಾ ಮೂಲದ ಇಂಟರ್​​ನ್ಯಾಷನಲ್​ ಡಿಜೆ, ಖ್ಯಾತ ಸಿಂಗರ್​​ ಟಿಮ್​​​ ಟ್ರಪೆಟ್ ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ಧೂಳೆಬ್ಬಿಸಲು ಸಜ್ಜಾಗಿದ್ದಾರೆ.

 

ಕನ್ನಡಿಗ ಸಂಜಿತ್​ ಹೆಗ್ಡೆ ಬ್ಯಾಂಡ್​​ ಕೂಡ ಆರ್​​ಸಿಬಿ ಇವೆಂಟ್​ನಲ್ಲಿ ಮೋಡಿ ಮಾಡಲು ರೆಡಿಯಾಗಿದೆ. ಸೂಪರ್​ ಶನಿವಾರದ ಬಂಪರ್​ ಇವೆಂಟ್​ನಲ್ಲಿ ಮೆಲೋಡಿ ಹಾಡಿನಿಂದ ಮೋಡಿ ಮಾಡಲು ಸಂಚಿತ್​​ ಸಜ್ಜಾಗಿದ್ದಾರೆ.

 

 

ಸಂಚಿತ್​ ಹೆಗ್ಡೆ ಮಾತ್ರವಲ್ಲ.. ಕನ್ನಡದ ಮತ್ತೊರ್ವ ಖ್ಯಾತ ಸಿಂಗರ್​ ಐಶ್ವರ್ಯ ರಂಗರಾಜನ್​ ಕೂಡ ಆರ್​​ಸಿಬಿ ಫ್ಯಾನ್ಸ್​ನ ಮೀಟ್​ ಮಾಡೋಕೆ ಬರ್ತಿದ್ದಾರೆ.
ಸಿಂಗರ್​, ಱಪರ್​ ಅಲೋಕ್​​ ಬಾಬು ಅಲಿಯಾಸ್​ ಆಲ್​​ ಒಕೆ ಕೂಡ ಪರ್ಫಾಮೆನ್ಸ್​ ನೀಡೋಕೆ ಆರ್​​ಸಿಬಿ ಇವೆಂಟ್​ಗೆ ಬರ್ತಿದ್ದಾರೆ.ಸ್ಟೇಜ್​​ ಪರ್ಫಾಮೆನ್ಸ್​ನಿಂದ ಯುವ ಜನತೆಯ ಮನಗೆದ್ದಿರೋ ಬೆಂಗಳೂರು ಮೂಲದ ಫ್ಯೂಷನ್​ ಬ್ಯಾಂಡ್​ ಸವಾರಿ ಟೀಮ್​ ಕೂಡ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಂಟೆಡೆನ್ಸ್​ ಹಾಕಲಿದೆ. ಸ್ಪೆಷಲ್​​ ಮಾಶಪ್​​ಗಳಿಂದ ಫ್ಯಾನ್ಸ್​ ಕಿಕ್​ ಹೆಚ್ಚಿಸೋಕೆ ಟೀಮ್​​ ಸವಾರಿ ಮೆಂಬರ್ಸ್​​ ರೆಡಿಯಾಗಿದ್ದಾರೆ.

 

ನಾಳಿನ ಕಲರ್​ಫುಲ್​ ಇವೆಂಟ್​ನ ಮೇನ್​ ಅಟ್ರಾಕ್ಷನ್​​ ಈ ಟಿಮ್​ ಟ್ರಂಪೆಟ್​​.! ಆಸ್ಟ್ರೇಲಿಯಾ ಮೂಲದ ಇಂಟರ್​​ನ್ಯಾಷನಲ್​ ಡಿಜೆ, ಖ್ಯಾತ ಸಿಂಗರ್​​ ಟಿಮ್​​​ ಟ್ರಪೆಟ್ ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ಧೂಳೆಬ್ಬಿಸಲು ಸಜ್ಜಾಗಿದ್ದಾರೆ. ಕನ್ನಡಿಗ ಸಂಜಿತ್​ ಹೆಗ್ಡೆ ಬ್ಯಾಂಡ್​​ ಕೂಡ ಆರ್​​ಸಿಬಿ ಇವೆಂಟ್​ನಲ್ಲಿ ಮೋಡಿ ಮಾಡಲು ರೆಡಿಯಾಗಿದೆ. ಸೂಪರ್​ ಶನಿವಾರದ ಬಂಪರ್​ ಇವೆಂಟ್​ನಲ್ಲಿ ಮೆಲೋಡಿ ಹಾಡಿನಿಂದ ಮೋಡಿ ಮಾಡಲು ಸಂಚಿತ್​​ ಸಜ್ಜಾಗಿದ್ದಾರೆ. ಸಂಚಿತ್​ ಹೆಗ್ಡೆ ಮಾತ್ರವಲ್ಲ.. ಕನ್ನಡದ ಮತ್ತೊರ್ವ ಖ್ಯಾತ ಸಿಂಗರ್​ ಐಶ್ವರ್ಯ ರಂಗರಾಜನ್​ ಕೂಡ ಆರ್​​ಸಿಬಿ ಫ್ಯಾನ್ಸ್​ನ ಮೀಟ್​ ಮಾಡೋಕೆ ಬರ್ತಿದ್ದಾರೆ. ಸಿಂಗರ್​, ಱಪರ್​ ಅಲೋಕ್​​ ಬಾಬು ಅಲಿಯಾಸ್​ ಆಲ್​​ ಒಕೆ ಕೂಡ ಪರ್ಫಾಮೆನ್ಸ್​ ನೀಡೋಕೆ ಆರ್​​ಸಿಬಿ ಇವೆಂಟ್​ಗೆ ಬರ್ತಿದ್ದಾರೆ.

 

ಪಾಪ್​ ಲೋಕದ ಹೊಸ ಸೆನ್ಸೇಷನ್​​, ಟ್ರೆಂಡ್​ ಸೆಟ್ಟರ್​ ಹನುಮಾನ್​ ಕೈಂಡ್​​ ಆರ್​​ಸಿಬಿ ಇವೆಂಟ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಧಾನಿ ಮೋದಿಯ ಮನವನ್ನೇ ಗೆದ್ದ ಈ ಮೋಡಿಗಾರ ಆರ್​​ಸಿಬಿ ಫ್ಯಾನ್ಸ್​ಗೂ ಜಬರ್ದಸ್ತ್ ಎಂಟರ್​​ಟೈನ್​​ಮೆಂಟ್​​ ನೀಡೋದು ಫಿಕ್ಸ್​..! ಪ್ರತಿ ಸೀಸನ್​ನಂತೆ ಈ ಸೀಸನ್​ ಆರಂಭಕ್ಕೂ ಮುನ್ನ ಫ್ಯಾನ್ಸ್​ಗೆ ಫುಲ್​ ಟ್ರೀಟ್​ ಕೊಡೋಕೆ ಆರ್​​ಸಿಬಿ ರೆಡಿಯಾಗಿದೆ. ಲಾಯಲ್​ ಫ್ಯಾನ್ಸ್​ ಫುಲ್​ ಎಕ್ಸೈಟ್​ಮೆಂಟ್​ನಿಂದ ಇಂವೆಂಟ್​ಗೆ ಕಾತುರರಾಗಿದ್ದು ಇವತ್ತು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​​ಸಿಬಿ ರಣಕಹಳೆ ಮೊಳಗೋದು ಪಕ್ಕಾ.!

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?