ಮಧುಮೇಹ ರೋಗಿಗಳಿಗೆ ಸಿಹಿ ಸುದ್ದಿ.. 60 ರೂಪಾಯಿಗೆ ಸಿಗ್ತಿದ್ದ 1 ಮಾತ್ರೆಯ ಬೆಲೆ ಈಗ 5 ರೂ!
1 min read
ಸಕ್ಕರೆ ಕಾಯಿಲೆ, ರೋಗಿಗಳು ನಿಟ್ಟುಸಿರು ಬಿಡುವ ಸುದ್ದಿಯೊಂದು ಸಿಕ್ಕಿದೆ. ರೋಗಿಗಳು ನುಂಗುತ್ತಿದ್ದ ಒಂದು ಮಾತ್ರೆಯ ಬೆಲೆ 60 ರೂಪಾಯಿಯಿಂದ 5 ರೂಪಾಯಿಗೆ ಭಾರೀ ಇಳಿಕೆಯಾಗಿದೆ.
ಆ ಮಾತ್ರೆ ಯಾವುದು ..?
ಮಧುಮೇಹಿಗಳು ಪ್ರಮುಖವಾಗಿ ಬಳಸುವ ಎಂಪಾಗ್ಲಿಪ್ಲೋಜಿನ್ (Empagliflozin) ಮಾತ್ರೆಯ ಬೆಲೆಯಲ್ಲಿ ಶೇಕಡಾ ೯೦ ರಷ್ಟು ಕಡಿತವಾಗಿದೆ. ಈ ಮೊದಲು 1 ಮಾತ್ರೆಗೆ ೬೦ ರೂಪಾಯಿ ಇತ್ತು. ಇದೀಗ ಅದರ ದರ ಕೇವಲ ೫ ರುಪಾಯಿ ಆಗಿದೆ.
ಏನು ಕಾರಣ ..?
ಎಂಪಾಗ್ಲಿಪ್ಲೋಜಿನ್ ಔಷಧದ ಮೇಲೆ ತಯಾರಿಕಾ ಕಂಪನಿಯಾದ ಬೋರಿಂಜರ್ ಇಂಗ್ಲಿಹೈಂ ಹೊಂದಿದ್ದ ಪೇಟೆಂಟ್ ಅವಧಿ ಮಾರ್ಚ್‌ಗೆ ಮುಕ್ತಾಯವಾಗಿದೆ. ಹೀಗಾಗಿ ಹಲವು ಕಂಪನಿಗಳು ಇದರ ಜನೆರಿಕ್ ಮಾದರಿಯ ಔಷಧಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರಿಂದ ಭಾರತದಲ್ಲಿನ ಕೋಟ್ಯಂತರ ರೋಗಿಗಳಿಗೆ ಬೆಲೆ ಇಳಿಕೆಯು ಹೆಚ್ಚು ಅನುಕೂಲವಾಗಲಿದೆ. ಇದು ತಿಂಗಳಿಗೆ ಭಾರೀ ಹಣ ಉಳಿಸಲಿದೆ. ದೆಹಲಿ ಮೂಲದ ಮ್ಯಾನ್‌ಕೈಂಡ್ ಫಾರ್ಮಾ ೧ ಮಾತ್ರೆಗೆ ೫.೫ ರೂ.ನಿಂದ ೧೩.೫ ರೂಪಾಯಿ ವರೆಗೆ ಇರಿಸಿದೆ. ಮುಂಬೈ ಮೂಲದ ಗ್ಲೆನ್‌ಮಾರ್ಕ್ ೧೧ ರೂಪಾಯಿನಿಂದ ೧೫ ರೂಪಾಯಿವರೆಗೆ ಬೆಲೆ ಇರಿಸಿದೆ. ಆಲೈಂ ಕಂಪನಿಯು ಮಾರುಕಟ್ಟೆ ದರಕ್ಕಿಂತ ಶೇಕಡಾ ೮೦ ರಷ್ಟು ಬೆಲೆ ಕಡಿಮೆ ಮಾಡಿದೆ.
