[t4b-ticker]

ಬಾಯಿಗೆ ರುಚಿ ಎಂದು ಎಲ್ಲಿ ಬೇಕೋ ಅಲ್ಲಿ  ಆಹಾರ ತಿಂದ್ರೆ ಹೊಟ್ಟೆ, ಅನ್ನನಾಳದ ಕ್ಯಾನ್ಸರ್ ಬರೋದು ಪಕ್ಕಾ..! -ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ವೈದ್ಯರು

1 min read
Share it

 

ಬಾಯಿಗೆ ರುಚಿ ಎಂದು ಎಲ್ಲಿ ಬೇಕೋ ಅಲ್ಲಿ ಅಶುಚಿ ಆಹಾರ ತಿನ್ನೋತ್ತಿದ್ದೀರಾ ? ಕಮ್ಮಿ ರೇಟ್​ಗೆ ಸಿಗುತ್ತದೆಂದು ಆಹಾರ ಪದಾರ್ಥಗಳ ಗುಣಮಟ್ಟ ನೋಡದೇ ಮನೆಗೆ ತಗೊಂಡು ಹೋಗುತ್ತಿದ್ದಿರಾ…  ಹಾಗಾದ್ರೆ ನಿಮಗೆ ಇಲ್ಲಿರುವ ಮಾಹಿತಿ ತುಂಬಾ ಮುಖ್ಯವಾಗಿದೆ.  ನಿಮಗೆ ಆ ಕಂಟಕ ಬರುವ ಮೊದಲು ಎಚ್ಚೆತ್ತುಕೊಳ್ಳಬೇಕು…. ಒಂದು ಕಡೆ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳ ಮೇಲೆ ಆಹಾರ ಮತ್ತು ಸುರಕ್ಷತೆ ಇಲಾಖೆ ಸಮರ ಸಾರಿದೆ. ಈ ಬೆನ್ನಲ್ಲೇ ಕಿದ್ವಾಯಿ ಆಸ್ಪತ್ರೆ ರಿಲೀಸ್​ ಮಾಡಿರುವ ಅದೊಂದು ರಿಪೋರ್ಟ್​ನಲ್ಲಿ ಶಾಂಕಿಂಗ್​ ಸತ್ಯ ಬಯಲಾಗಿದೆ.

ಹೊಟ್ಟೆ ಕ್ಯಾನ್ಸರ್ ಕಂಟಕ..

ರಾಜ್ಯದಲ್ಲಿ 2024-25ನೇ ಸಾಲಿನಲ್ಲಿ ಹೊಟ್ಟೆ ಕ್ಯಾನ್ಸರ್​​ ೨೫೬೪ (2,564 ) ಪುರುಷರಲ್ಲಿ, ೧೫೪೩ (1,543) ಮಹಿಳೆಯರಲ್ಲಿ ಕಾಣಿಸಿಕೊಂಡಿದೆ. ಇನ್ನೂ ಬೆಂಗಳೂರಿನಲ್ಲಿ ೪೫೦(450) ಪುರುಷರಲ್ಲಿ, ೨೬೨ (262) ಮಹಿಳೆಯರಲ್ಲಿ ಈ ಕ್ಯಾನ್ಸರ್​ ಪತ್ತೆಯಾಗಿದೆ.

ಕಳಪೆ ಆಹಾರ ಸೇವನೆಯಿಂದ ಕ್ಯಾನ್ಸರ್​ ಕಂಟಕ ಹೆಚ್ಚಳ..

ಕಳಪೆ ಆಹಾರ ಸೇವನೆಯಿಂದ ಕ್ಯಾನ್ಸರ್​ ಕಟಂಕ ಹೆಚ್ಚಳವಾಗಿದೆ. ಅದರಲ್ಲೂ ಪುರುಷರಲ್ಲೇ ಹೊಟ್ಟೆ ಮತ್ತು ಅನ್ನನಾಳದ ಕ್ಯಾನ್ಸರ್ ಹೆಚ್ಚು ಪತ್ತೆಯಾಗಿರೋದು ರಿಪೋರ್ಟ್​ನಲ್ಲಿ ಬಯಲಾಗಿದೆ. ೩೫-೬ ವರ್ಷದೊಳಗಿನ ಪುರುಷರಲ್ಲಿ ಈ ಕ್ಯಾನ್ಸರ್ ಹೆಚ್ಚಳವಾಗಿದೆ. ಆಹಾರದಲ್ಲಿ ಕಾರ್ಸಿನೋಜೆನಿಕ್ ಅಂಶ ಇರೋದರಿಂದ ಕ್ಯಾನ್ಸರ್​ ಹೆಚ್ಚಳವಾಗುತ್ತಿದೆ.

ಅನ್ನನಾಳದ ಕ್ಯಾನ್ಸರ್ ಕಂಟಕ..

ಇನ್ನೂ ಅನ್ನನಾಳದ ಕ್ಯಾನ್ಸರ್​ ರಾಜ್ಯದಲ್ಲಿ ಒಟ್ಟು೧,೬೯೬ (1,696) ಪುರುಷರು, ೧,೩೯೬ (1,396 ) ಮಹಿಳೆಯರಲ್ಲಿ ಪತ್ತೆಯಾಗಿದೆ. ಬೆಂಗಳೂರಲ್ಲಿ ೨೯೮ (298) ಪುರುಷರು, ೨೩೦ (230) ಮಹಿಳೆಯರಲ್ಲಿ ಕಾಣಿಸಿಕೊಂಡಿದೆ.

ಅನ್ನನಾಳದ ಕ್ಯಾನ್ಸರ್​ನಲ್ಲಿ ೪ ವಿಭಾಗದಲ್ಲಿ ಬರುತ್ತದೆ.

೧ ಮೊದಲನೆಯದು ವಯಸ್ಸು ಆಗುತ್ತಿದ್ದಂತೆ ಬರುತ್ತದೆ.

೨ ಕುಟುಂಬದಲ್ಲಿ ಈ ಮೊದಲು ಯಾರಲ್ಲಾದರೂ ಅನ್ನನಾಳದ ಕ್ಯಾನ್ಸರ್​ ಇದ್ರೆ ಈಗ ಬರುತ್ತದೆ.

೩ ಲೈಫ್​ಸ್ಟೈಲ್ ಅಭ್ಯಾಸದಿಂದಲೂ ಇದು ಬರುವ ಸಂಭವವಿದೆ.

೪ ವ್ಯಾಯಾಮ, ಆಟಗಳು ಕಡಿಮೆ ಇದ್ದಾಗ ಕ್ಯಾನ್ಸರ್ ಹೆಚ್ಚು ಬರುತ್ತದೆ.

೫ ಆಹಾರದಲ್ಲಿ ಹೆಚ್ಚು ಉಪ್ಪು ತಿಂದ್ರೆ, ನಾನ್​ವೆಜ್​ನಿಂದ ಕ್ಯಾನ್ಸರ್ ಬರುತ್ತದೆ.

 

ಡಾಕ್ಟರ್​ ಈ ಮೇಲೆ ಹೇಳಿದ್ದನ್ನ ಪಾಲನೆ ಮಾಡಿ. ನಿಮ್ಮ ಫುಡ್​ ಸ್ಟೈಲ್​ ಈ ರೀತಿ ಇದ್ರೆ, ಇವತ್ತೆ ಅದನ್ನ ಬದಲಿಸಿಕೊಂಡು ಕ್ಯಾನ್ಸರ್​ನಿಂದ ದೂರಾಗಿ, ಆರೋಗ್ಯವಂತರಾಗಿರಿ ಎಂದು ಡಾ.ನವೀನ್, ನಿರ್ದೇಶಕ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?