16ನೇ ಬಾರಿಗೆ ಬಜೆಟ್ ಮಂಡಿಸಿ ಸಿದ್ದರಾಮಯ್ಯ ದಾಖಲೆ.. ಸಿದ್ದು ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ
1 min read
ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರು ೧೬ ನೇ ಬಾರಿಗೆ ಬಜೆಟ್ ಮಂಡನೆ ಮಾಡುವ ಮೂಲಕ ಹೊಸ ದಾಖಲೆ ಮಾಡಿದ್ದಾರೆ. ವಿಧಾನಸಭಾ ಕಲಾಪದಲ್ಲಿ ಸಿದ್ದರಾಮಯ್ಯ ಬಜೆಟ್ ಮಂಡಿಸುತ್ತಿದ್ದು, 2025-26ನೇ ಸಾಲಿನ ಆಯವ್ಯಯವನ್ನು ಮಂಡಿಸುತ್ತಿದ್ದಾರೆ.
ಬಜೆಟ್ ಗಾತ್ರ ಎಷ್ಟಿದೆ..?
2025-26ನೇ ಸಾಲಿಗೆ ಒಟ್ಟು 2,92,477 ಕೋಟಿ ರೂಪಾಯಿಗಳ ರಾಜಸ್ವ ಸ್ವೀಕೃತಿಯನ್ನು ಅಂದಾಜಿಸಲಾಗಿದೆ. ಇದರಲ್ಲಿ 2,08,100 ಕೋಟಿ ರೂಪಾಯಿ ಸ್ವಂತ ತೆರಿಗೆ ರಾಜಸ್ವ, 16,500 ಕೋಟಿ ರೂಪಾಯಿ ತೆರಿಗೆಯೇತರ ರಾಜಸ್ವ ಬರುವ ನಿರೀಕ್ಷೆಯಲ್ಲಿ ಸರ್ಕಾರ ಇದೆ. ಇನ್ನು ಕೇಂದ್ರ ಸರ್ಕಾರದ ಸ್ವೀಕೃತಿಯಲ್ಲಿ 67,877 ಕೋಟಿ ರೂಪಾಯಿ ಹಣವನ್ನು ನಿರೀಕ್ಷೆ ಮಾಡಿದೆ.
ಸಾಲ ಎಷ್ಟು..?
2025-26ನೇ ಸಾಲಿಗೆ ಒಟ್ಟು 1,16,000 ಕೋಟಿ ರೂಪಾಯಿ ಸಾಲ ಮತ್ತು 170 ಕೋಟಿ ರೂಪಾಯಿಗಳ ಋಣೇತರ ಬಂಡವಾಳ ಸ್ವೀಕೃತಿ ಸಿಗಲಿದೆ ಎಂದು ಸಿದ್ದರಾಮಯ್ಯ ಅಂದಾಜಿಸಿದ್ದಾರೆ. ಈ ಎಲ್ಲಾ ಸ್ವೀಕೃತಿಗಳು ಸೇರಿ ಒಟ್ಟು 4,08,647 ಕೋಟಿ ಹಣ ಸರ್ಕಾರಕ್ಕೆ ಹರಿದು ಬರಲಿದೆ. ಬಜೆಟ್ನ ಒಟ್ಟು ಗಾತ್ರ 4,09,549 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
