ಸೋಮವಾರ- ರಾಶಿ ಭವಿಷ್ಯ ಪ್ರೆಭ್ರವರಿ-03,2025
1 min read
ಮೇಷ : ರಾಶಿನಿಮ್ಮ ಆತ್ಮವಿಶ್ವಾಸದಿಂದ ಎಲ್ಲ ಕೆಲಸಗಳಲ್ಲಿ ಜಯ ನಿಮ್ಮದಾಗಲಿದೆ. ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಬಡ್ತಿ ಸಿಗಬಹುದು. ನಿಮ್ಮ ನಿಮ್ಮ ಮಟ್ಟಕ್ಕೆ ಅನುಗುಣವಾಗಿ ನಿಮ್ಮ ಮರಿಯಾದೆ ಹೆಚ್ಚಾಗಲಿದೆ. ನಿಮ್ಮಲ್ಲಿರುವ ಪದಾರ್ಥಗಳನ್ನು ಮಾರಾಟ ಮಾಡುವುದರಿಂದ ಲಾಭವಿದೆ. ಮನೆಯವರ ಸಲಹೆ ತುಂಬಾ ಗಣನೀಯವಾಗುತ್ತದೆ. ಕಾಲಿಗೆ ನೋವಾಗುವ ಪೆಟ್ಟು ಬೀಳುವ ಸಾಧ್ಯತೆ ಇದೆ. ಚಾಮುಂಡೇಶ್ವರಿಯನ್ನು ಪ್ರಾರ್ಥನೆ ಮಾಡಬೇಕು.
ವೃಷಭ : ಯಾವುದೇ ಕೆಲಸದಲ್ಲಿ ನಿಮ್ಮ ಮನಸ್ಸನ್ನು ಕೇಂದ್ರೀಕರಿಸಲಾಗುವುದಿಲ್ಲ. ತಲೆ ನೋವು ಅಥವಾ ಮೈಗ್ರೇನ್ ಸಂಬಂಧಿಸಿದ ತೊಂದರೆ ಕಾಣಬಹುದು. ಹಳೆಯ ಸಂಪರ್ಕಗಳಿಂದ ಸಮಸ್ಯೆ ಉಂಟಾಗಬಹುದು. ಧೂಳು ಮತ್ತು ಸೂರ್ಯನ ಬೆಳಕಿನಿಂದ ಸಮಸ್ಯೆ ಕಾಡಬಹುದು. ಬೇರೆಯವರ ಭರವಸೆ ಮಾತುಗಳು ನಿಮಗೆ ಉಪಯೋಗಕ್ಕೆ ಬರುವುದಿಲ್ಲ. ಯೋಗ ಅಭ್ಯಾಸ ಮಾಡುವ ಬಗ್ಗೆ ಚಿಂತನೆ ಮಾಡಿ, ನಾರಾಯಣನನ್ನು ಪ್ರಾರ್ಥನೆ ಮಾಡಬೇಕು.
ಮಿಥುನ : ವಿವಾದಿತ ವಿಷಯಗಳಿದ್ದರೆ ಇಂದು ಇತ್ಯರ್ಥ ಮಾಡಿಕೊಳ್ಳಬಹುದು. ವಿದೇಶದಲ್ಲಿ ಅಧ್ಯಯನ ಮಾಡಬೇಕೆನ್ನುವವರಿಗೆ ಅನುಕೂಲವಿದೆ. ಪ್ರೇಮಿಗಳಿಗೆ ಸುದಿನ ಆದರೆ ಸುಳ್ಳು ಹೇಳಬಾರದು. ಕೌಟುಂಬಿಕ ಸಮಸ್ಯೆಗಳ ಬಗೆಹರಿಯುವ ಕಾಲ ಒದಗಿಬಂದಿದೆ. ವಿದ್ಯಾಭ್ಯಾಸದ ಸಾಲು ದೊರೆಯಬಹುದು ಸರಿಯಾಗಿ ವ್ಯವಹರಿಸಿ. ತಪ್ಪು ಮಾಹಿತಿ ದುಷ್ಪರಿಣಾಮ ಬೀರಬಹುದು. ಪಾರಿಜಾತ ಸರಸ್ವತಿಯನ್ನು ಆರಾಧನೆ ಮಾಡಿ.
ಕಟಕ : ಸಂಶೋಧಕರಿಗೆ, ವಿಜ್ಞಾನಿಗಳಿಗೆ ಶುಭದಿನ. ಕಾನೂನು ವಿಷಯಗಳಲ್ಲಿ ಹಲವು ತೊಡಕುಗಳು ಕಾಣಬಹುದು. ಪ್ರಕೃತಿ ವೀಕ್ಷಣೆ ಅಥವಾ ಪ್ರಾಣಿ ಸಂಕಲುವನ್ನ ವೀಕ್ಷಿಸಲು ಅವಕಾಶವಿದೆ. ಮನೆಯಲ್ಲಿ ಮಕ್ಕಳಿಗೆ ಅನಾರೋಗ್ಯದಿಂದ ಆತಂಕ ಉಂಟಾಗಬಹುದು. ವೈದ್ಯರ ಸಲಹೆ ಗಮನಿಸಿ ಮತ್ತೊಬ್ಬ ವೈದ್ಯರನ್ನು ಭೇಟಿ ಮಾಡಿ. ಇಂದ್ರಾಕ್ಷಿ ದೇವಿಯನ್ನು ಪ್ರಾರ್ಥನೆ ಮಾಡಬೇಕು.
ಸಿಂಹ : ಬೇರೆಯವರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಮೇಲಾಧಿಕಾರಿಗಳ ವರ್ತನೆ ಮನಸ್ಸಿಗೆ ನೋವುಂಟು ಮಾಡಬಹುದು. ಸಹೋದ್ಯೋಗಿಗಳಿಗೆ ನಿಮ್ಮ ಪರಿಸ್ಥಿತಿ ಅರ್ಥವಾದರೂ ಪ್ರಯೋಜನವಿಲ್ಲ. ಹೊಸ ಹೊಸ ಕೆಲಸಗಳಲ್ಲಿ ಆತ್ಮವಿಶ್ವಾಸದ ಕೊರತೆ ಕಾಡಬಹುದು. ತಂದೆಯವರ ಮಾತು ಮಾರ್ಗದರ್ಶನವಾಗಲಿದೆ ತಾತ್ಸಾರ ಮಾಡಬೇಡಿ. ವಿದ್ಯೆ, ಬುದ್ಧಿ ಮೀರಿ ಮಾನವೀಯತೆ ಮೆರೆಯಬೇಕಾಗುತ್ತದೆ. ಕಾಳಿದೇವಿಯನ್ನ ಪ್ರಾರ್ಥನೆ ಮಾಡಬೇಕು.
ಕನ್ಯಾ : ನಿಮ್ಮ ಅಸೂಯಾ ಪರವಾದ ಗುಣವನ್ನು ದೂರಮಾಡಿಕೊಳ್ಳಿ. ಹಿತೈಷಿಗಳು, ಸ್ನೇಹಿತರು ನಿಮ್ಮ ನ್ಯೂನ್ಯತೆಗಳನ್ನು ತಿಳಿಯುತ್ತಾರೆ. ಕಾರ್ಯಕ್ಷೇತ್ರದಲ್ಲಿ ಹೊಸ ಸಮಸ್ಯೆ ಎದುರಾಗಬಹುದು. ನಿಮ್ಮ ಮೇಲಿನವರು ನಿಮಗೆ ಹೆಚ್ಚಿನ ಜವಾಬ್ದಾರಿ ಕೊಟ್ಟು ಪರೀಕ್ಷಿಸಬಹುದು.ಕಠಿಣ ಪರಿಶ್ರಮಕ್ಕೆ ಪೂರ್ಣ ಪ್ರತಿಫಲ ಇರುವುದಿಲ್ಲ ಬೇಸರಪಡಬೇಡಿ. ಮಕ್ಕಳಿಗೆ ಶುಭವಿದೆ, ಮನೆಯಲ್ಲಿ ರಾತ್ರಿ ಸಮಾಧಾನಕರವಾಗಿರುತ್ತದೆ. ಕುಲದೇವತ ಆರಾಧನೆ ಮಾಡಬೇಕು.
ತುಲಾ : ವ್ಯಾವಹಾರಿಕವಾಗಿ ಉತ್ತಮ ಲಾಭ ಕಾಣಬಹುದು. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಒಳ್ಳೆಯದಲ್ಲ. , ಆತ್ಮಪ್ರಶಂಸೆ ಎರಡೂ ಈ ದಿನ ಬೇಡ. ಹಣ್ಣು ಬೆಳೆಗಾರರಿಗೆ ಮತ್ತು ವ್ಯಾಪಾರಿಗಳಿಗೆ ಶುಭವಿದೆ. ಆಸ್ತಿಕತೆಯ ಬಗ್ಗೆ ಪ್ರಶ್ನೆ ಮಾಡುವ ಮನಸ್ಥಿತಿ ಏರ್ಪಡುವ ಸಾಧ್ಯತೆ ಇದೆ. ದೃಢವಾದ ನಂಬಿಕೆ ಮಾತ್ರ ಕೆಲಸ ಮಾಡುವುದೆಂದು ಅರಿಯಬೇಕು. ಇಷ್ಟದೇವತಾ ಸ್ಮರಣೆ ಮಾಡಬೇಕು.
ವೃಶ್ಚಿಕ : ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಕಡಿಮೆ ರಕ್ತದೊತ್ತಡ ಇರುವವರಿಗೆ ತೊಂದರೆ ಕಾಣಬಹುದು ಎಚ್ಚರ. ಬೇರೆಯವರ ಆಲೋಚನೆ, ಮನಸ್ಥಿತಿ, ಪರಿಸ್ಥಿತಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ನಿರ್ದಿಷ್ಟ ವಿಚಾರಕ್ಕೆ ಸ್ನೇಹಿತರ ಮಧ್ಯೆ ಜಗಳವಾಗಬಹುದು. ಇರುವ ಹಣ, ಅಧಿಕಾರ, ವ್ಯವಸ್ಥೆಗಳಿಂದ ಅಹಂಕಾರ ಹೆಚ್ಚಾಗಬಹುದು. ವಾತಾವರಣ ವ್ಯತ್ಯಾಸದಿಂದ ಆರೋಗ್ಯದಲ್ಲಿ ವ್ಯತ್ಯಯ ಕಾಣಬಹುದು ಜಾಗ್ರತೆ. ಚಂಡಿಕಾ ಪರಮೇಶ್ವರಿಯನ್ನು ಆರಾಧನೆ ಮಾಡಬೇಕು.
ಧನಸ್ಸು : ಕಾರ್ಯಕ್ಷೇತ್ರದಲ್ಲಿ ಉತ್ತಮ ಸಾಧನೆ, ದಕ್ಷತೆ ತೋರುವಿರಿ. ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ. ನಿಮ್ಮ ಗುರಿಯ ಬಗ್ಗೆ ನಿಮಗೆ ಆಶ್ಚರ್ಯ ಕಾಣಬಹುದು.ನಿಮ್ಮ ಪ್ರಗತಿ ಎಲ್ಲವೂ ನಿಮ್ಮ ಪೂರ್ವ ಸುಕೃತವೆ ಸರಿ ಎಂದು ಅರಿಯಿರಿ. ನಿರಂತರ ಪ್ರಯತ್ನ ಈಗ ಫಲಿಸಲಿದೆ. ಮನಯವರೊಂದಿಗೆ ಪ್ರೀತಿ ವಿಶ್ವಾಸದಿಂದಿರಿ. ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಬೇಕು.
ಮಕರ :ನಿಮ್ಮ ಪೂರ್ವಿಕರು, ತಂದೆ ತಾಯಿ ಮಾಡಿದ ಪುಣ್ಯದಿಂದ ನಿಮಗೆ ಸುಖ, ನೌಕರಿಯಲ್ಲಿ, ವಿದ್ಯಾಭ್ಯಾಸದಲ್ಲಿ ಅತೀವ ಆಯಾಸ ಇರುತ್ತದೆ. ವ್ಯವಹಾರಕ್ಕಾಗಿ ಸಾಲ ಬೇಡ. ಹಳೆಯ ಸಾಲ ಮರುಪಾವತಿ ಮಾಡಲು ತೊಂದರೆಯಾಗಬಹುದು. ತಾಯಿಯ ಆರೋಗ್ಯವನ್ನು ಗಮನಿಸಿ. ಇಂದು ತಾಯಿ ಆಶೀರ್ವಾದ ನಿಮಗೆ ಬಹಳ ಮುಖ್ಯ. ಮಾತಾ ಲಲೀತಾ ಪರಮೇಶ್ವರಿಯನ್ನು ಆರಾಧನೆ ಮಾಡಬೇಕು.
ಕುಂಭ : ಚಿಕ್ಕಮಕ್ಕಳಿಗೆ ಸಮಸ್ಯೆ ಕಾಣಬಹುದಾದ ದಿನ. ಕೆಲಸದಲ್ಲಿ ನಿಮ್ಮ ಗುಣಮಟ್ಟ ಸುಧಾರಿಸುತ್ತದೆ. ಮೇಲಾಧಿಕಾರಿಗಳು ಹಾಗೂ ಮನೆಯವರೊಂದಿಗೆ ಅನ್ಯೋನ್ಯತೆ ಇರಲಿ. ಯಾವುದಾದರೂ ಸಂದರ್ಶನಗಳಿದ್ದರೆ ಶುಭವಿದೆ. ಸಮಾಜದಲ್ಲಿ ನಿಮ್ಮನ್ನು ಗೌರವಿಸುವ ಅವಕಾಶಗಳಿರುತ್ತವೆಗಣಪತಿಯನ್ನು ಪ್ರಾರ್ಥನೆ ಮಾಡಬೇಕು.
ಮೀನ : ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ತೋರುವಿರಿ ಆದರೆ ಕಾರ್ಯಗತ ಮಾಡುವುದಿಲ್ಲ. ಹಣದ ಖರ್ಚಿಗೆ ಹಿನ್ನಡೆ ತೋರುತ್ತೀರಿ ಅವಮಾನವಾಗುತ್ತದೆ. ಕುಟುಂಬದಲ್ಲಿರುವ ಚಿಕ್ಕ ವಯಸ್ಸಿನ ಮಗುವಿನ ಜೊತೆ ಸೌಹಾರ್ದತೆಯಿಂದ ವರ್ತಿಸಿ. ಮಗುವಿಗೆ ತೊಂದರೆ ನಿಮಗೆ ಅವಮಾನವಾಗುವ ಸಾಧ್ಯತೆಗಳಿವೆ. ತರಕಾರಿ ವ್ಯಾಪಾರಗಳಿಗೆ ಶುಭವಿದೆ. ವಾಹನಗಳಿಂದ ಜಾಗ್ರತೆವಹಿಸಿ ಆಂಜನೇಯ ಸ್ವಾಮಿಯನ್ನು ಸ್ಮರಣೆ ಮಾಡಬೇಕು.
