[t4b-ticker]

ಬೆಕ್ಕಿನಲ್ಲಿ ಕಂಡು ಬಂದಿರೋ H5N1 ಜ್ವರ ಪತ್ತೆ..ಬೆಕ್ಕಿನಿಂದಲೇ ಮನುಷ್ಯರಿಗೆ ಅಪಾಯ ಕಾದಿದೆ ಅನ್ನೋ ಸೂಕ್ಷ್ಮ ಎಚ್ಚರಿಕೆ..!

1 min read
Share it

 

ಇಡೀ ವಿಶ್ವದಲ್ಲೇ ತಲ್ಲಣ ಸೃಷ್ಟಿಸಿರುವ H5N1 (ಹಕ್ಕಿ ಜ್ವರ) ಭಾರತದಲ್ಲೂ ಪತ್ತೆಯಾಗುತ್ತಿದೆ. ಇದೇ ಮೊದಲ ಬಾರಿಗೆ ಸಾಕುಪ್ರಾಣಿ ಬೆಕ್ಕಿನಲ್ಲಿ ಹಕ್ಕಿಜ್ವರ ಕಂಡು ಬಂದಿರೋದು ದೃಢವಾಗಿದೆ. ಬೆಕ್ಕಿನಲ್ಲಿ ಕಂಡು ಬಂದಿರೋ H5N1 ಬಹಳ ಬೇಗ ಮನುಷ್ಯರಿಗೆ ಹರಡುವ ಸಾಧ್ಯತೆ ಇದ್ದು, ಆತಂಕಕ್ಕೂ ಕಾರಣವಾಗಿದೆ.ಭಾರತದಲ್ಲಿ H5N1 (ಹಕ್ಕಿ ಜ್ವರ) ಮೊದಲ ಪ್ರಕರಣ ಮಧ್ಯಪ್ರದೇಶದ ಛಿಂದ್ವಾರಾದಲ್ಲಿ ಪತ್ತೆಯಾಗಿದೆ. ಇದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುತ್ತಿರುವ ವಿಜ್ಞಾನಿಗಳು ಆತಂಕವನ್ನು ಹೊರ ಹಾಕಿದ್ದಾರೆ. 2024ರ ಡಿಸೆಂಬರ್‌ನಲ್ಲಿ ಈ ಹಕ್ಕಿ ಜ್ವರದಿಂದ ಹಲವಾರು ಬೆಕ್ಕುಗಳು ಪ್ರಾಣ ಬಿಟ್ಟಿದ್ದವು. ಸಾಕು ಪ್ರಾಣಿ ಬೆಕ್ಕಿನಿಂದಲೇ ಮನುಷ್ಯರಿಗೆ ಅಪಾಯ ಕಾದಿದೆ ಅನ್ನೋ ಸೂಕ್ಷ್ಮ ಎಚ್ಚರಿಕೆಯನ್ನು ನೀಡಿದ್ದಾರೆ.

 

ಹಕ್ಕಿ ಜ್ವರ ವಿಶ್ವದ ಅನೇಕ ದೇಶಗಳಲ್ಲಿ ಬಾಧಿಸುತ್ತಾ ಇದ್ದು, ಅಮೆರಿಕಾದ ವಿಜ್ಞಾನಿಗಳು ವಾಕ್ಸಿನ್ ಉತ್ಪಾದನೆಯ ಸಾಹಸದಲ್ಲಿ ಇದ್ದಾರೆ. ಸದ್ಯ H5N1 ವೈರಸ್ ವಿರುದ್ಧ ಹೋರಾಡುವ ಇಮ್ಯೂನಿಟಿ ಭಾರತೀಯರಿಗೆ ಇಲ್ಲ ಎಂದು ವಿಜ್ಞಾನಿಗಳು ಆತಂಕವನ್ನು ಹೊರ ಹಾಕುತ್ತಿದ್ದಾರೆ. ಕಳೆದ ಜನವರಿಯಲ್ಲೇ ICAR-NIHSAD ಮತ್ತು ಕೇಂದ್ರ ಸರ್ಕಾರದ ಪಶುಸಂಗೋಪನಾ ಇಲಾಖೆ ಈ ಹಕ್ಕಿ ಜ್ವರದ ಬಗ್ಗೆ ದಾಕಲೆಗಳನ್ನು ಸಂಗ್ರಹಿಸಲು ಆರಂಭಿಸಿತ್ತು. ಹಕ್ಕಿ ಜ್ವರ ಪ್ರಮುಖವಾಗಿ ಪಕ್ಷಿಗಳು, ಸಾಕು ಪ್ರಾಣಿಗಳಲ್ಲೇ ಕಂಡು ಬರುತ್ತದೆ. COVID-19 ಸಾಂಕ್ರಾಮಿಕ ರೋಗದ ಬಳಿಕ ಎಚ್ಚೆತ್ತುಕೊಂಡಿರುವ ದೇಶದ ಜನರಿಗೆ ಹಕ್ಕಿಜ್ವರದ ವೈರಸ್‌ ಹಬ್ಬುವ ಸುಳಿವು ಚಿಂತೆಗೀಡು ಮಾಡಿದೆ.

 

ಕರ್ನಾಟಕಕ್ಕೂ ಹಕ್ಕಿ ಜ್ವರದ ಭಯ!
ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಲ್ಲೂ ಹಕ್ಕಿಜ್ವರ ಹೆಚ್ಚಾಗುತ್ತಿದೆ. ನೆರೆ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಹಕ್ಕಿ ಜ್ವರಗಳಿಂದ ಕರ್ನಾಟಕ್ಕೆ ಬರುವ ಕೋಳಿ, ಮೊಟ್ಟೆಗಳಿಗೆ ನಿರ್ಬಂಧ ಹಾಕಲು ಸರ್ಕಾರ ಯೋಜಿಸಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ವರದಹಳ್ಳಿ ಗ್ರಾಮದ ಕೋಳಿಗಳಲ್ಲಿ ಮೊದಲ ಬಾರಿಗೆ ಶಂಕಿತ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಗ್ರಾಮದಲ್ಲಿ ಆರೋಗ್ಯ ಇಲಾಖೆ ಹೈ ಅಲರ್ಟ್ ಆಗಿದ್ದು, ಗ್ರಾಮದಲ್ಲಿ ಕೋಳಿಗಳು ಏನಾದರೂ ಇದ್ದಕ್ಕಿದ್ದಂತೆ ಸತ್ತರೆ ಆಳವಾದ ಗುಂಡಿ ತೋಡಿ ಹೂತು ಹಾಕಿ ಅದರ ಮೇಲೆ ಬ್ಲೀಚಿಂಗ್ ಪೌಡರ್ ಹಾಕುವಂತೆ ಸೂಚನೆ ನೀಡಲಾಗಿದೆ.

 

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?