c24kannada

ವಸ್ತುಸ್ಥಿತಿಯತ್ತ

ಗ್ರಾಹಕರೇ ಎಚ್ಚರ ಎಚ್ಚರ..ರಾಜ್ಯದಲ್ಲಿ ನಕಲಿ ಕಲ್ಲಂಗಡಿ ಹಣ್ಣಿನ ದರ್ಬಾರ್​​ ಜಾಸ್ತಿ..!

Share it

ಬೇಸಿಗೆ ಶುರುವಾಯ್ತು ಅಂದ್ರೆ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಜಾಸ್ತಿಯಾಗುತ್ತದೆ. ಕಲ್ಲಂಗಡಿಯಲ್ಲಿ ಹೆಚ್ಚು ನೀರಿನಂಶ ಇರುವುದರಿಂದ ಇದು ದೇಹದಲ್ಲಿ ನಿರ್ಜಲೀಕರಣ ಆಗದಂತೆ ನೋಡಿಕೊಳ್ಳುವುದರ ಜೊತೆಗೆ ದೇಹಕ್ಕೆ ತಂಪನ್ನು ಒದಗಿಸುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಕಲ್ಲಂಗಡಿ ಹಣ್ಣಿನ ವ್ಯಾಪಾರ ಜೋರಾಗಿದೆ. ಗ್ರಾಹಕರು ಕೂಡ ಮುಗಿಬಿದ್ದು ಕಲ್ಲಗಂಡಿ ಹಣ್ಣನ್ನು ಖರೀದಿಸುತ್ತಿದ್ದಾರೆ. ಆದ್ರೆ ರಾಜ್ಯದ ಜನರು ಕಲ್ಲಂಗಡಿ ಹಣ್ಣು ಖರೀದಿಸುವ ಮುನ್ನ ಕೊಂಚ ಎಚ್ಚರವಾಗಿರಬೇಕು. ಯಾಕಂದ್ರೆ ರಾಜ್ಯದ ಹಲವು ಮಾರುಕಟ್ಟೆಗಳಲ್ಲಿ ನಕಲಿ ಕಲ್ಲಂಗಡಿ ಹಣ್ಣುಗಳ ದರ್ಬಾರ್ ಜೋರಾಗಿ ನಡೆಯುತ್ತಿದೆ. ನೀವು ಕಲ್ಲಂಗಡಿ ಹಣ್ಣಿನ ಕಲರ್ ಕಂಡು ಮರುಳಾಗುವ ಮುಂಚೆ ಸ್ವಲ್ಪ ಎಚ್ಚರವಿರಲಿ.  ಕಲ್ಲಂಗಡಿಗೆ ಕೃತಕ ಬಣ್ಣಗಳನ್ನು ಹಾಗೂ ರಾಸಾಯನಿಕ ವಸ್ತುಗಳನ್ನು ಬಳಸಿ ಅವುಗಳನ್ನು ಆಕರ್ಷಣೀಯವಾಗಿ ಕಾಣುವಂತೆ ಮಾಡಲಾಗುತ್ತಿದೆ. ಇಂತಹ ಕಲ್ಲಂಗಡಿ ಹಣ್ಣು ಸೇವಿಸುವುದರಿಂದ ನಿಮ್ಮ ಆರೋಗ್ಯದ ಮೇಲೆ ಅನೇಕ ವ್ಯತಿರಿಕ್ತ ಪರಿಣಾಮ ಬೀರಲಿವೆ.

 

೧.ಈ ರೀತಿಯ ಕಲಬೆರಕೆ ಕಲ್ಲಂಗಡಿ ಹಣ್ಣನ್ನು ತಿನ್ನುವುದರಿಂದ ಫುಡ್ ಪಾಯ್ಸನಿಂಗ್​ನಂತಹ ಸಮಸ್ಯೆಗಳು ಉಂಟಾಗಿ ನೀವು ಆಸ್ಪತ್ರೆಯನ್ನು ಸೇರಬೇಕಾಗುತ್ತದೆ. ಇದರಿಂದ ವಾಂತಿ ಭೇದಿಯಂತಯ ಸಮಸ್ಯೆಗಳು ಶುರುವಾಗಬಹುದು.

೨. ಇಂತಹ ಕಲ್ಲಂಗಡಿ ಹಣ್ಣನ್ನು ಸೇವಿಸುವುದರಿಂದ ಸರಿಯಾದ ಸಮಯಕ್ಕೆ ಹಸಿವು ಆಗುವುದಿಲ್ಲ. ಹಸಿವಿನ ಕೊರತೆ ನಮ್ಮಲ್ಲಿ ಕಾಡುತ್ತದೆ. ಇದರಿಂದ ಸರಿಯಾದ ಸಮಯಕ್ಕೆ ಸರಿಯಾಗಿ ಊಟ ಮಾಡಲು ಆಗದಂತೆ ಆಗುತ್ತೆ.

೩. ನಕಲಿ ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಸುಸ್ತು ಬಾಯಾರಿಕೆಯಂತಹ ಲಕ್ಷಣಗಳು ದೇಹದಲ್ಲಿ ಕಂಡು ಬರಲು ಶುರುವಾಗುತ್ತವೆ. ನಾವು ದಾಹ ನೀಗಿಸಲೆಂದೆ ಕಲ್ಲಂಗಡಿ ಹಣ್ಣನ್ನು ಹೆಚ್ಚು ಸೇವಿಸುವುದು. ಆದ್ರೆ ಇದು ಅದರ ವಿರುದ್ಧವಾಗಿ ವರ್ತಿಸುತ್ತದೆ

೪. ಇಂತಹ ಕಲ್ಲಂಗಡಿ ಹಣ್ಣು ಸೇವನೆಯಿಂದ ಕಿಡ್ನಿ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಆಹಾರ ತಜ್ಞರು ಹೇಳುತ್ತಾರೆ. ತುಂಬಾ ಅಪಾಯಕಾರಿ ರಾಸಾಯನಿಕ ಪದಾರ್ಥಗಳು ಹಾಗೂ ಕೃತಕ ಬಣ್ಣವನ್ನು ಬಳಸಲಾಗಿರುತ್ತದೆ. ಹೀಗಾಗಿ ಇದು ಕಿಡ್ನಿ ಆರೋಗ್ಯಕ್ಕೆ ಅಪಾಯಕಾರಿಯಾಗುತ್ತೆ. 

 

Loading

Leave a Reply

Your email address will not be published. Required fields are marked *

error: Content is protected !!