ಬಡವರಿಗೆ ಮನೆ ಹಂಚಲು ಸಿದ್ಧರಾಮಯ್ಯ ಬರಲಿ.. ಸಚಿವ ಜಮೀರ್ ಅಹಮದ್ ಕೈಲಿ ಇವೆಲ್ಲಾ ಆಗಲ್ಲ-ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ
1 min read
ಶಿವಮೊಗ್ಗ : ರಾಜ್ಯ ಮತ್ತು ಕೇಂದ್ರ ಸರ್ಕಾರದ ಆಶ್ರಯ ಯೋಜನೆ ಬಡವರ ಪಾಲಿಗೆ ಮರಿಚಿಕೆಯಾಗಿದೆ ಎಂದು ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ ಹೇಳಿದರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು ಬಡವರಿಗೆ ಮನೆ ಹಂಚಲು ಸಿದ್ಧರಾಮಯ್ಯ ಶಿವಮೊಗ್ಗಕ್ಕೆ ಬರಲಿ, ಮುಖ್ಯಮಂತ್ರಿಗಳೇ ನೀವೆ ಒಮ್ಮೆ ಶಿವಮೊಗ್ಗಕ್ಕೆ ಬನ್ನಿ, ಸಚಿವ ಜಮೀರ್ ಅಹಮದ್ ಕೈಲಿ ಇವೆಲ್ಲಾ ಆಗಲ್ಲ, ಮಧು ಬಂಗಾರಪ್ಪರಿಗೆ ಸರ್ಕಾರಕ್ಕೆ ಮನವೊಲಿಸಲು ಆಗಲ್ಲ, ಹೀಗಾಗಿಯೇ ಸಿಎಂ ಅವರು ಶಿವಮೊಗ್ಗಕ್ಕೆ ಬಂದು ಬಡವರಿಗೆ ಮನೆಗಳನ್ನು ಹಂಚಲು ಸಹಕಾರ ಮಾಡಿ, ಸಾವಿರಾರು ಬಡವರಿಗೆ ಮನೆ ಹಂಚಿಕೆ ಬಾಕಿ ಉಳಿದಿದೆ. ರಾಜ್ಯ ಸರ್ಕಾರ ಕೇವಲ ಮನೆ ನೀಡುವ ಬಗ್ಗೆ ಘೋಷಣೆ ಮಾಡುತ್ತಿದೆಯಷ್ಟೇ, ಮೊನ್ನೆ ಜಮೀರ್ ಅಹಮದ್ ಶಿವಮೊಗ್ಗಕ್ಕೆ ಬಂದಿದ್ರು, ಅವರು ಬಡವರಿಗೆ ಎಲ್ಲಿ ಮನೆ ಕೊಟ್ಟಿದ್ದಾರೆ ಮೊದಲು ತಿಳಿಸಲಿ, ಜಮೀರ್ ಅಹಮದ್ ಬರಿಗೈಲಿ ಬಂದು ವಾಪಾಸ್ ಹೋಗಿದ್ದಾರೆ ಯಾವುದೇ ಹಣ ಬಿಡುಗಡೆ ಮಾಡದೇ, ಯಾವುದೇ ಹೊಸ ಮನೆಗಳನ್ನು ನೀಡದೇ ಸುಳ್ಳು ಆಶ್ವಾಸನೆ ನೀಡಿ ಹೋಗಿದ್ದಾರೆ ಎಂದು ಹೇಳಿದರು.
ನಾವು ಕಟ್ಟಿಸಿದ್ದ ಮನೆಗಳನ್ನು ಇವರು ಕೊಟ್ಟು ಹೋಗಿದ್ದಾರೆ. ಮೂಲಭೂತ ಸೌಕರ್ಯದೊಂದಿಗೆ ಮನೆ ನೀಡುತ್ತೇವೆಂದು ಹೇಳಿ ಸುಳ್ಳು ಹೇಳಿ ಹೋಗಿದ್ದಾರೆ. ಇಷ್ಟೇ ಸೌಕರ್ಯದೊಂದಿಗೆ ಮನೆ ನೀಡುವುದಾಗಿದ್ದರೆ ಮೂರು ತಿಂಗಳ ಹಿಂದೆಯೇ ಬಡವರಿಗೆ ಸಿಗುತ್ತಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ನೀಡಿದ ಹಾಗೆ ಮಾಡಲು ಯೋಜಿಸಿ ಮನೆ ನೀಡಿ ಹೋಗಿದ್ದಾರೆ. ಮತ್ತೆ ಕ್ಯಾಬಿನೆಟ್ ನಲ್ಲಿ ಹಣ ಬಿಡುಗಡೆ ಮಾಡುವ ಬಗ್ಗೆ ಆಶ್ವಾಸನೆ ನೀಡಿ ಹೋಗಿದ್ದಾರೆ. ಆದರೆ ಯಾವುದೇ ಹಣ ಬಿಡುಗಡೆ ಮಾಡದೇ ಹೀಗೆ ಬಂದು ಹಾಗೆ ಹೋಗಿದ್ದಾರೆ. ಈ ಸರ್ಕಾರ ಬಂದ ಬಳಿಕ ಗೋವಿಂದಾಪುರ ಆಶ್ರಯ ಬಡಾವಣೆಗೆ ಒಂದು ರೂ. ಬಿಡುಗಡೆ ಮಾಡಿಲ್ಲ. ಇರುವ ಮನೆಗಳಿಗೆ ಹಕ್ಕುಪತ್ರ ನೀಡಲು ಜಮೀರ್ ಅಹಮದ್ ಬೇಕಾ ?. ಯಾವುದಾದರೂ ಗುಮಾಸ್ತರಿಗೆ ಹೇಳಿದ್ರು ಕೊಡುತ್ತಿದ್ದ. ಜಮೀರ್ ಅಹಮದ್ ಬಂದು ಶಾಸಕ ಚನ್ನಬಸಪ್ಪ ಅವರಿಗೆ ಹೊಗಳಿದರು. ಅವರು ನಕ್ಕು, ಜಮೀರ್ ಅಹಮದ್ ಗೆ ಹೊಗಳಿ, ಸುಮ್ಮನಾದರು. ಆದರೆ ಬಡವರಿಗೆ ಮನೆಗಳ ಹಂಚಿಕೆ ಇನ್ನೂ ಹಾಗೆ ಉಳಿದಿದೆಜಮೀರ್ ಅಹಮದ್ ಗೆ ಇವೆಲ್ಲಾ ಮಾಡಲು ಸಾಧ್ಯವಿಲ್ಲ. ಕ್ಯಾಬಿನೆಟ್ ನಲ್ಲಿ ಹಣ ಬಿಡುಗಡೆ ಮಾಡಿಸಲು ಜಮೀರ್ ಅಹಮದ್ , ಕೈಲಿ ಆಗುತ್ತಿಲ್ಲ, ನನ್ನನ್ನು ಹೊಗಳಲು ಜಮೀರ್ ಅಹಮದ್ ಶಿವಮೊಗ್ಗಕ್ಕೆ ಬರಬೇಕಿತ್ತಾ ? ಎಂದು ಹೇಳಿದರು .
