ಗುರುವಾರ- ರಾಶಿ ಭವಿಷ್ಯ ಪ್ರೆಭ್ರವರಿ-೨೭,೨೦೨೫
1 min read
ಮೇಷ ರಾಶಿ : ಸ್ಥಿರಾಸ್ತಿ ಮತ್ತು ವಾಹನದಿಂದ ಲಾಭ ಸಿಗುತ್ತೆ. ಉದ್ಯೋಗದಲ್ಲಿ ಕಿರಿಕಿರಿ ಉಂಟಾಗಬಹುದು. ಕುಟುಂಬದಲ್ಲಿ ಕಲಹ ಸಾಧ್ಯತೆಯಿದೆ. ಆದಾಯದಲ್ಲಿ ಕುಂಠಿತವಾಗಬಹುದು. ಮಾನಸಿಕ ನೆಮ್ಮದಿ ಇಲ್ಲದಿರುವುದು. ನವಗ್ರಹರ ಆರಾಧನೆ ಮಾಡಿ ವಿಶೇಷವಾಗಿ ಚಂದ್ರಗ್ರಹ ಪ್ರಾರ್ಥನೆ ಮಾಡಬೇಕು.
ವೃಷಭ ರಾಶಿ : ಸಾಂಸಾರಿಕ ವಿಚಾರದಲ್ಲಿ ಬೇಸರವಾಗುತ್ತೆ. ಅವಮಾನಕ್ಕೆ ಗುರಿಯಾಗದಂತೆ ಗಮನಿಸಿ, ಬೇರೆಯವರ ತಪ್ಪುಗಳನ್ನ ಎತ್ತಿಹಿಡಿಯದಿರಿ, ಪ್ರಯಾಣದಲ್ಲಿ ಆಲಸ್ಯ ಉಂಟಾಗುತ್ತೆ. ಹಣವಿರುವುದೆಂಬ ಭ್ರಾಂತಿ ಕಾಡುತ್ತೆ, ಜವಾಬ್ದಾರಿಯ ಬಗ್ಗೆ ಚಿಂತನೆ ಮಾಡಬೇಕು, ಕುಲದೇವತ ಆರಾಧನೆ ಮಾಡಿದರೆ ತುಂಬಾ ಒಳ್ಳೆಯದು.
ಮಿಥುನ ರಾಶಿ : ಅನಿರೀಕ್ಷಿತ ಆರ್ಥಿಕ ಸಂಕಷ್ಟ ಉಂಟಾಗುತ್ತೆ. ಸಾಲ ಮಾಡುವ ಪರಿಸ್ಥಿತಿ ಬರಬಹುದು, ಕುಟುಂಬದವರು ಶತ್ರುಗಳಾಗುತ್ತಾರೆ. ವಾದ, ವಿವಾದಗಳಲ್ಲಿ ಸೋಲುಂಟಾಗುತ್ತೆ, ಶಾರೀರಿಕ ತೊಂದರೆ ಅದರಲ್ಲೂ ಕಾಲು ನೋವು ಉಂಟಾಗುವ ಸಧ್ಯತೆ ಇದೆ. ಆರ್ಥಿಕ ಪರಿಸ್ಥಿತಿ ಸರಿಪಡಿಸಲು ಹರಸಾಹಸ ಪಡಬಹುದು. ಋಣಮೋಚನ ಮಂಗಳ ಸ್ತೋತ್ರ ಶ್ರವಣ ಮಾಡಬೇಕು.
ಕಟಕ ರಾಶಿ : ಸ್ವಯಂಕೃತ ಅಪರಾಧಗಳು ಬೇಡ, ಜುಜಾಟದಂತಹ ಉತ್ತೇಜಕ ವಿಚಾರಗಳು ಬೇಡ, ಮಾನಸಿಕ ಸಂಚಲತೆ ಉಂಟಾಮಕ್ಕಳ ವಿಚಾರದಲ್ಲಿ ಬೇಸರವಾಗುತ್ತೆ , ಕೆಲಸ,ಕಾರ್ಯದಲ್ಲಿ ವಿಳಂಬವಾಗುತ್ತೆ, ನ್ಯಾಯಾಲಯದ ವಿಚಾರದಲ್ಲಿ ಹಿನ್ನಡೆಯಾಗಬಹುದು, ಶಿವಾರಾಧನೆ ಮಾಡಬೇಕು.
ಸಿಂಹ ರಾಶಿ : ತಾಯಿಯವರಿಂದ ಉಡುಗೊರೆ ಪಡೆಯುತ್ತೀರಾ, ಶರೀರದಲ್ಲಿ ಬದಲಾವಣೆ ಬಗ್ಗೆ ಗಮನಿಸಬೇಕು, ಆಹಾರ ಸೇವನೆಯಲ್ಲಿ ಗಮನವಿರಲಿ, ಆರ್ಥಿಕ ತೊಂದರೆಯಿಲ್ಲ ಆದರೆ ಧನಮದ ಬೇಡ , ಸಮಾಜದಲ್ಲಿ ಹೊಸ ವಿಚಾರಗಳ ಬಗ್ಗೆ ಚರ್ಚಿಸಿ ಪ್ರವಾಸದ ಬಗ್ಗೆ ಉಲ್ಲಾಸಿತರಾಗುತ್ತೀರಿ, ವಿಷ್ಣು ಸಹಸ್ರನಾಮ ಪಠಿಸಬೇಕು.
ಕನ್ಯಾ ರಾಶಿ : ಮಕ್ಕಳಿಂದ ಬೇಸರವಾಗುತ್ತೆ, ಉದ್ಯೋಗದಲ್ಲಿ ಬಡ್ತಿ, ದಾಂಪತ್ಯದಲ್ಲಿ ಕಿರಿಕಿರಿ ಉಂಟಾಗಬಹುದು, ಕೋರ್ಟ್ ಕೇಸ್ಗಳಲ್ಲಿ ಸೋಲಿನ ಭೀತಿ ಉಂಟಾಗುತ್ತೆ, ಆತ್ಮೀಯರೇ ಶತ್ರುಗಳಾಗುವವರು ಕ್ಷಮೆ ಕೇಳುವ ಪ್ರಸಂಗ ಇದ್ದರೆ ಕೇಳುವುದು ಒಳ್ಳೆಯದು, ಮನ್ಯು ಸೂಕ್ತ ಮಂತ್ರ ಶ್ರವಣ ಮಾಡಬೇಕು.
ತುಲಾ ರಾಶಿ : ಉದ್ಯೋಗದಲ್ಲಿ ಅನುಕೂಲಕರ ವಾತಾವರಣವಿರುತ್ತೆ, ಮಿತ್ರರಿಗೆ ಸಹಾಯವಾಗಬಹುದು, ಕೆಲವು ವಸ್ತುಗಳಿಂದ ಲಾಭ ಉಂಟಾಗಬಹುದು, ಧನಾಗಮನಕ್ಕೆ ಅವಕಾಶವಿದೆ , ಮಾನಸಿಕ ಸ್ತಿಮಿತತೆ ಇರಲಿ
ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವಕಾಶವಿದೆ, ಶಿವಾರಾಧನೆ ಮಾಡಬೇಕು.
ವೃಶ್ಚಿಕ ರಾಶಿ : ಪ್ರಯಾಣದಲ್ಲಿ ಅಡೆತಡೆ ಉಂಟಾಗಬಹುದು, ಕೆಲಸದಲ್ಲಿ ನಿರಾಸಕ್ತಿ, ನರಕ್ಕೆ ಅಥವಾ ಮೂಳೆಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು. ಮಾನಸಿಕ ಹಿಂಸೆಯಾಗುತ್ತೆ, ಆಸ್ತಿ ವಿಚಾರದಲ್ಲಿ ವಿವಾದ ಉಂಟಾಗಬಹುದು, ಕೆಲಸವಿಲ್ಲದೇ ತುಂಬಾ ಬೇಸರ ಪಡಬಹುದು, ನವಗ್ರಹ ಆರಾಧನೆ ಮಾಡಿ ವಿಶೇಷವಾಗಿ ಕುಜ ಗ್ರಹ ಪ್ರಾರ್ಥನೆ ಮಾಡಬೇಕು.
ಧನಸ್ಸು ರಾಶಿ : ಆಕಸ್ಮಿಕ ಧನ ನಷ್ಟ ಸಾಧ್ಯತೆಯಿದೆ. ನಂಬಿಕಸ್ಥರಿಂದ ಮೋಸ ಹೋಗುತ್ತಾರೆ, ಉಸಿರಾಟದ ಸಮಸ್ಯೆ ಕಾಡುವ ಸಧ್ಯತೆ ಇದೆ. ಮನಸ್ಸಿನಲ್ಲಿ ಆತಂಕ ಉಂಟಾಗುತ್ತೆ, ನಕಾರಾತ್ಮಕರಾದ ದಿನ ಧನ್ವಂತರಿ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಬೇಕು.
ಮಕರ ರಾಶಿ : ಹಣ ಹೂಡಿಕೆಯಲ್ಲಿ ಧನಲಾಭ ಸಿಗುತ್ತೆ, ಬೇರೆಯವರಿಗೆ ಹಣ ಸಹಾಯ ಮಾಡುತ್ತಿರಾ. ಗೌರವ, ಸನ್ಮಾನಗಳಿಗೆ ಅವಕಾಶವಿದೆ, ಬೇರೆಯವರ ಭಾವನೆಗೆ ಗೌರವ ನೀಡಬೇಕು, ಯಾವ ವ್ಯಕ್ತಿಯ ದುರ್ಬಳಕೆ ಮಾಡಬೇಡಿ, ಹಿರಿಯರ ಬೇಸರಕ್ಕೆ ಕಾರಣವಾಗಬಹುದು. ಗಣಪತಿ ಪ್ರಾರ್ಥನೆ ಮಾಡಬೇಕು.
ಕುಂಭ ರಾಶಿ : ಉದ್ಯೋಗದಲ್ಲಿ ಶತ್ರು ಕಾಟವಿದೆ. ಶೀತ ಸಂಬಂಧಿ ಸಮಸ್ಯೆ ಉಂಟಾಗಬಹುದು. ಸಾಲಗಾರರಿಂದ ಕಿರಿಕಿರಿ ಉಂಟಾಗುತ್ತೆ, ಹಣದ ವಿಚಾರಕ್ಕೆ ಜಗಳ ಉಂಟಾಗಬಹುದು, ಹಣೆಯ ಬರಹಕ್ಕೆ ಹೊಣೆ ಯಾರು.? ಎಂಬ ವೇದಾಂತದ ಮಾತಗಳನ್ನಾಡಬಹುದು, ಸಾಯಂಕಾಲದ ಹೊತ್ತಿಗೆ ಸ್ವಲ್ಪ ಸಮಾಧಾನವಾಗುತ್ತೆ, ಪ್ರತ್ಯಂಗಿರಾ ದೇವಿಯನ್ನ ಪ್ರಾರ್ಥನೆ ಮಾಡಬೇಕು.
ಮೀನ ರಾಶಿ : ಮಕ್ಕಳಿಂದ ಸಂತೋಷ ಉಂಟಾಗಬಹುದು, ಆಕಸ್ಮಿಕ ದುರಂತ ಸಾಧ್ಯತೆಯಿದೆ, ದೂರದ ಪ್ರಯಾಣ ಸಾಧ್ಯತೆಯಿದೆ. ನ್ಯಾಯಾಲಯದ ಕೆಲಸಕ್ಕೆ ಆದ್ಯತೆ. ಹಣದ ವಿಚಾರದಲ್ಲಿ ಗೊಂದಲವಾಗುತ್ತೆ, ಕೋಪ ನಿಯಂತ್ರಣದಲ್ಲಿದ್ದರೆ ಒಳ್ಳೆಯದು, ಸುದರ್ಶನ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಬೇಕು.
