ಕುಂಭ ಮೇಳಕ್ಕೆ ತೆರಳುತ್ತಿದ್ದ ಬೀದರ್‌ನ ವ್ಯಕ್ತಿ ರಸ್ತೆ ಅಪಘಾತದಲ್ಲಿ ಸಾವು
1 min read
ಬೀದರ : ಬೀದರ ತಾಲುಕೀನ ಚಿಲ್ಲರ್ಗಿ ಗ್ರಾಮದಿಂದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ತೆರಳುತ್ತಿದ್ದ ಮಹಾರಾಷ್ಟ್ರ ನಾಗಪುರದಿಂದ 70ಕಿ.ಮೀ. ಅಂತರದಲ್ಲಿ ರಸ್ತೆ ಅಪಘಾತದಲ್ಲಿ ರಂಗಾರೆಡ್ಡಿ ಮೃತಪಟ್ಟಿದ್ದಾರೆ. ರಂಗಾರೆಡ್ಡಿ ಮಾಣಿಕರೆಡ್ಡಿ ಸುಧಾ (60) ಸಂಬಂಧಿಕರೊಂದಿಗೆ ಬೀದರ್‌ನಿಂದ ಕ್ರೂಸರ್ ಮೂಲಕ ಮಹಾ ಕುಂಭ ಮೇಳಕ್ಕೆ ಹೋಗುತ್ತಿದ್ದರು. ಕ್ರೂಸರ್ ವಾಹನ ಮುಂದೆ ಸಾಗುತ್ತಿದ್ದ ಕಂಟೇನರ್ ಲಾರಿಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ….
ಘಟನೆಯಲ್ಲಿ ರಂಗಾರೆಡ್ಡಿ ಸ್ಥಳದಲ್ಲೇ ಮೃತಪಟ್ಟರೆ, ಪತ್ನಿ ಆರತಿ ಸೇರಿ ಇಬ್ಬರ ಕೈ, ಕಾಲಿಗೆ ಗಂಭೀರ ಗಾಯ ಕ್ರೂಸರ್‌ನಲ್ಲಿ 12 ಜನ ಇದ್ದರು ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ
ಎಂದು ರಂಗಾರೆಡ್ಡಿ ಸಂಬಂಧಿ ಶ್ರೀನಿವಾಸ್ ರೆಡ್ಡಿ ಚಿಲ್ಲರ್ಗಿ ಮಾಹಿತಿ ನೀಡಿದರು.
