c24kannada

ವಸ್ತುಸ್ಥಿತಿಯತ್ತ

ಅತ್ತೆಯನ್ನ ಸಾಯಿಸಲು ಐಡಿಯಾ ಕೊಡಿ,ವೈದ್ಯನಿಗೆ ಮಹಿಳೆಯ ಮೆಸೆಜ್

ಬೆಂಗಳೂರು : ಅತ್ತೆಯನ್ನ ಸಾಯಿಸಲು ಮಾತ್ರೆಯ ಕುರಿತು ಸಲಹೆ ನೀಡುವಂತೆ ಮಹಿಳೆಯೊಬ್ಬರು ವೈದ್ಯರೊಬ್ಬರ ಬಳಿ ಕೇಳಿರುವ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ವೈದ್ಯ ಸುನಿಲ್ ಕುಮಾರ್ ಎಂಬುವವರಿಗೆ ಮೆಸೆಜ್ ಕಳಿಸಿರುವ ಮಹಿಳೆಯೊಬ್ಬರು ತಮ್ಮ ಅತ್ತೆಯನ್ನ ಸಾಯಿಸಲು ಮಾತ್ರೆಯ ವಿವರ ಕೊಡುವಂತೆ ಕೇಳಿದ್ದಾರೆ. ಮಹಿಳೆಯ ಮಾತು ಕೇಳಿ ಆತಂಕಗೊಂಡ ವೈದ್ಯ ಸುನಿಲ್ ಕುಮಾರ್ ಅವರು ಸಂಜಯನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

 

ಇನ್‌ಸ್ಟಾಗ್ರಂ ಮೂಲಕ ಸುನಿಲ್ ಕುಮಾರ್ ಅವರ ನಂಬರ್ ಪಡೆದಿದ್ದ ಮಹಿಳೆ, ಸೋಮವಾರ ವಾಟ್ಸ್ಆ್ಯಪ್‌ನಲ್ಲಿ ಮೆಸೆಜ್ ಮಾಡಿದ್ದಾರೆ.’ನಮ್ಮ ಅತ್ತೆಗೆ ವಯಸ್ಸಾಗಿದೆ, ತುಂಬಾ ಹಿಂಸೆ ಕೊಡುತ್ತಿದ್ದಾರೆ. ಅವರನ್ನ ಸಾಯಿಸಲು ಯಾವುದಾದರೂ ಐಡಿಯಾ ಹೇಳಿ, ಟ್ಯಾಬ್ಲೆಟ್‌ ಕುರಿತು ಮಾಹಿತಿ ಕೊಡಿ’ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸುನಿಲ್ ಕುಮಾರ್ ‘ನಾವು ಪ್ರಾಣ ಉಳಿಸುವವರು’ ಎಂದಿದ್ದಾರೆ. ತಕ್ಷಣ ತನ್ನ ಮೆಸೇಜ್‌ಗಳನ್ನ ಡಿಲೀಟ್ ಮಾಡಿರುವ ಮಹಿಳೆ ಸುನಿಲ್ ಕುಮಾರ್ ಅವರ ನಂಬರ್ ಬ್ಲಾಕ್ ಮಾಡಿದ್ದಾರೆ.ಇದೊಂದು ಪ್ರಾಂಕ್ ಸಂದೇಶವೋ ಅಥವಾ ಅಸಲಿ ಉದ್ದೇಶವೋ ಎಂಬುದು ತಿಳಿಯದೆ ಗೊಂದಲಕ್ಕೀಡಾಗಿರುವ ಸುನಿಲ್ ಕುಮಾರ್ ಅವರು ಮಹಿಳೆಯ ಕುರಿತು ಸಂಜಯನಗರ ಠಾಣೆಗೆ ಮಾಹಿತಿ ನೀಡಿದ್ದಾರೆ.

 

ಮೆಸೇಜ್‌ಗಳನ್ನ ಕಳಿಸಿರುವ ನಂಬರ್ ಸ್ವಿಚ್ ಆಫ್ ಆಗಿದೆ.ಪ್ರಾಂಕ್ ಮೆಸೆಜ್ ಆಗಿರಬಹುದು ಎಂದು ನಿರ್ಲಕ್ಷ್ಯಿಸಲು ಸಾಧ್ಯವಾಗುವುದಿಲ್ಲ.ಸುನಿಲ್ ಕುಮಾರ್ ಅವರು ನೀಡಿರುವ ಮಾಹಿತಿಯನ್ವಯ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

error: Content is protected !!