c24kannada

ವಸ್ತುಸ್ಥಿತಿಯತ್ತ

ಸಾವಿನಲ್ಲಿಯೂ ಒಂದಾದ ದಂಪತಿ ರಾತ್ರಿ ಒಟ್ಟಿಗೆ ಊಟ ಮಾಡಿ ಮಲಗಿದ್ದ ದಂಪತಿ ಮಲಗಿದಲ್ಲಿಯೇ ಇಬ್ಬರೂ ಏಕಕಾಲಕ್ಕೆ ಸಾವು

 

ಧಾರವಾಡ : ಧಾರವಾಡ ತಾಲೂಕಿನ ದೇವರಹುಬ್ಬಳ್ಳಿ ಗ್ರಾಮದ ರೈತ ದಂಪತಿ ಸಾವಿನಲ್ಲಿಯೂ ಒಂದಾಗಿದ್ದಾರೆ. ಈಶ್ವರ ಆರೇರ್ (82), ಪಾರ್ವತಿ ಆರೇರ್ (73) ಮೃತ ದಂಪತಿ. ಪಾರ್ವತಿ ಆರೇರ್ ಕಳೆದ ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಪತ್ನಿ ಪಾರ್ವತಿ ಆರೇರ್ ಪತ್ನಿ ಆರೈಕೆಯನ್ನು ಪತಿ ಈಶ್ವರ ಆರೇರ್ ಮತ್ತು ಮಕ್ಕಳು ಮಾಡುತ್ತಿದ್ದರು. ಭಾನುವಾರ ರಾತ್ರಿ ಒಟ್ಟಿಗೆ ಊಟ ಮಾಡಿ ದಂಪತಿ ಮಲಗಿದ್ದರು. ಬೆಳಿಗ್ಗೆ ಎಬ್ಬಿಸಲು ಹೋದಾಗ ದಂಪತಿ ಮೇಲೆದ್ದಿಲ್ಲ. ರೈತ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ. ದಂಪತಿಗೆ ನಾಲ್ವರು ಪುತ್ರಿಯರು, 12 ಮಂದಿ ಮೊಮ್ಮಕ್ಕಳು ಇದ್ದಾರೆ.

Leave a Reply

Your email address will not be published. Required fields are marked *

error: Content is protected !!