ಬೆಳಗಾವಿಯಲ್ಲಿ ಆಕಸ್ಮಿಕವಾಗಿ ಊಟದ ತಟ್ಟೆ ತಾಕಿದ್ದಕ್ಕೆ ಪಡ್ಡೆಗಳ ಬೀದಿ ರಂಪಾಟ.
1 min read
ಬೆಳಗಾವಿಯಲ್ಲಿ ಆಕಸ್ಮಿಕವಾಗಿ ಊಟದ ತಟ್ಟೆ ತಾಕಿದ್ದಕ್ಕೆ ಪಡ್ಡೆಗಳ ಬೀದಿ ರಂಪಾಟ.
ಬೆಳಗಾವಿ,ಫೆ,16: ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲಿ ವ್ಯಕ್ತಿಯ ಮೇಲೆ ಯುವಕರ ಗುಂಪಿನಿಂದ ಹಲ್ಲೆ ನಡೆದ ಘಟನೆ
ಬೆಳಗಾವಿಯ ಜಿಲ್ಲಾ ಪೊಲೀಸ್ ಭವನದ ಎದುರು ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕುಮಾರಗಂಧರ್ವ ಹಾಲ್‌ನಲ್ಲಿ ಸೇವಾಲಾಲ್ ಜಯಂತಿಗೆ ಬಂದಿದ್ದ ಯುವಕರು ಕಾರ್ಯಕ್ರಮ ಬಳಿಕ ಊಟ ಮಾಡುವಾಗ ಯುವಕರ ಪ್ಲೇಟ್ ಕೈ ತಾಗಿದಕ್ಕೆ ಗಲಾಟೆ ತಾರಕಕ್ಕೇರಿದೆ. ಕ್ಷಮೆ ಕೇಳಿದರೂ ಬಿಡದೇ ವ್ಯಕ್ತಿ ಮೇಲೆ ಸಾರ್ವಜನಿಕವಾಗಿಯೇ ಹಲ್ಲೆ ನಡೆದಿದೆ.
ಗಲಾಟೆ ಬಿಡಿಸಲು ಪೊಲೀಸ್ ಪೇದೆಯ ಹರಸಾಹಸ ಪಟ್ಟರೂ ಇಡೀ ಗಲಾಟೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
