ಕೇಂದ್ರ ಆಧೀನದಲ್ಲಿ ಐಟಿ-ಬಿಟಿ ದಾಳಿಗಳು ಕೇವಲ ಬಿಜೆಪಿಯೇತರರ ಮೇಲೆ ನಡೆಯುತ್ತಿದೆ. -ಪ್ರಿಯಾಂಕ ಖರ್ಗೆ.
ಬಿಜೆಪಿ ಬೆಂಬಲಿಗರಲ್ಲದವರಿಗೆ ಇಡಿ-ಐಟಿ ಬೆದರಿಕೆ ಇದೆ. ಈ ಸಾವು ನಾಲ್ಕನೆಯದು, ತನಿಖೆಯಾಗಲಿ. -ಪ್ರಿಯಾಂಕ ಖರ್ಗೆ.
ಬೆಂಗಳೂರು: ಇಡೀ ರಾಷ್ಟ್ರದಲ್ಲಿ ಇದು ಒಂದು ಪ್ರವೃತ್ತಿ ಬೆಳೆಸಿದ್ದಾರೆ. ಕಳೆದ 10 ವರ್ಷದಿಂದ, ಐಟಿ, ಇಡಿ ಮತ್ತೆ ಜಿಎಸ್ಟಿ ಕಿರುಕುಳ ಉದ್ಯಮಿಗಳಿಗೆ ಆಗ್ತಾ ಇದೆ. ಯಾವ ಉದ್ಯಮಿಗಳಿಗೆ? ಯಾರು ಎಸ್.ಎಂ.ಇ, ಎಂ.ಎಸ್.ಎಂ.ಇ ಮಾಡ್ತಾರೆ, ಮತ್ತೆ ಇಂಡಸ್ಟ್ರಿಯಲಿಸ್ಟ್ಗಳಿಗೆ. ಯಾರು ಕೇಂದ್ರ ಸರ್ಕಾರಕ್ಕೆ ತಲೆಬಾಗೋದಿಲ್ಲ ಅವರಿಗೆ. ಸಾಕಷ್ಟು ಉದಾಹರಣೆಗಳನ್ನ ನಾವು ನೋಡಿದ್ದೇವೆ ಈಗ. ಇದು ಎರಡನೇದು, ಮೂರನೇ ಪ್ರಕರಣ ನಮ್ಮ ರಾಜ್ಯದಲ್ಲಿ ನಡೀತಾ ಇರೋದು. ಖಾಸಗಿಯಾಗಿ ಉದ್ಯಮಿಗಳೊಂಸಿಗೆ ಕೇಳಿದರೆ ಇದನ್ನೇ ಹೇಳ್ತಾರೆ. ಜಿಎಸ್ಟಿ ಕಿರುಕುಳವೂ ನಡೀತಾ ಇದೆ, ಐಟಿ, ಇಡಿ ಯಾರು ಕೇಂದ್ರ ಸರ್ಕಾರದ ಮಾತು ಕೇಳಲ್ಲ ಅಂತಹವರಿಗೆ.
ದೊಡ್ಡ ವ್ಯಕ್ತಿಗಳು ಯಾರು ಇರ್ತಾರೆ, ಅದಾನಿ ಅಂಬಾನಿ ಅಂತವರಿಗೆ, ಅಂತವರಿಗೆ ಐಟಿ, ಇಡಿ ಏನೂ ಇಲ್ಲ. ಇನ್ ಫ್ಯಾಕ್ಟ್, ಗವರ್ನಮೆಂಟ್ ಅವರಿಗೆ ಕೆಲಸ ಮಾಡ್ತಾ ಇದ್ದಾರೆ. ಅವರು ಆಳುವ ಸರ್ಕಾರವಾಗಿ ದುಡಿತಾ ಇದ್ದಾರೆ, ಯಾವ ರೀತಿ ಅವರಿಗೆ ಹೊಸ ಬಿಸಿನೆಸ್ ತರಬೇಕು, ಹೇಗೆ ಅವರಿಗೆ ಬಂಡವಾಳದ ಅವಕಾಶ ಹೆಚ್ಚು ಮಾಡಿಕೊಡಬೇಕು, ಹೇಗೆ ನೀತಿಗಳನ್ನ, ಯೋಜನೆಗಳನ್ನ ಅವರ ಪರವಾಗಿ ಮಾಡಬೇಕಾಗಿರುವುದೇ ನಡೆದಿದೆ ಹೊರತು. ಬೇರೆ ಯಾರ ಯಾರಿಗೂ ಈ ಕೇಂದ್ರ ಸರ್ಕಾರ ಇಲ್ಲ.
ಎಲ್ಲರೂ ಹೇಳ್ತಾರೆ ಡಿಜಿಟಲ್ ಇಂಡಿಯಾನಲ್ಲಿ ಅದು ಆಗಿದೆ, ಇದು ಆಗಿದೆ ಅಂದ್ಬಿಟ್ಟು. ನೀವು ಯಾವುದೇ ಸಾಮಾನ್ಯ ವ್ಯಕ್ತಿಗಳನ್ನ ಮಾತಾಡಿಕೊಂಡು ಕೇಳ್ಕೊಂಡ್ರುನು ಕೂಡ ಐಟಿ ರೀ-ಇನ್ವೆಸ್ಟ್ಮೆಂಟ್ಸ್ ಬಗ್ಗೆ ಇರಬಹುದು ಅಥವಾ ನಿಮ್ಮ ಜಿಎಸ್ಟಿ ಬಗ್ಗೆ ಇರಬಹುದು, ಎಷ್ಟು ಹರಾಸ್ಮೆಂಟ್ ನಡೆದಿದೆ, ತಾವು ಸಾಮಾನ್ಯ ಜನರತ್ರ ನೀವು ಸಮೀಕ್ಷೆ ಮಾಡಿದಾಗ ನಿಮಗೆ ಗೊತ್ತಾಗುತ್ತೆ. ಅದ್ರಿಂದ ಇದು ಕೇಂದ್ರ ಸರ್ಕಾರದ ಇದು ಹೊಸ ಆಯುಧ ಇದೆ, ಶ್ರೀಸಾಮಾನ್ಯರಿಗೆ ತೊಂದರೆ ಕೊಡಲಿಕ್ಕೆ. ನೋಡಿ ಇದು ನಾವು ಹೇಳೋದಲ್ಲ, ಕುಟುಂಬದವರೇ ಹೇಳಿದ್ದಾರಲ್ಲ. ನಾನು ಹೇಳಿದ್ರೆ ರಾಜಕೀಯ ಅಂತ ಹೇಳಬಹುದು.
ಇಡೀ ಪ್ರಕ್ರಿಯೆ ತನಿಖೆ ಆಗಲೆ ಎಂದರು.
ಈಗ ರಾಯ್ ಅವರು ಕೆಳಮಟ್ಟದಿಂದ ಬೆಳೆದುಕೊಂಡು ಬಂದಂತ ವ್ಯಕ್ತಿ. ಏನಂತಾ ಡೆಸ್ಪಿರೇಷನ್ ಇತ್ತು ಅಥವಾ ಅಂತದ್ದೇನು ಹತಾಶರಾಗಿದ್ರು ಯಾವುದಕ್ಕೆ ಅಥವಾ ಏನು ಮನಸ್ಸಿಗೆ ನೊಂದುಕೊಂಡಿದ್ರು. ನಾನು ಓದಿರೋ ಪ್ರಕಾರ ಅವರು ಅವರ ಬಿಸಿನೆಸ್ ಮಾಡೆಲ್ ಡೆಬ್ಟ್ ಫ್ರೀ ಅಂತ ಅಂದ್ರೆ ಯಾವುದೇ ಸಾಲ ಇಲ್ಲದೆ ಆ ಬಿಸಿನೆಸ್ ಮಾಡ್ಬೇಕು ಅಂತ. ಯಾವಾಗ್ಲೂ ಜನರಿಗೆ ಸಲಹೆ ಕೊಡ್ತಾ ಇದ್ರು ಅಂತ ನಾನು ಓದಿದೆ. ಮತ್ತೆ ಅಂತ ವ್ಯಕ್ತಿಗೆ ಸಾಲ ಇಲ್ಲ ಏನಿಲ್ಲ. ಮತ್ತೆ ಯಾಕಂತ ಒಂದು ನಿರ್ಧಾರ ತಗೊಂಡ್ರು? ಏನು ಸಾಂಸಾರಿಕ ಸಮಸ್ಯೆನೂ ಇಲ್ಲ ಅಂತ ಹೇಳ್ತಾರೆ. ಮತ್ತೆ ಅವರದೇ ಕುಟುಂಬದವರು ಐಟಿ ಇಡಿ ಅಂದಾಗ ಏನಿದೆ ತನಿಕೆಯಲ್ಲಿ ಹೊರಗೆ ಬರಲಿ, ಬಟ್ ದಿಸ್ ಈಸ್ ಗೋಯಿಂಗ್ ಆನ್ ಥ್ರೂ ಔಟ್ ಆಫ್ ದ ಕಂಟ್ರಿ. ಕ್ರೈಮ್ ಸೀನ್ನಲ್ಲಿ ಅವರು ಇದ್ರಲ್ವಾ? ಯಾವಾಗ ಅವರು ಆತ್ಮಹತ್ಯೆ ಮಾಡಿಕೊಂಡ್ರು, ಅದೇ ಪ್ರಮೀಸಸ್ನಲ್ಲಿ ಇದ್ರು, ಅದೇ ಮನೆಯಲ್ಲಿದ್ರು. ಯಾರ್ಯಾರು ಇರ್ತಾರೆ, ಎಲ್ಲರಿಗೂ ತನಿಕೆಗೊಳಪಡಿಸಬೇಕಾಗುತ್ತದೆ. ಅದು ಅವರ ಕಚೇರಿವತಾದರೂ ಇರಬಹುದು, ಐಟಿ ಕಚೇರಿಯವರು ಇರಬಹುದು, ಖಾಸಗಿ ಕಚೇರಿಯವರು ಇರಬಹುದು.
ಕೇಂದ್ರ ಬಜೆಟ್ ಕುರಿತು:
ಕೇಂದ್ರದಿಂದ ನಾನಂತು ಬಜೆಟ್ ನಿರೀಕ್ಷೆಗಳನ್ನ ಇಟ್ಕೊಂಡಿಲ್ಲ. ಕೇಂದ್ರ ಸರ್ಕಾರದಿಂದ. 12 ವರ್ಷ ಆಯ್ತು, ಕರ್ನಾಟಕಕ್ಕೆ ಏನು ಕೊಟ್ಟಿದ್ದಾರೆ ಹೇಳಿ? ಅಥವಾ ಏನು ಘೋಷಣೆ ಮಾಡಿದ್ದಾರೆ, ಅದು ಅನುಷ್ಠಾನಕ್ಕೆ ಆಗಿದ್ಯಾ ಹೇಳಿ? ನಿರ್ಮಲಾ ಸೀತಾರಾಮನ್ ಅವರು ಎರಡು ಸರಿ ಇಲ್ಲಿಂದಾನೆ ಆರಿಸಿ ಹೋಗಿರೋದು. ಅಟ್ ಲೀಸ್ಟ್ ಕನ್ನಡಿಗರಿಗೆ ಒಂದು ಸ್ವಲ್ಪ ಮಟ್ಟಿಗಾದರೂ ಋಣ ತೀರಿಸಬಹುದಿತ್ತಲ್ವಾ? ಈಗ ನಾವು ಯಾವ ಸ್ಥಿತಿಗೆ ಬಂದುಬಿಟ್ಟಿದ್ದೀವಿ ಅಂದ್ರೆ ಕರ್ನಾಟಕ, ಕರ್ನಾಟಕದವರು ನಾವು, ನಮ್ಮ ಜಿಎಸ್ಟಿ ಪಾಲ್ ಬಂದ್ರೆ ಸಾಕಾಗಿದೆ ನಮಗೆ. ನಾವೇನು ಜೆ.ಜೆ.ಎಂ ನಲ್ಲಿ 15 ಸಾವಿರ ಕೋಟಿ ರೂಪಾಯಿ ಹಣ ಕೊಟ್ಟಿದೀವಿ, ಅದು ಬಂದ್ರೆ ಸಾಕಾಗಿದೆ, ನಾವೇನು ತೆರಿಗೆ ಕೊಡ್ತಾ ಇದ್ದೀವಿ, ಅದರ ಪಾಲ್ ಬಂದ್ರೆ ಸಾಕಾಗಿದೆ ನಮಗೆ. ಈ ಮೋದಿ ಸರ್ಕಾರದಿಂದ ಇರಬಹುದು, ಕೇಂದ್ರ ಸರ್ಕಾರದಿಂದ ಇರಬಹುದು, ಈ ಬಜೆಟ್ ಇಂದ ಇರಬಹುದು ಶೂನ್ಯ ನಿರೀಕ್ಷೆ ಇದೆ. ನಮ್ಮ ಪಾಲು ನಮ್ಗೆ ಕೊಡಿ ಸ್ವಾಮಿ ನಾವು, ದೇಶಾನೂ ಕಟ್ತೀವಿ, ರಾಜ್ಯಾನೂ ಕಟ್ತೀವಿ.
ಲೋಕಾಯುಕ್ತ ಟ್ರ್ಯಾಪ್ :
ಪೊಲೀಸ್ ಆಫೀಸರ್ಸ್ ಯಾರು ಉಪ್ಪು ತಿಂದಿದ್ದಾರೆ, ಅವರು ನೀರು ಕುಡಿಲೇಬೇಕಾ? ಈಗ ಲೋಕಾಯುಕ್ತ ಟ್ರ್ಯಾಪ್ ಮಾಡೋದು ತಪ್ಪು ಅಂತ ಯಾಕ್ ಹೇಳಬೇಕು? ನಾವು ನಮ್ಮನ್ನ ತಿದ್ಕೋಬೇಕಲ್ವಾ?
ನಾನು ಕ್ಲೀನ್ ಇದ್ದರೆ, ನಾನು ಶುದ್ಧನಾಗಿದ್ದರೆ, ನನಗೆ ಏನಕ್ಕೆ ಹೆದರಿಕೆ? ನಾನು ಪ್ರಾಮಾಣಿಕನಾಗಿದ್ದರೆ ನಾನು ಯಾರಿಗೆ ಲೋಕಾಯುಕ್ತಕ್ಕೂ ಹೆದರೋದು ಬೇಡ, ಸರ್ಕಾರಕ್ಕೂ ಹೆದರೋದು ಬೇಡ. ನೀವು ಪ್ರಾಮಾಣಿಕರಿಲ್ಲ ಅಂದ್ರೆನೇ, ಇದು ಟ್ರಾಪ್ ಆಗ್ತದೆ. ಇದು ಮಾಡೋದು ತಪ್ಪು ಅಂತ ನಾವು ಹೆಂಗೆ ಹೇಳಕ್ಕೆ ಆಗ್ತದೆ? ಜನ ಆಯ್ಕೆ ಮಾಡಿರೋದು ಒಂದು ಭ್ರಷ್ಟಾಚಾರ ಮುಕ್ತ ಆಡಳಿತ ಕೊಡಲಿಕ್ಕೆ. ಅದಕ್ಕೆ ನಾವು ಭದ್ರಾಗಿದ್ದೇವೆ. ಯಾರು ಕೂಡ ಟ್ರಾಪ್ ಆಗಿರಬಹುದು ಅಥವಾ ಹೆಂಗೆ ಹೆಂಗೆ ಭ್ರಷ್ಟಾಚಾರದಲ್ಲಿ ತೊಡಗಿರಬಹುದು, ನಮ್ಮ ಸರ್ಕಾರ ಜೀರೋ ಟಾಲರೆನ್ಸ್ ಇದೆ. ಎಂದು ಪ್ರಿಯಾಂಕ ಖರ್ಗೆ ತಿಳಿಸಿದರು.
![]()
