January 2026
M T W T F S S
 1234
567891011
12131415161718
19202122232425
262728293031  
January 29, 2026

c24kannada

ವಸ್ತುಸ್ಥಿತಿಯತ್ತ

ಹೆನ್ನಾಗರ ಅರ್ಕಾರಿ ಶಾಲಾ ಮಕ್ಕಳೊಂದಿಗೆ ಪಂಚಾಯಿತಿಯಿಂದ ಗಣ ರಾಜ್ಯೋತ್ಸವ ಆಚರಣೆ.

ಹೆನ್ನಾಗರ ಪಂಚಾಯಿತಿಯಿಂದ ಸರ್ಕಾರಿ ಶಾಲಾ ಮಕ್ಕಳ ಜೊತೆ ಗಣರಾಜ್ಯೋತ್ಸವ ಆಚರಣೆ.
Share it

ಆನೇಕಲ್. ಜ.26-ಭಾರತಕ್ಕೆ ಸಂವಿಧಾನ ಜಾರಿಯಾದ ದಿನ ಹಕ್ಕುಗಳ ಜೊತೆ ಕರ್ತವ್ಯವನ್ನು ಸಹ ನೀಡಿದೆ ಎಂದು
ಹೆನ್ನಾಗರ ಗ್ರಾಮ ಪಂಚಾಯತಿ ಅದ್ಯಕ್ಷ ಕೆ.ವಿನಯ್ ಹೇಳಿದರು.
ಅವರು ಆನೇಕಲ್ ತಾಲೂಕಿನ ಹೆನ್ನಾಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಆಯೋಜನೆ ಮಾಡಿದ್ದ 77 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಮಕ್ಕಳು ಭಾರತದ ಸಂವಿಧಾನದ ಅಡಿಯಲ್ಲಿ ಉತ್ತಮವಾದ ಭವಿಷ್ಯ ರೂಪಿಸಿಕೊಂಡು ಸಮಾಜದಲ್ಲಿ ತಮ್ಮದೇ ಆದ ಚಾಪು ಮೂಡಿಸುವ ಕೆಲಸ ಮಾಡಬೇಕು, ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡಲು ಹಲವಾರು ಜನ ಶ್ರಮಿಸಿದ್ದಾರೆ ಅವರ ತ್ಯಾಗ ಬಲಿದಾನವನ್ನು ನಾವು ಈ ಸಂದರ್ಭದಲ್ಲಿ ನೆನೆಸಿಕೊಳ್ಳುವ ಕೆಲಸ ಮಾಡಬೇಕೆಂದರು.
ನಮ್ಮ ಜೀವನದಲ್ಲಿ ಒಗ್ಗಟ್ಟನ್ನು ಅಳವಡಿಸಿಕೊಂಡು ನಾವೆಲ್ಲರೂ ಒಂದೇ ಎನ್ನುವ ಭಾವನೆಯಿಂದ ಬದುಕುವಂತಾಗಬೇಕು ಸಮಾಜದಲ್ಲಿನ ಅಂಕುಡೊಂಕುಗಳನ್ನು ಸರಿಪಡಿಸಿಕೊಂಡು ಉತ್ತಮವಾದ ಜೀವನ ರೂಪಿಸಿಕೊಂಡು ಉತ್ತಮ ಸಮಾಜ ಕಟ್ಟುತ್ತೇವೆ ಎನ್ನುವ ಸಂಕಲ್ಪ ಮಾಡಬೇಕು ಎಂದರು.
ಗ್ರಾಪ‌ ಪಂಚಾಯತಿ ಉಪಾಧ್ಯಕ್ಷೆ ಅರುಣಾ ಮಂಜುನಾಥ್ ‌ಮಾತನಾಡಿ, ಭಾರತದ ಸಂವಿಧಾನಕ್ಕೆ ಇರುವ ಶಕ್ತಿ ಯಾವುದೇ ದೇಶದಲ್ಲಿಯೂ ಇಲ್ಲ ಅಂತಹ ಸಂವಿಧಾನವನ್ನು ನಾವೆಲ್ಲರೂ ಉಳಿಸಿ ಬೆಳೆಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲ ಮಕ್ಕಳು ನಡೆಸಿಕೊಟ್ಟ ಭಾಷಣ ಹಾಗೂ ನೃತ್ಯ ನೆರೆದಿದ್ದವರ ಗಮನ ಸೆಳೆಯಿತು
ಕಾರ್ಯಕ್ರಮದಲ್ಲಿ ಲಕ್ಷ್ಮಿನಾಗೇಶ್,ಕುಮಾರ್,ಶ್ರೀನಿವಾಸ್, ಎಸ್.ಡಿ.ಎಂ.ಸಿ.ಯಲ್ಲಪ್ಪ,ಕಾಸಿನ್ಸಾಬ್,ಮುಖ್ಯೋಪಾದ್ಯಾಯಿನಿ ಅಂಬುಜಾ ಮತ್ತಿತರರು ಹಾಜರಿದ್ದರು.

Loading

Leave a Reply

Your email address will not be published. Required fields are marked *

error: Content is protected !!