ಇಂಗ್ಲಿಷ್ ಭಾಷೆ ಉದ್ಯೋಗಕ್ಕಾಗಿ, ಕನ್ನಡ ಉಸಿರಾಗಿಸಿಕೊಳ್ಳಿ, – ಶಶಿಧರ್ ಕರೆ.
ಇಂಗ್ಲಿಷ್ ಭಾಷೆ ಉದ್ಯೋಗಕ್ಕಾಗಿ, ಕನ್ನಡ ಉಸಿರಾಗಿಸಿಕೊಳ್ಳಿ, – ಶಶಿಧರ್ ಕರೆ.
ಬೆಂ,ಆನೇಕಲ್,ಜ,15: ಆಂಗ್ಲ ಭಾಷೆ ತಾಂತ್ರಿಕ ರಂಗದಲ್ಲಿ ಉದ್ಯೋಗಕ್ಕಾಗಿ ಬೇಕು ಆದರೆ ತಾಯಿ ಭಾಷೆ ಕನ್ನಡ ಉಸಿರಾಗಿಸಿಕೊಳ್ಳಿ ಎಂದು ಎಸ್ ಕೆ ಪಬ್ಲಿಕ್ ಶಾಲೆ ಕಾರ್ಯದರ್ಶಿ ಶಶಿಧರ್ ಮಾತನಾಡಿದರು.
ತಾಯಿ ಭಾಷೆಯ ಋಣ ತೀರಿಸಲು ಅಸಾಧ್ಯ, ಕವಿಗಳು ಸಮಾಜದಲ್ಲಿ ಬಹುದೊಡ್ಡ ಸ್ಥಾನಮಾನಗಳನ್ನು ಪಡೆದುಕೊಂಡಿರುತ್ತಾರೆ ಅವರು ನೀಡುವ ಸಂದೇಶಗಳು ಸಮಾಜವನ್ನು ಬದಲು ಮಾಡಬಲ್ಲವು ಇಂದಿನ ಯುವಕರಿಗೆ ಸಾಹಿತ್ಯದ ಒಲವು ಹೆಚ್ಚು ಆಗುತ್ಯವಿದೆ. ಎಂದರು.
ಬೊಮ್ಮಸಂದ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ಏರ್ಪಡಿಸಿದ್ದ ‘ಅಂಗಳದಲ್ಲಿ ಸಂಕ್ರಾಂತಿ ಕವಿತೆ’ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವ ಕವಿ ಸಂಘಟಕ ನಾಗಲೇಖ ಮಾತನಾಡಿ ಕವಿಗೋಷ್ಠಿಗಳು ಕವಿಗಳಿಗೆ ಪುಷ್ಟಿ ನೀಡುತ್ತವೆ. ಅಲ್ಲಿ ಬಳಸುವ ಪದಗಳು ಅವರ ಬದುಕನ್ನು ಬದಲು ಮಾಡಿ ಉತ್ತಮ ಕವಿತೆಗಳನ್ನು ಬರೆಯಲು ಸಾಧ್ಯವಾಗುತ್ತದೆ ಸಮಾಜದಲ್ಲಿ ಯಾರನ್ನು ನೋಡಿ ಅಪಹಾಸ್ಯ ಮಾಡಬಾರದು ಎಲ್ಲರೂ ಒಂದಲ್ಲ ಒಂದು ವಿಷಯದಲ್ಲಿ ಪರಿಣಿತಿಯನ್ನು ಹೊಂದಿರುತ್ತಾರೆ ಸಂಕ್ರಾಂತಿ ನಮ್ಮ ಕೃಷಿಕರ ಬದುಕನ್ನು ಬಿಂಬಿಸುವ ಸಾಂಸ್ಕೃತಿಕ ಹಾಗೂ ವೈಜ್ಞಾನಿಕ ಹಬ್ಬವಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಾಹಿತ್ಯದಲ್ಲಿ ಸಂಕ್ರಾಂತಿ ಎಂಬ ವಿಷಯ ಮಂಡನೆಯನ್ನು ಕವಿ ವಿಭ ಪುರೋಹಿತ್ ಮಂಡಿಸಿದರು
ಸರ್ವೋದಯ ಯೋಗ ಫೌಂಡೇಶನ್ ಯೋಗ ಗುರು ಶಾಮಣ್ಣ ಸ್ವಾಮಿ ಆಹಾರ ವಿಚಾರ ವಿಹಾರಗಳನ್ನು ಯುವಕರು ಪಾಲಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ಆದೂರು ಪ್ರಕಾಶ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಅಪ್ಸರ್ ಆಲಿಖಾನ್, ಚುಟುಕು ಶಂಕರ್, ಈರಣ್ಮಯಿ ಮಧುಕುಮಾರ ಚಂದನ ಸುಜಾತ ಬಸವರಾಜು ಶರಣಬಸಪ್ಪ ಸಂಜೀವ ಕಾವ್ಯ ಇದ್ದರು.
![]()