Uncleaned PG locked ಶುಚಿತ್ವ ಹೊಂದಿರದ 10 ಪಿಜಿ ಗಳಿಗೆ ದಕ್ಷಿಣ ನಗರ ಪಾಲಿಕೆಯಿಂದ ಬೀಗ
ಬೆಂಗಳೂರು, ಜನವರಿ- 12
Uncleaned PG locked ಶುಚಿತ್ವ ಹೊಂದಿರದ 10 ಪಿಜಿ ಗಳಿಗೆ ದಕ್ಷಿಣ ನಗರ ಪಾಲಿಕೆಯಿಂದ ಬೀಗ
ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಆಯುಕ್ತರ ಆದೇಶದಂತೆ ದಿನಾಂಕ : 12-01-2026 ರಂದು ಜಯನಗರ, ಬೆಂಗಳೂರು ದಕ್ಷಿಣ, ಬಿಟಿಎಂ ಲೇಔಟ್ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಪೇಯಿಂಗ್ ಗೆಸ್ಟ್ ವಸತಿ ಗೃಹಗಳಲ್ಲಿ ಶುದ್ಧ ಕುಡಿಯುವ ನೀರು, ಶುಚಿತ್ವ, ಅಡುಗೆ ಕೋಣೆ ನೈರ್ಮಲ್ಯ, ಸುರಕ್ಷತೆ, ಉತ್ತಮ ಶೌಚಾಲಯ ವ್ಯವಸ್ಥೆ, ಅಗ್ನಿಶಾಮಕ ಸಾಧನಗಳು ಹಾಗೂ ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಕೆ ಮತ್ತು FSSAI ನ ಆಹಾರ ಸುರಕ್ಷತಾ ಪ್ರಮಾಣ ಪತ್ರ ಇತ್ಯಾದಿ ಮೂಲಭೂತ ಸೌಕರ್ಯಗಳು ಇರುವ ಬಗ್ಗೆ ಒಟ್ಟು 66 ಪೇಯಿಂಗ್ ಗೆಸ್ಟ್ ವಸತಿಗೃಹ ಉದ್ದಿಮೆಗಳನ್ನು ತಪಾಸಣೆ ನಡೆಸಲಾಗಿರುತ್ತದೆ.
ಪಿ.ಜಿ. ಗಳನ್ನು ನಡೆಸುತ್ತಿರುವವರಿಗೆ ತಿಳುವಳಿಕೆ ಪತ್ರಗಳನ್ನು ಜಾರಿ ಮಾಡಲಾಗಿದ್ದು, ಉದ್ದಿಮೆದಾರರು ಏಳು ದಿನಗಳ ಒಳಗಾಗಿ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು, ಕಾರ್ಯನಿರ್ವಹಣೆ ಮಾಡುವುದಕ್ಕೆ ಸೂಚಿಸಲಾಗಿರುತ್ತದೆ.
ಈ ದಿನ ತಪಾಸಣೆ ನಡೆಸಿದ ಪಿ.ಜಿ. ಉದ್ದಿಮೆಗಳಲ್ಲಿ ಕಂಡು ಬಂದ ನ್ಯೂನ್ಯತೆಗಳಿಗೆ ಒಟ್ಟು ರೂ.22,500/- (ರೂ. ಇಪ್ಪತ್ತೆರಡು ಸಾವಿರದ ಐನ್ನೂರು) ಗಳ ದಂಡವನ್ನು ವಿಧಿಸಲಾಗಿದೆ.
ಹತ್ತು ಪೇಯಿಂಗ್ ಗೆಸ್ಟ್ ವಸತಿ ಗೃಹಗಳ ಅಡುಗೆ ಕೋಣೆಗಳು ಶುಚಿತ್ವ ಇಲ್ಲದೇ ನಡೆಸುತ್ತಿರುವ ಹಿನ್ನಲೆಯಲ್ಲಿ ಬೀಗ ಮುದ್ರೆ ಹಾಕಲಾಗಿರುತ್ತದೆ. (ಪತ್ರಿಕಾ ಪ್ರಕಟಣೆ ಲಗತ್ತಿಸಿದೆ)
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಡಾ|| ಬಾಲಸುಂದರ್
ಆರೋಗ್ಯಾಧಿಕಾರಿ
ಮೊಬೈಲ್ ಸಂಖ್ಯೆ 9480688300
![]()