ಡಿ7ರಂದು ನಾಡು ನುಡಿಗಾಗಿ ಕಜಾವೇ ಬೃಹತ್ ಪಥ ಸಂಚಲನಕ್ಕೆ – ಕೆ ಮಂಜುನಾಥದೇವ ಕರೆ

ಆನೇಕಲ್:
ಕನ್ನಡಿಗರ ಐಕ್ಯತೆ,ಸಮಗ್ರತೆ, ಸಾರ್ವಭೌಮತೆ, ಹಾಗೂ ಕನ್ನಡ ಭಾಷೆ ಉಳಿಸುವ ಜಾಗೃತಿಗಾಗಿ
ಬೃಹತ್ ಪಥ ಸಂಚಲನ ಹಾಗೂ ವಿವಿಧ ಕ್ಷೇತ್ರದ ಸಾದಕರಿಗೆ ಸನ್ಮಾನ ಕಾರ್ಯಕ್ರಮವನ್ನು ಇದೇ ಡಿ 7ರ ಭಾನುವಾರ ಅತ್ತಿಬೆಲೆಯಲ್ಲಿ ಆಯೋಜನೆ ಮಾಡಲಾಗಿದೆ
ಎಂದು ಕನ್ನಡ ಜಾಗೃತಿ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ ಮಂಜುನಾಥ ದೇವ ನುಡಿದರು.
ಅವರು ಅತ್ತಿಬೆಲೆಯ ಖಾಸಗೀ ಹೋಟೆಲೊಂದರಲ್ಲಿ ಕರೆದಿದ್ದ ಪತ್ರಿಕಾಘೋಷ್ಟಿಯಲ್ಲಿ ಮಾತನಾಡುತ್ತಾ
ಪಥ ಸಂಚಲನ ಉದ್ಘಾಟನೆಯನ್ನು ಸಂಸದ ಡಾ ಸಿಎನ್ ಮಂಜುನಾಥ್ ಹಾಗೂ ಶಾಸಕ ಬಿ.ಶಿವಣ್ಣ ಚಾಲನೆ ನೀಡಲಿದ್ದಾರೆಂದರು.
ಮುಂದುವರೆದು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕನ್ನಡಿಗ ಮತ್ತು ಕನ್ನಡ ಭಾಷೆಯ ಮೇಲೆ ಪ್ರತಿದಿನ ದೌರ್ಜನ್ಯ, ನಡೆದರೂ, ಆಳುವ ಸರ್ಕಾರಗಳು ಅಂತಹವರ ವಿರುದ್ಧ ಕಠಿಣ ಕಾನೂನು ರೂಪಿಸುವಲ್ಲಿ ವಿಫಲವಾಗುತ್ತಿವೆ ಹಾಗಾಗಿ ಕನ್ನಡಗರು ತಮ್ಮ ಜವಾಬ್ದಾರಿ ನಿರ್ವಹಿಸಲು ಜಾಗೃತಿ ಮೂಡಿಸುವಂತಹ ಕನ್ನಡಿಗರ ಸ್ವಾಭಿಮಾನಕ್ಕಾಗಿ ರಾಜ್ಯದಲ್ಲಿ ಮೊದಲ ಬಾರಿಗೆ ಬೃಹತ್ ಪಥ ಸಂಚಲನವನ್ನು ಹಮ್ಮಿಕೊಳ್ಳಲಾಗಿದೆ, ಅದಕ್ಕಾಗಿ ಎಲ್ಲಾ ಕನ್ನಡ ಅಭಿಮಾನಿಗಳು, ಕನ್ನಡ ಪರ ಸಂಘಟನೆಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಸಾವಿರಾರರು ಕನ್ನಡದ ಕಾರ್ಯಕರ್ತರು, ಮಹಿಳೆಯರು ಕಾರ್ಮಿಕರು ಕನ್ನಡದ ಧ್ವಜಗಳನ್ನು ಹಿಡಿದು ಅತ್ತಿಬೆಲೆ ಗಡಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನವನ್ನು ಸೇರಿದಂತೆ ಎಲ್ಲರು ಕಾರ್ಯಕ್ರಮದಲ್ಲಿ ಭಾಗವಾಹಿಸಿ ಯಶ್ವಸಿಗೊಳಿಸಬೇಕೆಂದು ಕರೆ ನೀಡಿದರಲ್ಲದೆ ಕಾರ್ಯಕ್ರಮಕ್ಕೆ ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿ, ಸೇರಿದಂತೆ ಆನೇಕ ಗಣ್ಯರು ಭಾಗವಾಹಿಸಲಿದ್ದಾರೆಂದರು.
ಗೋಷ್ಠಿಯಲ್ಲಿ ಕಜಾವೇ ಪದಾಧಿಕಾರಿಗಳಾದ ಕೆ, ನಾಗರಾಜು, ಮಹಿಳಾ ಘಟಕ ಅಧ್ಯಕ್ಷೆ ನಾಗರತ್ನಮ್ಮ, ಜಯಂತಿ, ಭಾಷಾ,ರಮೇಶ್, ಮಧು, ವಸಂತ್, ಹಾಜರಿದ್ದರು,
![]()