November 2025
M T W T F S S
 12
3456789
10111213141516
17181920212223
24252627282930
January 10, 2026

ಕೊನೆಗೂ ಬಂಧನಕ್ಕೊಳಗಾದ ಕಾಮಕಾಂಡದ ಸ್ಕ್ಯಾನಿಂಗ್ ರೇಡಿಯಾಲಜಿಸ್ಟ್.

Share it

ಕೊನೆಗೂ ಬಂಧನಕ್ಕೊಳಗಾದ ಕಾಮಕಾಂಡದ ಸ್ಕ್ಯಾನಿಂಗ್ ರೇಡಿಯಾಲಜಿಸ್ಟ್.

ಆನೇಕಲ್ ಸರ್ಕಾರಿ ಆಸ್ಪತ್ರೆಯ ಸಲಹೆಯಂತೆ ಸ್ಕ್ಯಾನಿಂಗ್ ವರದಿಗೆ ತೆರಳಿದ ಮಹಿಳೆಯ ಖಾಸಗೀ ಅಂಗಾಂಗ ಉದ್ರೇಕಿಸಿದ ಆರೋಪ ಹೊತ್ತ ಆನೇಕಲ್ ಪ್ಲಾಸ್ಮಾ ಮೆಡಿನೋಸ್ಟಿಕ್ಸ್ ರೇಡಿಯಾಲಜಿಸ್ಟ್ ಜಯಕುಮಾರ್ನನ್ನು ಬಂಧಿಸುವಂತೆ ಬೀದಿಗಿಳಿದ ಕರವೇ ಲೋಕೇಶ್ ಗೌಡ ನೇತೃತ್ವದ ಹೋರಾಟದ ಬಿಸಿಗೆ ಆನೇಕಲ್ ಪೊಲೀಸರು ಬಂಧಿಸಿದ್ದಾರೆ.

ಜಯಕುಮಾರ್ರನ್ನ ಬಂಧಿಸುವಂತೆ ಎಸ್ಡಿಪಿಐ ಕೆಆರ್ಎಸ್ ಮತ್ತಿತರರ ಸಹಕಾರದಲ್ಲಿ ಕರವೇ ಶಿವರಾಮೇಗೌಡ ಬಣ ಎಷ್ಟೇ ಗಡುವು ನೀಡಿದರೂ ಬಂಧಿಸದ ಪೊಲೀಸರ ನಡೆಗೆ ಬೇಸೆತ್ತ ಹೋರಾಟಕ್ಕೆ ಪೊಲೀಸರು ಜಯಕುಮಾರ್ ನನ್ನು
ಬಂಧಿಸಿದ್ದಾರೆ.

10 ದಿನದ ಹಿಂದೆ ರೇಷ್ಮಾ ಹೊಟ್ಟೆ ನೋವೆಂದು ಪತಿಯೊಂದಿಗೆ ಸ್ಕ್ಯಾನಿಂಗ್​ ಮಾಡಿಸಿಕೊಳ್ಳಲೆಂದು ಸ್ಕ್ಯಾನಿಂಗ್ ಸೆಂಟರ್​​ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಲೈಂಗಿಕವಾಗಿ ಆಕೆಯ ಅಂಗಾಂಗಗಳನ್ನು ಪ್ರಚೋದಿಸಿದ್ದ ಇದು ಆಕೆಯ ಮೊಬೈಲ್ನಲ್ಲಿ ಸೆರೆಯಾಗಿದ್ದು ವೈರಲ್ ಆಗಿತ್ತು.
ನಂತರ ಅದೇ ಸ್ಕ್ಯಾನಿಂಗ್ ಸೆಂಟರ್ ಮುಂದೆ ಜಮಾಯಿಸಿದ್ದ ಜನ ನ್ಯಾಯಕ್ಕೆ ಆಗ್ರಹಿಸಿದ್ದರು ಆಗಲೇ ಸ್ಕ್ಯಾನಿಂಗ್ ಹುಡುಗರು ಜನರಗಮನ ಬೇರೆಡೆಗೆ ಸೆಳೆದು ಜಯಕುಮಾರ್ ನನ್ನು ಪರಾರಿ ಮಾಡಿದ್ದರು.

ಅನಂತರ ಡಿವೈಎಸ್ಪಿ ಮೋಹನ್ ಕುಮಾರ್, ಜಯಕುಮಾರ್ ತಂದೆಯನ್ನ ಆನೇಕಲ್ ಠಾಣೆಗೆ ಕರೆಸಿ ಕೂಡಲೇ ಮಗನನ್ನ ಒಪ್ಪಿಸಿ ಎಂದಿದ್ದರು ಆದರೂ ಯಾವುದೇ ಬಂಧನದ ಸುಳಿವಿನ ಭರವಸೆ ಸಂತ್ರಸ್ಥೆಯ ಕಡೆಯವರೆಗೆ ಸಿಕ್ಕಿರಲಿಲ್ಲ. ಪೊಲೀಸರು ಎಷ್ಟೇ ಬಾಯಿ ಮಾತಿನ ಭರವಸೆ ಗಡಿ ನೀಡಿದ್ದೇ ಆಯಿತು. ‍

ಇಷ್ಟೆಲ್ಲಾ ಬೀದಿ ರಂಪಾಟಕ್ಕೆ ಎಡೆ ಮಾಡಿಕೊಟ್ಟ ಪೊಲೀಸರ ನಡೆಗೆ ರೊಚ್ಚಿಗೆದ್ದ ಹೋರಾಟಗಾರರ ಬಿಸಿಗೆ ಆನೇಕಲ್ ಪೊಲೀಸರು ಜಯಕುಮಾರ್ನನ್ನು ಬಂಧಿಸಿ ಜೈಲಿಗಟ್ಟುವ ಪ್ರಕ್ರಿಯೆಯತ್ತ ಮುಖ ಮಾಡಿದ್ದಾರೆ.

ಇದರಿಂದ ಸುಲಭವಾಗಿ ಸಾಮಾನ್ಯರ ಪರವಾದ ಕ್ರಮ ಜರುಗಿಸಲ್ಲ ಎನ್ನುವುದು ಆನೇಕಲ್ ಜನತೆಗೆ ಮನವರಿಕೆಯಾಗಿದೆ.

 

Loading

Leave a Reply

Your email address will not be published. Required fields are marked *

error: Content is protected !!