ಆನೇಕಲ್ ರಸ್ತೆ ಗುಂಡಿಗಳು ಮೊದಲು ಮುಚ್ಚಿ, -ಜಯಕರ್ನಾಟಕ ಆಗ್ರಹ
1 min read

ತಾಲೂಕಿನಾಧ್ಯಂತ ರಸ್ತೆಗಳು ಗುಂಡಿಗಳಾಗಿದ್ದು ಸಂಚಾರಿಗಳು ನರಕ ಅನುಭವಿಸುತ್ತಿದ್ದಾರೆ ಕೂಡಲೇ ರಸ್ತೆ ಸರಿಪಡಿಸಿ ಎಂದು ಲೋಕೋಪಯೋಗಿ ಇಲಾಖೆ ಮುಂದೆ ಜಯಕರ್ನಾಟಕ ಸಂಘಟನೆ ಮನವಿ ಸಲ್ಲಿಸಿದೆ.
ಆನೇಕಲ್ ಪಟ್ಟಣದ ಲೋಕೋಪಯೋಗಿ ಇಲಾಖೆ ಎದುರು ಜಮಾಯಿಸಿದ ಜಯಕರ್ನಾಕ ಸಂಘಟನೆ ಕಾರ್ಯಕರ್ತರು ತಾಲೂಕಿನಲ್ಲಿ ಬಹುತೇಕ ಎಲ್ಲ ಕಡೆ ರಸ್ತೆಗಳಿ ಗುಂಡಿಗಳಾಗಿವೆ ಇದರಿಂದ ಸಂಚಾರಿಗಳು ಹೈರಾಣ ಆಗಿದ್ದಾರೆ. ತಾಲೂಕಿನ ಆಡಳಿತಕ್ಕೆ ಲಂಗು ಲಗಾಮು ಇಲ್ಲದಂತಾಗಿದ್ದು ಕಣ್ಈಗೆ ಕಾಣುವ ಸಾಮಾನ್ಯ ಕೊರತೆಗಳನ್ನ ಗಟ್ಟಿ ದನಿಯಾಗಿ ಹೋರಾಟ ಮಾಡುವ ಮನಸ್ಸುಗಳು ಇಲ್ಲವಾಗಿವೆ ಇದರ ಲಾಭ ಪಡೆದು ಜನ ಪ್ರತಿನಿಧಿಗಳು ಬಾಲಂಗೋಚಿಗಳಾಗುತ್ತಿದ್ದಾರೆ. ಇವೆಲ್ಲ ಇನ್ನ ನಡೆಯುವುದಿಲ್ಲ ಎಂದು ಜಿಲ್ಲಾ ಕಾರ್ಯದರ್ಶಿ ಕಿರಣ್ ಮಾತನಾಡಿದರು.
ಎಡಬಲ್ಇ ನಾರಾಯಣಸ್ವಾಮಿಯವರಿಗೆ ಮನವಿ ಮಾಡಿದ ಸಂಘಟನೆಯವರಿಗೆ ಕೂಡಲೇ ರಸ್ತೆ ಸರಿಮಾಡುವ ಭರವಸೆ ನೀಡಿದರು.
![]()

