ಬಿಗ್ ಬಾಸ್ ಮನೆಗೆ ಬೀಗ ಜಡಿದ ರಾಮನಗರ ತಜಶೀಲ್ದಾರ್, 17 ಸ್ಪರ್ದಿಗಳು ರೆಸಾರ್ಟ್ಗೆ ಶಿಫ್ಟ್!?
1 min read
ಈ ವರ್ಷದ ಬಹುನಿರೀಕ್ಷೆ ಹುಟ್ಟಿಸಿದ್ದ ಬಿಗ್ಬಾಸ್ ಸೀಸನ್ 12 ರ ರಂಗುರಂಗಿನ ಮನೆಗೆ ರಾಮನಗರ ತಹಶೀಲ್ದಾರ್ ತೇಜಸ್ವಿನಿ ಬೀಗ ಜಡಿದಿದ್ದಾರೆ.
ಒಳಗಡೆಯಿದ್ದ 17 ಸ್ಪರ್ದಿಗಳನ್ನು ಬಿಡದಿಯ ಈಗಲ್ಟನ್ ರೆಸಾರ್ಟ್ನ 15 ರೂಮುಗಳಿಗೆ ಸುರಕ್ಷಿತವಾಗಿ ಸಾಗಿಸಲಾಗಿದ್ದು. ಕಲರ್ಸ್ ಕನ್ನಡ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಷಾಧ ವ್ಯಕ್ತಪಡಿಸಿ ಶೋ ಮುಂದುವರೆಸುವ ಭರವಸೆ ನೀಡಿದೆ.
ರಾಮನಗರದಲ್ಲಿನ ಅಮ್ಯೂಸ್‌ಮೆಂಟ್ ಪಾರ್ಕ್ ಜಾಲಿವುಡ್ ಸ್ಟುಡಿಯೋಗೆ ದಿಡೀರ್ ಬೇಟಿ ನೀಡಿದ ತಹಶೀಲ್ದಾರ್ ಬಿಗ್ಬಾಸ್ ಮನೆಯ 17 ಸ್ಪರ್ದಿಗಳನ್ನ ಹೊರನಡೆಯುವಂತೆ ಹೇಳಿದ ಕೂಡಲೇ ಎಚ್ಚೆತ್ತ ಮೇಲ್ವಿಚಾರಕರು ಕಾರುಗಳಿಂದ ಸ್ಪರ್ದಿಗಳನ್ನ ರೆಸಾರ್ಟ್ಗೆ ಸಾಗಿಸಿದ್ದಾರೆ.
ಕಳೆದ ವರ್ಷದಿಂದ ತಾಲೂಕು ಆಡಳಿತ ಜಾಲಿವುಡ್ ಸ್ಟುಡಿಯೋದವರಿಗೆ ಪರಿಸರ ಇಲಾಖೆಯಿಂದ ಮಾಲಿನ್ಯ ಸರ್ಟಿಫಿಕೇಟ್ ಪಡೆಯಬೇಕೆಂದು ನೋಟೀಸ್ ನೀಡಿದ್ದರೂ ಈ ವರೆಗೆ ಪ್ರತಿಕ್ರಿಯಿಸದೆ ನಿರ್ಲಕ್ಷ್ಯ ತೋರಿದ ಬೆನ್ನಲ್ಲೇ ಕಂದಾಯ ಇಲಾಖೆ ಈ ಕ್ರಮವನ್ನು ಕೈಗೊಂಡಿದೆ.
ಶುರುವಾದ 10 ದಿನಕ್ಕೆ ಬಿಗ್ ಬಾಸ್ ಮನೆಗೆ ದಿಡೀರ್‌ಭೇಟಿ ನೀಡಿದ ತಹಶೀಲ್ದಾರ್ ತೇಜಸ್ವಿನಿ , ಎಲ್ಲಾ ಸ್ಪರ್ಧಿಗಳನ್ನ ಎಲಿಮಿನೇಟ್ ಮಾಡಿ ಇಡೀ ಬಿಗ್ಬಾಸ್ ಮನೆಗೆ ಬೀಗ ಮುದ್ರೆ ಹಾಕಿದ್ದಾರೆ.ರಾಮನಗರದಲ್ಲಿನ ಬಿಗ್ ಬಾಸ್‌೧೨ರ ಪ್ರದರ್ಶನಕ್ಕೆ ಅನಾಮತ್ತಾಗಿ ದಂಡಾಧಿಕಾರಿ ಬೀಗ ಹಾಕಿದ್ದು ಇಲ್ಲಿ ಶೋ ನಡೆಯುವ ಸಾಧ್ಯತೆಗೆ ಎಳ್ಳು ನೀರು ಬಿಟ್ಟಂತಾಗಿದೆ.
ಇಡೀ ಬಿಗ್ ಬಾಸ್ ನಡೆಯುವ ಉಸ್ತುವಾರಿಯ ಸ್ಥಳದಲ್ಲಿ ಪ್ಲಾಸ್ಟಿಕ್ ಪೇಪರ್ ಗ್ಲಾಸ್, ಡೀಸೆಲ್ ಜನರೇಟರ್ ಮತ್ತಿತರ ಪರಿಸರ ಮಾರಕ ಹೊಗೆ, ಕೊಳಚೆ ನೀರು ರಸಾಯನಿಕಗಳಿಂದ ಹಾನಿಯಾಗುತ್ತಿದ್ದನ್ನು ಮನಗಂಡು ತಹಶೀಲ್ದಾರ್ ಕ್ರಮ ತೆಗೆದುಕೊಂಡಿದ್ದಾರೆಂದು ಮೇಲ್ನೋಟಕ್ಕೆ ತಿಳಿದುಬಂದಿದೆ.
ಕೊಳಚೆ ನೀರನ್ನು ಸಂಸ್ಕರಿಸದೆ ಎಸ್ಟಿಪಿ ಘಟಕ ನಿರ್ಮಿಸದೆ ನೇರವಾಗಿ ಚರಂಡಿಗೆ ಬಿಟ್ಟಿದ್ದು ಕ್ರಮಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಈ ಶೋ ನಡೆಯುವ ಜಾಲಿವುಡ್ ಸ್ಥಳ ಹಸಿರುವಲಯದಲ್ಲಿದ್ರೂ ಪೂರ್ವಯೋಜಿತವಾಗಿ ನಿಯಮಗಳಂತೆ ಪರಿಸರ ಇಲಾಖೆಯ ಅನುಮತಿ ಪಡೆದಿರಲಿಲ್ಲ.
ಬಿಗ್ ಬಾಸ್ ಮನೆಗೆ ಬೀಗ ಜಡಿತ್ತಿಯುತ್ತಿದ್ದಂತೆ ಕಲರ್ಸ್ ಕನ್ನಡ, ಅಡಚಣೆಗಾಗಿ ಕ್ಷಮೆ ಕೋರುತ್ತೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಷಾದ ವ್ಯಕ್ತಪಡಿಸಿದೆ.
ಬಿಗ್ಬಾಸ್ ಶೋ ಕತೆ ಮುಂದೇನು ಅನ್ನೋದು ಪ್ರಶ್ನೆಯಾಗಿಯೇ ಉಳಿಯುವ ಸಂದರ್ಭದಲ್ಲಿಯೇ ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಿದ ಹಿನ್ನೆಲೆ, ರಾಮನಗರ ಜಿಲ್ಲಾಡಳಿತದ ಕ್ರಮವನ್ನು ಪ್ರಶ್ನಿಸಿ ಸ್ಟುಡಿಯೋ ಅಧಿಕಾರಿಗಳು ಹೈಕೋರ್ಟ್ಗೆ ಅರ್ಜಿ ಸಲ್ಲಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅರ್ಜಿ ಸಲ್ಲಿಸುವುದರ ಜೊತೆಗೆ ತುರ್ತು ವಿಚಾರಣೆ ನಡೆಸುವಂತೆ ಸಹ ಮನವಿ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇಂದು ಬೆಳಗ್ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ಈ ಗೊಂದಲದ ನಡುವೆ ಕಲರ್ಸ್ ಕನ್ನಡ ಬಿಗ್ಬಾಸ್ ವೀಕ್ಷಕರಿಗೆ ಬೆಳ್ಳಂಬೆಳಗ್ಗೆ ಪ್ರೊಮೋ ಶೇರ್ ಮಾಡಿದ್ದು, ಅದರಲ್ಲಿ ಸ್ಪರ್ಧಿಗಳು ಕಿತ್ತಾಡುತ್ತಿರೋದನ್ನ ಕಾಣಬಹುದಾಗಿದೆ
ಅದರಲ್ಲಿ ಊಟದ ವಿಚಾರಕ್ಕೆ ರಕ್ಷಿತಾ ಶೆಟ್ಟಿ ರೊಚ್ಚಿಗೆದ್ದಿದ್ದಾರೆ. ಇದರಿಂದ ಬಿಗ್ಬಾಸ್ ಮನೆಯಲ್ಲಿ ದೊಡ್ಡ ರಂಪಾಟವೇ ಆಗಿದೆ. ಪ್ರೊಮೋ ನೋಡಿದ ವೀಕ್ಷಕರು ಕೊಂಚ ಸಮಾಧಾನದಲ್ಲಿದ್ದಾರೆ.
ಬಿಗ್ಬಾಸ್ ನಿಲ್ಲಲ್ಲ. ಇವತ್ತೂ ಪ್ರಸಾರವಾಗಲಿದೆ. ಕಾನೂನು ಹೋರಾಟದ ಮೂಲಕ ಮನರಂಜನೆ ನೀಡಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ಸದ್ಯ ಬಿಗ್ಬಾಸ್ ಮನೆ ಮಾತ್ರ ಖಾಲಿ ಖಾಲಿಯಾಗಿದೆ. ಒಟ್ಟಾರೆ ಕನ್ನಡಿಗರ ಮನೆಮಾತಾಗಿರುವ ಬಿಗ್ಬಾಸ್ ಶೋ ಅರ್ಧಕ್ಕೆ ಸ್ಟಾಪ್ ಆಗುವ ಆತಂಕ ಎದುರಾಗಿದ್ದು, ಕೋರ್ಟ್ನ ಕಟಕಟೆಯಲ್ಲಿ ಬಿಗ್ಬಾಸ್ ಭವಿಷ್ಯ ನಿರ್ಧಾರವಾಗಲಿದೆ.
ಜಾಲಿವುಡ್ ಸ್ಟುಡಿಯೋಸ್ ಮತ್ತು ಎಂಟರ್ಟೇನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮೇನ್ ಡೋರ್ಗೆ ಬೆಂಗಳೂರು ದಕ್ಷಿಣ ಜಿಲ್ಲಾಡಳಿತದವರು ಬೀಗ ಹಾಕಿದ್ದಾರೆ. ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿ ಜಾಲಿವುಡ್ ಸ್ಟುಡಿಯೋಸ್ ಇದೆ.
ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕುತ್ತಿದ್ದಂತೆ ಸ್ಪರ್ಧಿಗಳಾದ ಕಾವ್ಯ ಶೈವ, ಗಿಲ್ಲಿ ನಟ, ಡಾಗ್ ಸತೀಶ್, ಚಂದ್ರಪ್ರಭ, ಅಭಿಷೇಕ್, ಮುದ್ದು ಲಕ್ಷ್ಮೀ ಖ್ಯಾತಿಯ ಅಶ್ವಿನಿ, ಮಂಜು ಭಾಷಿಣಿ, ರಾಶಿಕಾ, ಕಾಕ್ರೋಚ್ ಸುಧಿ, ಮಲ್ಲಮ್ಮ, ನಿರೂಪಕಿ ಜಾಹ್ನವಿ, ಧನುಷ್ ಗೌಡ, ಮುದ್ದು ಲಕ್ಷ್ಮೀ ಖ್ಯಾತಿಯ ನಟ ಧ್ರುವಂತ್, ನಟಿ ಅಶ್ವಿನಿ ಗೌಡ ಸೇರಿ ಎಲ್ಲರೂ ಒಬ್ಬೊಬ್ಬರೇ ಮನೆಯಿಂದ ಹೊರ ಬಂದಿದ್ದಾರೆ.
ಜಾಲಿವುಡ್ನವರು ಬಿಗ್ಬಾಸ್ ಹಾಗೂ ಎಂಡೋಮಾಲ್, ಕಲರ್ಸ್ ಅವರ ಜೊತೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ ಎನ್ನಲಾಗಿದೆ. ದೊಡ್ಡ ಬಜೆಟ್ನಲ್ಲಿ ಮಾಡುವ ಕಾರ್ಯಕ್ರಮದ ಬಗ್ಗೆ ಕಲರ್ಸ್ ಅವರು ಎಚ್ಚರಿಕೆ ವಹಿಸಬೇಕಿತ್ತು. ಇಂತಹ ಘಟನೆ ಯಾವಾಗಲೂ ನಡೆದಿರಲಿಲ್ಲ. ಕಳೆದ ಬಾರಿ ಸೀಸನ್ 11ರಲ್ಲಿ ಹುಲಿ ಉಗುರು ಧರಿಸಿದ ಸಂಬಂಧ ವರ್ತೂರು ಸಂತೋಷ್ ಅವರು ಜೈಲಿಗೆ ಹೋಗಿದ್ದರು. ಆದರೆ ಈ ಬಾರಿ ಎಲ್ಲ ಕಂಟೆಸ್ಟೆಂಟ್ಗಳನ್ನು ದೊಡ್ಮನೆಯಿಂದ ಹೊರಗೆ ಹಾಕಲಾಗಿದೆ..
