ದಲಿತ-ಮಹಿಳಾ ವಿರೋಧಿ ಬಸವನಗೌಡ ಯತ್ನಾಳ್ ರನ್ನ ಗಡೀ ಪಾರಿಗೆ ಆಗ್ರಹಿಸಿ ಕದಸಂಸ ಆಗ್ರಹ.
ಬೆಂ,ಆನೇಕಲ್,ಸೆ,21: ನಾಡ ಹಬ್ಬ ದಸರಾ ಉದ್ಘಾಟನೆಯಲ್ಲಿ ಚಾಮುಂಡೇಶ್ವರಿ ದೇವಿಗೆ ಹಾರ ಸಮರ್ಪಿಸುವ ಹಕ್ಕಿರುವುದು ಸನಾತನಿಗಳಿಗೆ ಎಂಬ ಮೊನ್ನೆಯ ಬಸವನಗೌಡ ಯತ್ನಾಳ್ ಹೇಳಿಕೆ ದಲಿತ ಸಮುದಾಯಕ್ಕಲ್ಲದೆ ಮಹಿಳೆಯರ ಭಾವನೆಗಳಿಗೆ ಘಾಸಿಯುಂಟುಮಾಡಿದೆ.
ಹೀಗಾಗಿ ಕಣ್ಣು ಮುಚ್ಚಿ ಕುಳಿತಿರುವ ಗೃಹ ಸಚಿವರು ಈಗಾಗಲೇ ಸುಮೋಟೋ ಮೂಲಕ ಅಟ್ರಾಸಿಟಿ ಪ್ರಕರಣ ದಾಖಲಿಸದಿರುವುದು ಖಂಡನೀಯ ಎಂದು ಆನೇಕಲ್ ತಾಲೂಕು ಕದಸಂಸ ಮುಖಂಡ ಮಾವಳ್ಳಿ ವೆಂಕಟೇಶ್ ಅತ್ತಿಬೆಲೆ ಪೊಲೀಸ್ ಇನ್ಸಫೆಕ್ಟರ್ ರಾಘವೇಂದ್ರ ಎಸ್ ಮೂಲಕ ಗೃಹ ಸಚಿವರಿಗೆ ಹಾಗು ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಮನವಿಯನ್ನು ರಾಜ್ಯ ಮಹಿಳಾ ಆಯೋಗಕ್ಕೂ ಮನವಿ ಸಲ್ಲಿಸಿದ ಸಂಘಟಕರು
ತಾಲ್ಲೂಕಿನ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಆಗ್ರಹಿಸಿ ಮಾತನಾಡಿ ‘ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವೆಂದು ರಾಷ್ಟ್ರಕವಿ ಕುವೆಂಪು ಸಾರಿದ ರೀತಿಯಲ್ಲಿ ಸೌಹಾರ್ದತೆಯ ನಾಡನ್ನು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹಾಳು ಮಾಡಲು ಹೊರಟ್ಟಿದ್ದಾರೆ. ಕೂಡಲೇ ಅವರನ್ನು ರಾಜ್ಯದಿಂದಲೇ ಗಡಿಪಾರು ಮಾಡಬೇಕೆಂದು ತಿಳಿಸಿದರು.
ನಾಡದೇವತೆ ಚಾಮುಂಡೇಶ್ವರಿ ದೇವಿಗೆ ದಲಿತ ಸಮುದಾಯದ ಮಹಿಳೆಯರು ಹೂಮಾಲೆ ಹಾಕುವ ಅಧಿಕಾರ ಇಲ್ಲವೆಂದು ಉದ್ಧಟತನವಾಗಿ ಮಾತನಾಡಿದ್ದಾರೆ. ಇಂತಹ ದಲಿತ ಹಾಗೂ ಮಹಿಳಾ ವಿರೋಧಿ ಯತ್ನಾಳ್ ಗೆ ಜನಪ್ರತಿನಿಧಿಯಾಗುವ ಯಾವುದೇ ಅರ್ಹತೆ ಇಲ್ಲ. ನಾಡಿನ ಜನತೆ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕೆಂದು ಅವರು ಹೇಳಿದರು.
ಯತ್ನಾಳ್ ಅವರ ಸಂವಿಧಾನ ವಿರೋಧಿ ಹೇಳಿಕೆ ವಿರುದ್ಧ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಕೂಡಲೇ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಯತ್ನಾಳ್ ಅವರನ್ನು ಬಂಧಿಸುವಂತೆ ಪೊಲೀಸ್ ಇಲಾಖೆಗೆ ಆದೇಶ ನೀಡಬೇಕು. ಈ. ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಈ ವೇಳೆ ದಸಂಸ ಮುಖಂಡರಾದ ಅತ್ತಿಬೆಲೆ ಚಂದ್ರು, ಶೋಷಿತ್, ಆನಂದ್, ಇಂಡ್ಲಬೆಲೆ ಮುನಿರಾಜು, ಅರೇನೂರು ಶಿವು, ವಿಶ್ವಕರ್ಮ ಮಹಾಸಭಾದ ಸೋಮಣ್ಣ, ನೆರಳೂರು ಶಿವು, ರಾಮಸ್ವಾಮಿ ಅತ್ತಿಬೆಲೆ, ಮೇಡಳ್ಳಿ ರಮೇಶ್, ಮಾಯಸಂದ್ರದ ವಿನೋದ್, ಶ್ರೀನಿವಾಸ್, ಸುರೇಶ್, ಚೆನ್ನವೀರ ಯಡವನಹಳ್ಳಿ, ಹೊಸಕೋಟೆ ಮುತ್ಸಂದ್ರ ಶಂಕರ್ ಮತ್ತಿತರರಿದ್ದರು.