ಬೆಳ್ಳಂಬೆಳಗ್ಗೆ ಹೊತ್ತಿಉರಿದ ವೇಸ್ಟ್ ಆಯಿಲ್ ಕಂಪೆನಿ. ಅಗ್ನಿಶಾಮಕ ದಳ ದೌಡು.
1 min read
ಬೆಳ್ಳಂಬೆಳಗ್ಗೆ ಹೊತ್ತಿಉರಿದ ವೇಸ್ಟ್ ಆಯಿಲ್ ಕಂಪೆನಿ. ಅಗ್ನಿಶಾಮಕ ದಳ ದೌಡು.
ಬೆಂ,ಆನೇಕಲ್,ಸೆ,07: ಬೆಳ್ಳಂಬೆಳಗ್ಗೆಯೇ ವೇಸ್ಟ್ ರೀಸೈಕಲ್ ಇಂಜಿನ್ ಆಯಿಲ್ ಕಂಪೆನಿಯೊಂದು ಬೆಂಕಿಗೆ ಹೊತ್ತಿಬುರಿದ ಘಟನೆ ಆನೇಕಲ್ ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸೂರ್ಯನಗರ-ರಾಮಸಾಗರ ಮುಖ್ಯರಸ್ತೆಯ ಹೀಲಲಿಗೆ ಗೇಟ್ ಮುಂದಿನ ವಿಶಾಲ್ ಟರ್ಬೋಟೆಕ್ ಕಂಪೆನಿ ಇದಾಗಿದ್ದು.
ಕೈ ಒರೆಸುವ ವೇಸ್ಟ್ಗೆ ಮೊದಲು ಬೆಂಕಿ ತಗುಲಿ ಅನಂತರ ಇಡೀ ಕಾರ್ಖಾನೆಗೆ ಬೆಂಕಿ ವ್ಯಾಪಿಸಿದೆ.
ಬಳಸಿದ ಇಂಜಿನ್ ಆಯಿಲ್ ನ್ನು ಮತ್ತೆ ಶುದ್ದೀಕರಿಸಿ ಮರುಬಳಕೆ ಮಾಡುವ ಕಂಪೆನಿ ಇದಾಗಿದೆ.
ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದು ಎಲೆಕ್ಟ್ರಾನಿಕ್ ಸಿಟಿ ಹಾಗು ಆನೇಕಲ್ ಅಗ್ನಿಶಾಮಕದಳದ ಮೂರು ವಾಹನಗಳು ಬಂದು ಬೆಂಕಿ ನಂದಿಸುವಲ್ಲಿ ಹರಸಾಹಸ ಪಟ್ಟಿವೆ.
ಬೆಳಗ್ಗೆಯಾದ್ದರಿಂದ ಕಾರ್ಮಿಕರ್ಯಾರು ಕಂಪೆನಿಯಲ್ಲಿಲ್ಲದ ಕಾರಣಕ್ಕೆ ಯಾರಿಗೂ ಅನಾಹುತ ಆಗಲಿಲ್ಲ ಎಂದು ಸೂರ್ಯನಗರ ಪೊಲೀಸರು ದೃಢಪಡಿಸಿದ್ದಾರೆ.
ಶೇಕಡ 75 ಭಾಗ ಕಂಪೆನಿ ಸುಟ್ಟಿದ್ದು ಪೊಲೀಸರು, ಸಾರ್ವಜನಿಕರು ಹಾಗು ಅಗ್ನಿಶಾಮಕ ದಳದ ಸಹಕಾರದಿಂದ ಬೆಂಕಿ ತಹಬಂದಿಗೆ ಬಂದಿದೆ ಎಂದು ತಿಳಿದುಬಂದಿದೆ.
