ಗೈರು ಹಾಜರಾದ 80 ಆನೇಕಲ್ ರೌಡಿಗಳ ಬಂಧಿಸಿ, -ಡಿವೈಎಸ್ಪಿ ಎಚ್ಚರಿಕೆ.
1 min read
ಗೈರು ಹಾಜರಾದ 80 ಆನೇಕಲ್ ರೌಡಿಗಳ ಬಂಧಿಸಿ, -ಡಿವೈಎಸ್ಪಿ ಎಚ್ಚರಿಕೆ.
ಎಲ್ಲ ರೌಡಿ ಚಟುವಟಿಕೆಗಳನ್ನ ಸ್ಥಗಿತಗೊಳಿಸಿ, ರೌಡಿಗಳಿಗೆ ಡಿವೈಎಸ್ಪಿ ಖಡಕ್ ಎಚ್ಚರಿಕೆ.
ಬೆಂ,ಆನೇಕಲ್,ಆ,16: ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಗೈರು ಹಾಜರಾದ ರೌಡಿ ಆಸಾಮಿಗಳನ್ನ ಕೂಡಲೇ ಬಂಧಿಸಿ ಜೈಲಿಗೆ ಕಳುಹಿಸಿ ಎಂದು ಬೆಂಗಳೂರು ಗ್ರಾಮಾಂತರ ಡಿವೈಎಸ್ಪಿ ಮೋಹನ್ ಕುಮಾರ್ ಪೊಲೀಸರಿಗೆ ಆಗ್ರಹಿಸಿದ್ದಾರೆ.
ಶನಿವಾರ ಆನೇಕಲ್ ಠಾಣೆಯಲ್ಲಿ ಡಿವೈಎಸ್ಪಿ ನೇತೃತ್ವದಲ್ಲಿ ರೌಡಿ ಪೆರೇಡ್ ನಡೆಯಿತು.
ಒಟ್ಟು ಠಾಣಾ ವ್ಯಾಪ್ತಿಯಲ್ಲಿ 113 ರೌಡಿ ಆಸಾಮಿಗಳಿದ್ದಾರೆ. ಅದರಲ್ಲಿ 20 ಪರಸ್ಥಳದವರಾದರೆ, 13 ಮಂದಿ ಈಗಾಗಲೇ ಪರಪ್ಪನ ಅಗ್ರಹಾರ ಕಾರಗೃಹದಲ್ಲಿದ್ದಾರೆ. ರೌಡಿ ಪೇರೇಡ್ ಗೆ ಬಂದಿರುವುದು ಮಾತ್ರ 30 ರೌಡಿಗಳು.
ಉಳಿದ 80 ರೌಡಿ ಹಾಳೆ ವ್ಯಕ್ತಿಗಳು ಗೈರು ಹಾಜರಾಗಿದ್ದಾರೆ. ಕರೆದಾಗ ಬಾರದಿರುವವರನ್ನು ಕೂಡಲೇ ಬಂಧಿಸಿ ಜೈಲಿಗೆ ಕಳುಹಿಸಿ ಎಂದು ಡಿವೈಎಸ್ಪಿ ಸೂಚಿಸಿದ್ದಾರೆ.
ಬಂದಿದ್ದ ರೌಡಿಗಳಿಗೆ ಆದಷ್ಟು ರಾತ್ರಿ ಸ್ವಂತ ಮನೆಯಲ್ಲಿಯೇ ಕುಟುಂಬ ಸಮೇತ ಇರಬೇಕು, ಭೂ ವ್ಯಾಜ್ಯ, ಗುಂಪುಗಾರಿಕೆ ಪಿತೂರಿ, ಓಡಾಟ, ಹಾರಾಟ ಇದ್ದರೆ ಈಗಲೇ ಪೊಲೀಸರ ಕಣ್ಣು ನಿಮ್ಮ ಮೇಲಿರುತ್ತದೆ, ಅಷ್ಟಲ್ಲದೆ ಕೋರ್ಟ್ ನಿಗಧಿ ಪಡಿಸಿದ ಪ್ರಕರಣಗಳಿಗೆ ತಪ್ಪದೆ ಹಾಜರಾಗಬೇಕು, ಎಲ್ಲ ಅಕ್ರಮ ಚಟುವಟಿಕೆಗಳನ್ನು ಬಂದ್ ಮಾಡಬೇಕು. ಉತ್ತಮರೆನಿಸಿಕೊಂಡು ಕುಟುಂಬದೊಂದಿಗೆ ಬಾಳ್ವೆ ಮಾಡಿಕೊಂಡು ಸಜ್ಜನರೆನಿಸಿದರೆ ರೌಡಿ ಹಾಳೆಯಿಂದ ಮುಕ್ತರಾಗಬಹುದು ಎಂದರು.
ವಯಸ್ಸಾದ, ನಿಷ್ಕ್ರಿಯ, ಪ್ರಕರಣಗಳನ್ನ ಇತ್ಯರ್ಥಪಡಿಸಿಕೊಂಡು ದೀರ್ಘ ಸನ್ನಡತೆ ತೋರಿದ ರೌಡಿಗಳನ್ನ ರೌಡಿ ಹಾಳೆಯಿಂದ ತೆಗೆಯುವ ಭರವಸೆ ನೀಡಿದರು.
ಪೆರೇಡ್ ನಲ್ಲಿ ಪಿಐ ತಿಪ್ಪೇಸ್ವಾಮಿ, ಪಿಎಸ್ಐ ಸಿದ್ದನಗೌಡ ಇನ್ನಿತರೆ ಸಿಬ್ಬಂದಿ ಇದ್ದರು.
