June 2025
M T W T F S S
 1
2345678
9101112131415
16171819202122
23242526272829
30  
January 29, 2026

c24kannada

ವಸ್ತುಸ್ಥಿತಿಯತ್ತ

ದಿನಗೂಲಿ ಕಾರ್ಮಿಕರಿಗೆ, ಜನಸಾಮಾನ್ಯರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಉತ್ಕೃಷ್ಟ ಊಟ.- ಶಾಸಕ ಬಿ ಶಿವಣ್ಣ

Share it

ದಿನಗೂಲಿ ಕಾರ್ಮಿಕರಿಗೆ, ಜನಸಾಮಾನ್ಯರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಉತ್ಕೃಷ್ಟ ಊಟ.- ಶಾಸಕ ಬಿ ಶಿವಣ್ಣ.

ಬೆಂ,ಆನೇಕಲ್,ಜೂ,13: ರಾಜ್ಯದಲ್ಲಿ ಹಸಿವಿನಿಂದ ಜನ ಮಲಗಬಾರದು ಎಂಬ ಸಿಎಂ ಸಿದ್ದರಾಮಯ್ಯರ ಕನಸು ಸಾಕಾರಗೊಳಿಸುವ ಯಶಸ್ವಿ ಕಾರ್ಯಕ್ರಮ ಇಂದಿರಾ ಕ್ಯಾಂಟೀನ್ ಆಗಿದೆ.

ಚಂದಾಪುರ ಭಾಗದ ವಲಸೆ ಕಾರ್ಮಿಕರು, ಸ್ಥಳೀಯ ಕಾರ್ಮಿಕರಿಗೆ ಹಾಗು ಜನಸಾಮಾನ್ಯರಿಗೆ ಉತ್ಕೃಷ್ಟವಾದ ಊಟ ತಿಂಡಿಯನ್ನು ಕಡಿಮೆ ದರದಲ್ಲಿ ಸರ್ಕಾರ ನೀಡಲಾಗುತ್ತಿದೆ.
ಸರ್ಕಾರದ ಎಲ್ಲ ಯೋಜನೆಗಳು ಸಮಾಜದ ಕಟ್ಟ ಕಡೆಯ ಬಡವರಿಗೆ ತಲುಪಲೇಬೇಕಾದ ಉದ್ದೇಶವನ್ನು ಸಿಎಂ ಸಿದ್ದರಾಮಯ್ಯ ಈ ನಿಟ್ಟಿನಲ್ಲಿ ಸಾಕಾರಗೊಳಿಸಿದ್ದಾರೆ ಎಂದು ಶಾಸಕ ಬಿ ಶಿವಣ್ಣ ಅಭಿಪ್ರಾಯಪಟ್ಟಿದ್ದಾರೆ.
ಆಧಾರವಿಲ್ಲದ ಸುಳ್ಳುಗಳನ್ನೇ ಬಂಡವಾಳ ಮಾಡಿಕೊಂಡಿರುವ ವಿರೋಧ ಪಕ್ಷಗಳ ಪ್ರತಿರೋಧದ ನಡುವೆ ಎರೆಡು ಬಾರಿ ಜನಮಾನಸದಲ್ಲಿ ಯಶಸ್ವಿಯಾಗಿ ಸರ್ಕಾರದ ಯೋಜನೆ ಯಶಸ್ವಿ ನಡೆಯನ್ನು ಮುಂದಡಿ ಇಡುತ್ತಿದೆ ಎಂದರು.

ಅವರು ಆನೇಕಲ್ ತಾಲೂಕಿನ ಚಂದಾಪುರದಲ್ಲಿ ನೂತನವಾಗಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ವೇದಿಕೆಯಲ್ಲಿ ಮಾತನಾಡುತ್ತಿದ್ದರು.

ಸಾಮಾನ್ಯವಾಗಿ ಹೋಟೆಲ್ನಲ್ಲಿ ಊಟ 22ರೂಪಾಯಿ ಇರುತ್ತದೆ ಆದರೆ 10ರೂಪಾಯಿಗೆ ಸರ್ಕಾರ ಇಡೀ ರಾಜ್ಯದಲ್ಲಿ ಬಡಜನರ ಪರವಾದ ಚಿಂತನೆಯೇ ಗ್ಯಾರಂಟಿ ಯೋಜನೆಗಳ ಜೀವಾಳ.

ಇಂದಿರಾ ಕ್ಯಾಂಟೀನ್ ಶುಚಿತ್ವ, ಗುಣಮಟ್ಟ, ಮೇಲುಸ್ತುವಾರಿ ಗುತ್ತಿಗೆದಾರರ ಮೇಲೆ ನಿಘಾ ವಹಿಸಬೇಕು.
ಗುತ್ತಿಗೆದಾರರ ನಿರ್ಲಕ್ಷ್ಯ ಸಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ರವಾನಿಸಿದರು.

ಮುಜರಾಯಿ-ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಟೇಪ್ ಕತ್ತರಿಸಿ ಚಾಲನೆ ನೀಡಿದರು. ಉಳಿದಂತೆ ಪಿಡಿ ಮಾದವಿ, ಸಿಇಒ ಶ್ರೀನಿವಾಸ್, ರಾಮೇಗೌಡ, ಪುರಸಭಾ ಸದಸ್ಯರು ಇದ್ದರು.

Loading

Leave a Reply

Your email address will not be published. Required fields are marked *

error: Content is protected !!