ಗಂಡ ಹೆಂಡತಿ ಮುಖಕ್ಕೆ ಜಿಮ್ ಡಂಬಲ್ಸ್ ನಿಂದ ಚಚ್ಚಿ ಚಚ್ಚಿ ಕೊಲೆ

ದೇವನಹಳ್ಳಿ : ಗಂಡ ಹೆಂಡತಿ ಮುಖಕ್ಕೆ ಜಿಮ್ ಡಂಬಲ್ಸ್ ನಿಂದ ಚಚ್ಚಿ ಚಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ವಿಜಯಪುರದಲ್ಲಿ ನಡೆದಿದೆ. ಹೆಂಡತಿಯನ್ನ ಕೊಂದು ನಂತರ ಗಂಡನೂ ನೇಣಿಗೆ ಶರಣಾಗಿದ್ದಾನೆ. ಶಾಮಣ್ಣ (40 ವರ್ಷ) ಮತ್ತು ಸುಮಾ (35 ವರ್ಷ) ಮೃತ ದುರ್ದೈವಿಗಳು. ಘಟನಾ ಸ್ಥಳಕ್ಕೆ ಎಸ್ಪಿ ಸಿ.ಕೆ.ಬಾಬಾ ಬೇಟಿ ನೀಡಿ ತನಿಖೆ ಚುರುಕುಗೊಳಿಸಿದ್ದಾರೆ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕೊಲೆ ಮಾಡಿ ನಂತರ ನೇಣಿಗೆ ಶರಣಾಗಿರುವಂತೆ ಪ್ರಾಥಮಿಕ ತನಿಖೆಯಲ್ಲಿ ಹೇಳಲಾಗ್ತಿದೆ. ಇನ್ನು ತಂದೆ ತಾಯಿಯನ್ನು ಕಳೆದುಕೊಂಡ ಇಬ್ಬರು ಮಕ್ಕಳು ಅನಾಥರಾಗಿರುವುದು ಕುಟುಂಬದವರು ಮೌನದ ವಾತಾವರಣಕ್ಕೆ ಜಾರಿದ್ದಾರೆ. ಪ್ರಕರಣವನ್ನ ದಾಖಲಿಸಿಕೊಂಡಿರುವ ವಿಜಯಪುರ ಪೊಲೀಸರು ತನಿಖೆ ನಡೆಸುತ್ತಿದ್ದು ಈ ಘಟನೆಗೆ ನಿಖರ ಕಾರಣ ತಿಳಿಯಬೇಕಿದೆ.
![]()