ಸಿಂಧೂರಿನ ಯಶಸ್ವಿನ ಹಿನ್ನೆಲೆಯಲ್ಲಿ ಮುಂಡರಗಿ ಪಟ್ಟಣದಲ್ಲಿ ತಿರಂಗ ಯಾತ್ರೆ
1 min read
ಮುಂಡರಗಿ : ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಅಡಗು ತಾಣಗಳ ವಿರುದ್ಧ ಭಾರತ ನಡಿಸಿದ ನಿರ್ಣಾಯಕ ಕಾರ್ಯಾಚರಣೆ ಆಪರೇಷನ್,ಸಿಂಧೂರಿನ ಯಶಸ್ವಿನ ಹಿನ್ನೆಲೆಯಲ್ಲಿ ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ತಿರಂಗ ಯಾತ್ರೆ ಜರಗಿತು.
ಈ ತಿರಂಗ ಯಾತ್ರೆಯು ಪಟ್ಟಣದ ಕೋಟಿ ಆಂಜನೇಯ ದೇವಸ್ಥಾನದಿಂದ ಚಾಲನೆಗೊಂಡು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು ತಿರಂಗ ಯಾತ್ರೆಯಲ್ಲಿ ಶಿರಹಟ್ಟಿ ಕ್ಷೇತ್ರದ ಶಾಸಕ ಡಾ.ಚಂದ್ರು ಲಮಾಣಿ ಮಾಜಿ ಸೈನಿಕರು ವಿದ್ಯಾರ್ಥಿಗಳು ಸುತ್ತಮುತ್ತಲಿನ ಗ್ರಾಮದ ಹಲವಾರು ಮುಖಂಡರು ಉಪಸ್ಥಿತರಿದ್ದರು ಇದೇ ವೇಳೆ ಮಾಜಿ ಯೋಧರಿಗೆ ಹೂ ಮಾಲೆ ಹಾಕಿ ಗೌರವಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಹೇಮಗಿರಿಶ ಹಾವಿನಾಳ, ಕೊಟ್ರೇಶ್ ಅಂಗಡಿ, ಶ್ರೀನಿವಾಸ್ ಅಬ್ಬಿಗೇರಿ, ನಾಗೇಶ್ ಹುಬ್ಬಳ್ಳಿ, ಮೈಲಾರಪ್ಪ ಕಲಿಕೇರಿ, ಜ್ಯೋತಿ ಹಾನಗಲ್, ಪವಿತ್ರ ಕಲಕುಟಗಾರ, ಅಶೋಕ್ ಚೋರಿ,ದಾವಲ್ ಸಾಬ್ ನಮಾಜಿ ಪ್ರಶಾಂತ್ ಗುಡ್ದಪ್ಪನವರ್, ಉಪಸ್ಥಿತರಿದ್ದರು
