ನಗರ ಜಿಲ್ಲಾಧಿಕಾರಿಯಿಂದ ಸರ್ಕಾರಿ ಜಮೀನು ಒತ್ತುವರಿ ತೆರವು.
1 min read
ನಗರ ಜಿಲ್ಲಾಧಿಕಾರಿಯಿಂದ ಸರ್ಕಾರಿ ಜಮೀನು ಒತ್ತುವರಿ ತೆರವು.
ಬೆಂ,ಆನೇಕಲ್,ಮೇ,23:
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ 74.98 ಕೋಟಿ ರೂ ಮೌಲ್ಯದ 19 ಎಕರೆ 3 ಗುಂಟೆ ಸರ್ಕಾರಿ ಜಮೀನನ್ನು ಇಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ ಜಿ ರವರು ಸರ್ಕಾರಿ ಜಾಗ ಒತ್ತುವರಿ ಮಾಡಿದವರಿಗೆ ಎಚ್ಚರಿಕೆ ರವಾನಿಸಿದ್ದಾರೆ.
ಬೆಂಗಳೂರು ಪೂರ್ವ ತಾಲ್ಲೂಕಿನ ವರ್ತೂರು ಹೋಬಳಿಯ ವಣತ್ತೂರು, ದೊಡ್ಡ ಕನ್ನಲ್ಲಿ ಗುಂಜೂರು ಮತ್ತು ಯರಪ್ಪನಹಳ್ಳಿ ಗ್ರಾಮಗಳ ಸ.ನಂ 62,19/18, 7 & 20 ರ ಸರ್ಕಾರಿ ಹಳ್ಳ, ಖರಾಬು, ಸರ್ಕಾರಿ ತೋವು ಹಾಗೂ ಗೋಮಾಳ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 237 ಎಕರೆ/ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 14.40 ಕೋಟಿಗಳಾಗಿರುತ್ತದೆ. ಬಿದರಹಳ್ಳಿ ಹೋಬಳಿಯ ದೊಡ್ಡಗುಬ್ಬಿ ಮತ್ತು ಮಂಡೂರು ಗ್ರಾಮಗಳ ಸ.ನಂ 14 & 131 ರ ಗೋಮಾಳ ಮತ್ತು ಸರ್ಕಾರಿ ಕುಂಟೆ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.08 ಗುಂಟೆಗಳಾಗಿದ್ದು,ಅಂದಾಜು ಮೌಲ್ಯ ರೂ 1.30 ಕೋಟಿಗಳಾಗಿರುತ್ತದೆ.
ಆನೇಕಲ್ ತಾಲ್ಲೂಕಿನ ಜಿಗಣಿ 1 & 2 ಹೋಬಳಿಯ ಕಾಡುಜಕ್ಕನಹಳ್ಳಿ ಮತ್ತು ಬನ್ನೇರುಘಟ್ಟ ಗ್ರಾಮಗಳ ಸನಂ, 6/1 ಹಾಗೂ 147 ರ ಸರ್ಕಾರಿ ಖರಾಬು ಮತ್ತು ಗುಂಡುತೋಪು ಒಟ್ಟು 0.18 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ 1.25 ಕೋಟಿಗಳಾಗಿರುತ್ತದೆ. ಕಸಬಾ-2 ಹೋಬಳಿಯ ಸೊನ್ನಹಳ್ಳಿ ಗ್ರಾಮದ ಸ.ನಂ. 46 ರ ಕೆರೆ 020 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 20 ಲಕ್ಷಗಳಾಗಿರುತ್ತದೆ, ಸರ್ಜಾಪುರ-2 ಹೋಬಳಿಯ ಚಿಕ್ಕನಾಗಮಂಗಲ ಗ್ರಾಮದ ಸ.ನಂ 99ರ ಕಾಲುವೆ 0.03 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 10 ಲಕ್ಷಗಳಾಗಿರುತ್ತದೆ.
ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆ ಹೋಬಳಿಯ ದೊಡೇರಿ ಗ್ರಾಮದ ಸ.ನಂ. 29 ಗುಂಡುತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.15 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 0.56 ಲಕ್ಷಗಳಾಗಿರುತ್ತದೆ. ಉತ್ತರಹಳ್ಳಿ, ಹೋಬಳಿಯ ವಡ್ಡರಪಾಳ್ಯ ಗ್ರಾಮದ ಸ.ನಂ. 51 ಗುಂಡುತೋಪು ಒತ್ತುವರಿ ತೆರವುಗೊಳಿಸಿರುವ 022 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 0.50 ಲಕ್ಷಗಳಾಗಿರುತ್ತದೆ.
ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಭೈರೇಗೌಡನಹಳ್ಳಿ, ವಡೇರಹಳ್ಳಿ ತೋಟದಗುಡ್ಡದಹಳ್ಳಿ ಕಡಬಗೆರೆ & ಕೆಂಗನಹಳ್ಳಿ, ಗ್ರಾಮಗಳ ಸ.ನಂ 33, 20, 39, 47 159 ಮತ್ತು 21ರ ಸರ್ಕಾರಿ ಗುಂಡುತೋಪು, ಗೋಮಾಳ, ಸರ್ಕಾರಿ ಖರಾಬು, ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 1231 ಎಕರೆ/ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 53.75 ಕೋಟಿಗಳಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಲಹಂಕ ತಾಲ್ಲೂಕಿನ ಹೆಸರಘಟ್ಟ 1 & 2 ಹೋಬಳಿಯ ಕುಂಬಾರಹಳ್ಳಿ ಮತ್ತು ಶ್ಯಾನುಭೋಗನಹಳ್ಳಿ, ಗ್ರಾಮಗಳ ಸನಂ 9 & 54 ದ ಗುಂಡು ತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.29 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 2.16 ಕೋಟಿಗಳಾಗಿರುತ್ತದೆ. ಯಲಹಂಕ-1 ಹೋಬಳಿಯ ಮುದ್ದೇನಹಳ್ಳಿ ಗ್ರಾಮದ ಸ.ನಂ 1 ರ ಗೋಮಾಳ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.20 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 0.75 ಲಕ್ಷಗಳಾಗಿರುತ್ತದೆ.
ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಯಾದ ಜಗದೀಶ್ ಕೆ ನಾಯಕ್, ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯಕರು ಹಾಗೂ ತಾಲ್ಲೂಕಿನ ತಹಶೀಲ್ದಾರ್ ರವರು ಉಪಸ್ಥಿತರಿದ್ದರು.
