ಸೂಟ್ಕೇಸ್ ನಲ್ಲಿ ೧೦ ವರ್ಷದ ಬಾಲಕಿ ಶವಪತ್ತೆ..ರುಂಡ ಮುಂಡ ಕತ್ತರಿಸಿದ ಸ್ಥಿತಿಯಲ್ಲಿ ಬಾಲಕಿಯ ಶವ ಪತ್ತೆ
1 min read
ಆನೇಕಲ್ : ನಗರದ ಹೊರವಲಯ ಆನೇಕಲ್ ತಾಲೂಕಿನ ಚಂದಾಪು ಬಳಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಹಳೆ ಚಂದಾಪುರ ರೈಲ್ವೆ ಬಿಡ್ರ್ಜ ಸಮೀಪದ ಇಂದು ನುಸುಕಿನಲ್ಲಿ ಪತ್ತೆಯಾದ ಒಂದು ಸೂಟ್ ಕೇಸ್ ನೊಳಗೆ ಅಪರಿಚಿತ ಬಾಲಕಿ ಶವ ಇದ್ದಿರುವುದು ಕಂಡುಬಂದಿದೆ, ರುಂಡ ಮುಂಡ ಕತ್ತರಿಸಿದ ಸ್ಥಿತಿಯಲ್ಲಿ ಅಂದಾಜು ೧೦ ವರ್ಷದ ಬಾಲಕಿಯ ಶವ ಪತ್ತೆಯಾಗಿದೆ. ಶವವು ರೈಲ್ವೆ ಟ್ರ್ಯಾಕ್ ಹತ್ತಿರ ಪತೆಯಾದ ಹಿನ್ನಲೆ , ಯಾರೋ ಬಾಲಕಿ ಶವವನ್ನು ಸೂಟ್ ಕೇಸ್ ನಲ್ಲಿ ಹಾಕಿ ಚಲಿಸುತ್ತಿದ್ದ ರೈಲಿನಿಂದ ಎಸೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಈ ದಾರುಣ ಘಟನೆ ಸಂಬಂಧ ಇಬ್ಬರೂ ವಿಭಾಗಗಳ ಪೊಲೀಸರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು, ಶವದ ಗುರುತು ಹಾಗೂ ಹತ್ಯೆ ಹಿಂದಿರುವ ಕಾರಣವನ್ನು ಪತ್ತೆಹಚ್ಚುತ್ತಿದ್ದಾರೆ. ಪ್ರಕರಣ ಇನ್ನೂ ಮರ್ಮವಾಗಿರುವಾಗ ಈ ಅಮಾನವೀಯ ಕೃತ್ಯಕ್ಕೆ ಸಂಬಂಧಪಟ್ಟ ಅರೋಪಿಗಳನ್ನು ಶೀಘ್ರವೇ ಪತ್ತೆಹಚ್ಚಿ ಕಾನೂನಿನ ಅಡಿ ತರಬೇಕೆಂಬ ಸಮಾಜದ ಒತ್ತಡ ಹೆಚ್ಚಾಗುತ್ತಿದೆ. ಶವದ ಬಗ್ಗೆ ಯಾವುದೇ ಮಾಹಿತಿ ಇದ್ದರೆ ತಕ್ಷಣ ತಮ್ಮನ್ನು ಸಂಪರ್ಕಿಸಬೇಕು ಎಂದು ಪೊಲೀಸರು ಸಾರ್ವಜನಿಕರಿಗೆ ತಿಳಿಸಿದರು
