c24kannada

ವಸ್ತುಸ್ಥಿತಿಯತ್ತ

ನಮ್ಮ ಮೆಟ್ರೋದಲ್ಲಿ ಯುವತಿಯರ ಖಾಸಗಿ ವಿಡಿಯೋ ತೆಗೆದು ಅಪ್ಲೋಡ್; ವಿಕೃತ ಕಾಮಿಯ ಕಳ್ಳಾಟ ಬಯಲು

Share it

 

ಬೆಂಗಳೂರು : ನಮ್ಮ ಮೆಟ್ರೋ ಸಿಲಿಕಾನ್​ ಸಿಟಿ ಜನರ ಜೀವನಾಡಿ. ಈ ವೇಗದೂತ ಮೂಲಕ ಪ್ರತಿನಿತ್ಯ ಲಕ್ಷಾಂತರ ಜನರು ನಗರದ ಮೂಲೆ ಮೂಲೆಗೆ ಸಂಚಾರ ಮಾಡುತ್ತಾರೆ. ಆದರೆ ನಮ್ಮ ಮೆಟ್ರೋ ಹೆಣ್ಣು ಮಕ್ಕಳಿಗೆ ಎಷ್ಟು ಸುರಕ್ಷಿತ ಎಂಬ ಅನುಮಾನಗಳು ಆಗಾಗ ಮೂಡುತ್ತವೆ.  ವಿಕೃತ ಕಾಮಿ, ಕಿಡಿಗೇಡಿಗಳು ನಮ್ಮ ಮೆಟ್ರೋದಲ್ಲಿ ಯುವತಿಯರ ಖಾಸಗಿ ಭಾಗದ ವಿಡಿಯೋಗಳನ್ನ ಚಿತ್ರೀಕರಿಸಿ ವಿಕೃತಿ ಮೆರೆದಿದ್ದಾರೆ. ಯುವತಿಯರ ವಿಡಿಯೋ ತೆಗೆಯುವುದರ ಜೊತೆಗೆ ಅದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಸಹ ಮಾಡಿದ್ದಾರೆ.

 

ಮೆಟ್ರೋದಲ್ಲಿ ಸಂಚಾರ ಮಾಡಿರುವ ವ್ಯಕ್ತಿ ಈ ವಿಡಿಯೋಗಳನ್ನ ಯುವತಿಯರಿಗೆ ತಿಳಿಯದ ಹಾಗೆ ಸೆರೆ ಹಿಡಿದಿದ್ದಾನೆ. ಬಳಿಕ ಇನ್​ಸ್ಟಾಗ್ರಾಂನ ಮೆಟ್ರೋ ಚಿಕ್ಸ್​​​ ಪೇಜ್​ನಲ್ಲಿ ಯುವತಿಯರ ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗಿದೆ. ನಮ್ಮ ಮೆಟ್ರೋದ ಈ ವಿಕೃತ ಕಾಮಿಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಎಫ್​ಐಆರ್​​ ದಾಖಲಾಗಿದೆ.ಕಿಡಿಗೇಡಿ ಮೆಟ್ರೋದಲ್ಲಿ ನಿಂತಿರುವ ಯುವತಿಯರು, ಮೆಟ್ರೋ ನಿಲ್ದಾಣದಲ್ಲಿ ನಡೆದುಕೊಂಡು ಹೋಗ್ತಿದ್ದ ಯುವತಿಯರನ್ನ ಹಿಂದೆಯಿಂದ ಫಾಲೋ ಮಾಡಿಕೊಂಡು ಹೋಗಿ ವಿಡಿಯೋ ಮಾಡಿದ್ದಾನೆ. ಖಾಸಗಿ ಅಂಗಳನ್ನೇ ಗುರಿಯಾಗಿಸಿಕೊಂಡು ಫೋಟೋ/ವಿಡಿಯೋ ತೆಗೆದಿದ್ದಾನೆ.

 

ಬೆಂಗಳೂರು ಮೆಟ್ರೋ ಕ್ಲಿಕ್ಸ್ ಪೇಜ್ ಅನ್ನೋ ಐದೂವರೆ ಸಾವಿರದಷ್ಟು ಫಾಲೋವರ್ ಇರೋ ಇನ್ಸ್‌ಸ್ಟಾ ಅಕೌಂಟ್‌ನಲ್ಲಿ 10ಕ್ಕೂ ಹೆಚ್ಚು ಯುವತಿಯರ ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗಿದೆ. ಫೈಂಡಿಂಗ್‌ ಬ್ಯೂಟಿ ಫುಲ್‌ ಗರ್ಲ್ಸ್ ಆನ್ ನಮ್ಮ ಬೆಂಗಳೂರು ಎಂದು ಕಿಡಿಗೇಡಿ ಪೋಸ್ಟ್ ಮಾಡಿದ್ದ. ವಿಕೃತ ಕಾಮಿಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ವಿಡಿಯೋಗಳನ್ನು ಡಿಲೀಟ್ ಮಾಡಲಾಗಿದೆ.ಈ ಕಿಡಿಗೇಡಿಯ ಕೃತ್ಯ ಕಂಡು ಯುವತಿಯರು ಆಕ್ರೋಶ ಹೊರ ಹಾಕಿದ್ದು, ಬೆಂಗಳೂರು ಮೆಟ್ರೋ ಕ್ಲಿಕ್ಸ್ ಪೇಜ್ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸರು ಕಿಡಿಗೇಡಿಯನ್ನು ಪತ್ತೆ ಹಚ್ಚಿ ಬಂಧಿಸುವ ಭರವಸೆ ನೀಡಿದ್ದಾರೆ.

Loading

Leave a Reply

Your email address will not be published. Required fields are marked *

error: Content is protected !!