c24kannada

ವಸ್ತುಸ್ಥಿತಿಯತ್ತ

ಕರ್ನಾಟಕದಲ್ಲಿ ಕನ್ನಡನೇ ಮಾತಾಡಲ್ಲ ಎಂದು ದೌಲತ್ತಿನ ಮಾತಾಡಿದ SBI ಬ್ಯಾಂಕ್ ಮ್ಯಾನೇಜರ್

Share it

ಆನೇಕಲ್ : ತಾಲೂಕಿನ ಚಂದಾಪುರದ ಸೂರ್ಯನಗರ ಎಸ್ಬಿಐ ಮೇನೇಜರ್ ಒಬ್ಬರು ಚಳುವಳಿಗಾರರೊಬ್ಬರಿಗೆ ಕನ್ನಡ ಮಾತನಾಡುವುದೇ ಇಲ್ಲ ಎಂದು ಪಟ್ಟು ಹಿಡಿದ ವಿಡಿಯೋ ವೈರಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಎಂದಿನಂತೆ ಕನ್ನಡ ಮಾತನಾಡದ ಮಹಿಳಾ ಮೇನೇಜರ್ ಕೇವಲ ಇಂಗ್ಲೀಷ್ ಹಿಂದಿಯಲ್ಲಿಯೇ ಪ್ರತಿಕ್ರಿಯಿಸುತ್ತಿದ್ದದ್ದನ್ನು ಮೊಬೈಲ್ ಮೂಲಕ ದೃಶ್ಯ ಸೆರೆ ಮಾಡುತ್ತಲೇ ತಮ್ಮ ಖಾತೆಯಲ್ಲಿ ಹರಿಬಿಟ್ಟ ಸ್ಥಳೀಯ ಮಹೇಶ್ರೆಡ್ಡಿ ಕನ್ನಡ ಮಾತನಾಡಲೇ ಬೇಕು ಅದು ಆರ್ಬಿಐ ನಿಯಮ ಎಂದು ಪಟ್ಟು ಹಿಡಿದಿದ್ದ.

ಮೇನೇಜರ್ ಪ್ಋಇ ಸವಾಲು ಹಾಕುತ್ತಲೇ ಆರ್ಬಿಐ ಗೈಡ್ಲೈನ್ಸ್ ಎಲ್ಲಿದೆ. ಕನ್ನಡ ಮಾತನಾಡಬೇಕೆಂಬ ಮ್ಯಾಂಡೇಟರಿ ಏನಿಲ್ಲ ನಾನು ಕನ್ನಡ ಮಾತನಾಡುವುದೇ ಇಲ್ಲ ಎಂದು ತಾನೂ ವಿಡಿಯೋ ತೆಗೆದಿದ್ದಾರೆ. ಇವಿಷ್ಟು ಭಾಷಾ ರೇಜಿಗೆ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮೇನೇಜರ್ ಒಬ್ಬರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಆನೇಕಲ್ ಸುತ್ತಲ ಎಲ್ಲ ಖಾಸಗೀ ಬ್ಯಾಂಕ್ ಗಳಲ್ಲಿಯೂ ಪರಭಾಷಿಗರನ್ನೇ ಕಾಣುತ್ತಿದ್ಸು ಸ್ಥಳೀಯರಿಗೆ ಬ್ಯಾಂಕ್ ಸೇವೆಗಳ ಸಮಗ್ರ ಮಾಹಿತಿ ಸೊರೆಯದೇ ಪದೇ ಪದೇ ಹೆಣಗಾಡುತ್ತಿದ್ದ ಬೆನ್ನಲ್ಲೇ ಆಗಾಗ ಇಂತಹ ಘಟನೆಗಳು ಮರುಕಳಿಸುತಗತಿವೆ ಎಂಬ ಕೂಗು ಜೋರಾಗಿದೆ. ಈ ಹಿಂದೆ ಎಲ್ಲ ಬ್ಯಾಂಕ್ ಮೇನೇಜರ್ ಗಳನ್ನ ಸಭೆ ಕರೆದಿದ್ದ ತಹಶೀಲ್ದಾರ್ ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಿ ಎಂದು ಎಚ್ಚರಿಸಿತ್ತು.

Loading

Leave a Reply

Your email address will not be published. Required fields are marked *

error: Content is protected !!