ಮುಳುಗಿದ್ದು ಬೆಂಗಳೂರು ಒಂದೇ ಅಲ್ಲ.. ಇವತ್ತು ಕರ್ನಾಟಕದಲ್ಲಿ ಮಳೆರಾಯ ಏನೆಲ್ಲ ಅನಾಹುತ ಮಾಡಿದೆ ಗೊತ್ತಾ..?

1 min read
Share it

 

ರಾಜಧಾನಿ ಬೆಂಗಳೂರನ್ನ ಮಳೆರಾಯ ಹಿಂಡಿ ಹಿಪ್ಪೆ ಮಾಡ್ತಿದ್ದಾನೆ. ಬೇರೆ ಜಿಲ್ಲೆಗಳನ್ನು ಬಿಡ್ತಾನಾ, ಜಿಲ್ಲೆಗಳಲ್ಲೂ ವರುಣಾಂತರ ಅಷ್ಟಿಷ್ಟಲ್ಲ.. ಕೃತಿಕಾ ಮಳೆ ಅಬ್ಬರಕ್ಕೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ತತ್ತರಿಸಿವೆ. ಚಿಕ್ಕಮಗಳೂರು, ಹಾಸನ, ದಾವಣಗೆರೆ ಸೇರಿ ಹಲವೆಡೆ ವರುಣಾರ್ಭಟ ಜೋರಾಗಿದೆ.

ಉಡುಪಿ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ. ದಿನಪೂರ್ತಿ ಮಳೆ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅತ್ತ ಉತ್ತರ ಕನ್ನಡದ ಇಡೀ ಜಿಲ್ಲೆಯ ಕುಮಟಾ ಸಿದ್ದಾಪುರ ರಸ್ತೆ ಬ್ಲಾಕ್ ಆಗಿದ್ದು ಜಮೀನುಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ. ಸಂಚಾರ ಅಸ್ತವ್ಯಸ್ತ ಆಗಿದೆ… ಜಿಲ್ಲೆಯಾದ್ಯಂತ ಮುಂದಿನ 2 ದಿನ ರೆಡ್ ಅಲರ್ಟ್ ಘೋಷಿಸಲಾಗಿದೆ.

ಇತ್ತ ಕೋಲಾರದಲ್ಲಿ ಮಳೆರಾಯನ ಚೆಲ್ಲಾಟಕ್ಕೆ ಹೈಸ್ಕೂಲ್​ ಆಟದ ಮೈದಾನ ಸ್ವಿಮ್ಮಿಂಗ್​​ಫೂಲ್​​ನಂತಾಗಿದೆ.. ಬಾಲಕರು ನೀರಾಟವಾಡಿ ಎಂಜಾಯ್ ಮಾಡಿದ್ದಾರೆ. ಬಾಗಲಕೋಟೆ ಹಾಗೂ ಹಾವೇರಿಯಲ್ಲಿ ಧಾರಾಕಾರ ಮಳೆಯಾಗ್ತಿದೆ. ಸಣ್ಣಪುಟ್ಟ ಜಲಪಾತಗಳಿಗೂ ಜೀವಕಳೆ ಬಂದಿದೆ. ತುಮಕೂರು, ಬಳ್ಳಾರಿ, ವಿಜಯನಗರ, ಚಿಕ್ಕಮಗಳೂರು ಸೇರಿ ಹಲವೆಡೆ ಮಳೆ ಮುಂದುವರಿದಿದೆ.. ಸಂಚಾರ ಏರುಪೇರಾಗಿದ್ದು ಸಾಕಷ್ಟು ಅವಾಂತರಗಳು ವರದಿ ಆಗ್ತಿವೆ.

ಬೆಣ್ಣೆನಗರಿ ದಾವಣಗೆರೆ ಜಿಲ್ಲೆ ಹೊನ್ನಾಳಿಯ ಮಲೆಕುಂಬಳೂರು ಗ್ರಾಮದಲ್ಲಿ ಹಳ್ಳ ತುಂಬಿ ಹರಿಯುತ್ತಿದೆ. ಅಡಿಕೆ ತೋಟ, ಭತ್ತ ಸೇರಿ ವಿವಿಧ ಬೆಳೆ ಜಲ ಸಮಾಧಿಯಾಗಿದೆ. ಹುಬ್ಬಳ್ಳಿಯಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮಳೆ ನೀರಿನಲ್ಲಿ ಹಾವುಗಳು ಪ್ರತ್ಯಕ್ಷವಾಗಿದ್ದು ಜನ ಗಾಬರಿಗೊಂಡಿದ್ದಾರೆ.

ಮತ್ತೊಂದೆಡೆ ಮಂಗಳೂರಿನ ಕೊಡಿಯಾಲ್ ಗುತ್ತುವಿನ ಸಿಲ್ವರ್​ಲೈನ್ ಅಪಾರ್ಟ್​ಮೆಂಟ್​ನ ತಡೆಗೋಡೆ ಕುಸಿತವಾಗಿದೆ. ಯಾವುದೇ ಪ್ರಾಣ ಹಾನಿಯಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಇದ್ದು ಮೂಡಬಿದಿರೆ, ಪುತ್ತೂರು, ಬೆಳ್ತಂಗಡಿ ಬಂಟ್ವಾಳ ಭಾಗದಲ್ಲಿ ಜಡಿ ಮಳೆ ಸುರಿಯುತ್ತಿದೆ. ಜನರು ಹಾಗೂ ಮೀನುಗಾರರು ನದಿಗಳು, ಸಮುದ್ರ ತೀರಕ್ಕೆ ತೆರಳದಂತೆ ಜಿಲ್ಲಾಡಳಿತ ಸೂಚಿಸಿದೆ. ಉಡುಪಿ ಜಿಲ್ಲೆಯೂ ಮೇಘರಾಜನ ಅಬ್ಬರಕ್ಕೆ ತಲ್ಲಣಿಸಿದೆ. ಮಣಿಪಾಲ ರಸ್ತೆಯಲ್ಲಿ ಮಳೆಯ ನೀರಿನ ರಭಸಕ್ಕೆ ಕಲ್ಲು, ಮಣ್ಣು ರಸ್ತೆ ಹರಿದು ಬಂದು ಸಂಚಾರಕ್ಕೆ ಅಡ್ಡಿಯಾಗಿತ್ತು.

 

ಮೊದಲ ಮಳೆಗೆ ಕರಾವಳಿ ನಗರ ದಕ್ಷಿಣ ಕನ್ನಡ ಜಿಲ್ಲೆ ತತ್ತರಿಸಿದೆ. ಭಾರಿ ಮಳೆಗೆ ಕದ್ರಿ ರಸ್ತೆಯಲ್ಲಿ ಬೃಹತ್ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಸಂಚಾರ ಅಸ್ತವ್ಯಸ್ತ ಆಗಿದ್ದು ಸದ್ಯ ರಸ್ತೆ ತೆರವುಗೊಳಿಸಲಾಗಿದೆ. ಮಂಗಳೂರು ಹೊರವಲಯದ ಅದ್ಯಪಾಡಿಯ ಸಂಕೇಶ ಎಂಬಲ್ಲಿ 10 ಮನೆಗಳಿಗೆ ಸಂಪರ್ಕ ಕಲ್ಲಿಸುವ ರಸ್ತೆ ಕೂಡಾ ಕುಸಿತವಾಗಿದೆ. ಇಂದು ಬೆಳ್ಳಂಬೆಳ್ಳಗೆ ಸುರಿದ ಮಳೆಗೆ ವಿಮಾನ ನಿಲ್ದಾಣ ಭಾಗದಿಂದ ಮಳೆ ನೀರು ಹರಿದು ಬಂದಿದೆ. ಪರಿಣಾಮ ನೀರಿನ ಹರಿವಿಗೆ ಗುಡ್ಡ ಕುಸಿದಿದೆ. ಮನೆಯ ಮುಂಭಾಗದ ತುಳಸಿಕಟ್ಟೆ ಸೇರಿ ಸಂಪೂರ್ಣ ಮಣ್ಣಿನಲ್ಲಿ ಮುಚ್ಚಿ ಹೋಗಿದೆ.

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?