c24kannada

ವಸ್ತುಸ್ಥಿತಿಯತ್ತ

ಕಳೆದ 3 ದಿನಗಳಿಂದ ಸುರಿಯುತ್ತಿರುವ ಗಾಳಿ-ಮಳೆಗೆ ನೆಲಕಚ್ಚಿದ ಬೆಂಡು ಹೂ ಬೆಳೆ, ಆದಾಯದ ನಿರೀಕ್ಷೆಯಲ್ಲಿದ್ದ ರೈತನಿಗೆ ಆಘಾತ

Share it


ಗುಡಿಬಂಡೆ: ಕಳೆದ 2-3 ದಿನಗಳಿಂದ ಬಿರುಗಾಳಿ ಸಹಿತ ಸುರಿದ ಅಪಾರ ಮಳೆಗೆ ಗುಡಿಬಂಡೆ ತಾಲ್ಲೂಕಿನ ಉಲ್ಲೋಡು ಕಂದಾಯ ವೃತ್ತದ ನಿಚ್ಚನಬಂಡಹಳ್ಳಿ ಗ್ರಾಮದಲ್ಲಿ ಕಟಾವಿಗೆ ಬಂದಿದ್ದ ಒಂದು ಎಕರೆ ಚೆಂಡು ಹೂ ಬೆಳೆ ನೆಲಕಚ್ಚಿದೆ. ಇತ್ತೀಚೆಗೆ ಸುರಿದ ಮಳೆಗೆ ಕೆಲ ರೈತರು ಹರ್ಷ ವ್ಯಕ್ತಪಡಿಸುತ್ತಿದ್ದರೆ, ಇನ್ನೊಂದೆಡೆ ಹೂ ಬೆಳೆಗಾರರು ಕಣ್ಣೀರು ಸುರಿಸುವಂತಾಗಿದೆ. ಶುಕ್ರವಾರ ಶನಿವಾರ, ಭಾನುವಾರ ಸುರಿದ ಬಿರುಗಾಳಿ ಸಮೇತ ಸುರಿದ ಮಳೆಗೆ 10 ಸಾವಿರ ಚೆಂಡು ಹೂ ಗಿಡಗಳು ನೆಲಕಚ್ಚಿದ್ದು ಲಕ್ಷಾಂತರ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆ ತಣ್ಣೀರೆರಚಿದೆ.

 

ಕಟಾವಿಗೆ ಬಂದಿದ್ದ ಒಂದು ಎಕರೆಯಲ್ಲಿ ಬೆಳೆದಿದ್ದ ಚೆಂಡು ಹೂ ನೆಲಕಚ್ಚಿದೆ. ಒಂದು ವಾರದಲ್ಲಿ ಕಟಾವಿಗೆ ಬಂದಿದ್ದು ಬಂಪರ್ ಲಾಭ ಬರುವ ನಿರೀಕ್ಷೆಯಲ್ಲಿದ್ದ ರೈತನಿಗೆ ಲಕ್ಷಾಂತರ ರೂ ನಷ್ಟವಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಕೆಜಿಗೆ 70 ರಿಂದ 100 ರೂ ದರವಿದೆ. ಏನಿಲ್ಲವೆಂದರೂ 1 ಎಕರೆಯಲ್ಲಿ ಬೆಳೆದ ರೈತ 2-3 ಲಕ್ಷಕ್ಕೂ ಅಧಿಕ ಆದಾಯ ಗಳಿಸುತ್ತಿದ್ದ. ಈ ಹೊತ್ತಲ್ಲೇ ಮಳೆ ಗಾಳಿಗೆ ಚೆಂಡು ಹೂ ಬೆಳೆ ನೆಲ ಕಚ್ಚಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿ ನಿರ್ಮಾಣವಾಗಿದೆ.

ಗುಡಿಬಂಡೆ ತಾಲ್ಲೂಕು ಈಗೇನಹಳ್ಳಿ ಸರ್ವೆ ನಂಬರ್ 22/2 ರಲ್ಲಿ ಒಂದು ಎಕರೆ ಜಮೀನಿನಲ್ಲಿ 13 ಸಾವಿರ ಚೆಂಡು ಹೂ ನಾಟಿ ಮಾಡಿದ್ದೆ ಒಂದು ನಾರಿನ ಬೆಲೆ ₹3 ಒಟ್ಟು ₹40 ಸಾವಿರ ಚೆಂಡು ಹೂ ನಾರಿಗೆ ಖರ್ಚು, ಇನ್ನೂ ಜಮೀನು ಉಳುಮೆ, ಗೊಬ್ಬರ, ಔಷಧಿ, ಕೂಲಿ ಸೇರಿದಂತೆ ಒಟ್ಟಾರೆ ಸುಮಾರು 1.20 ಲಕ್ಷ ಖರ್ಚಾಗಿದೆ. ಉತ್ತಮವಾಗಿ ಬಂದಿದ್ದ ಹೂ ಫಸಲನ್ನು ಮುಂದಿನ ಎರಡು ಮೂರು ದಿನದಲ್ಲಿ ಕಟಾವು ಮಾಡಬೇಕು ಅಂದುಕೊಂಡಿದ್ದೆ. ಭಾನುವಾರ ಗಾಳಿ-ಮಳೆ ಬರಸಿಡಿಲಿನ ರೀತಿ ಅಪ್ಪಳಿಸಿದ್ದು ಬಹುತೇಕ 10ಸಾವಿರ ಹೂ ಗಿಡಗಳು ನೆಲಕಚ್ಚಿವೆ. 2-3ಲಕ್ಷ ಆದಾಯ ನಿರೀಕ್ಷೆ ಇಟ್ಟುಕೊಂಡಿದ್ದೆವು. ನಮಗೆ ಅಪಾರ ನಷ್ಟವಾಗಿದೆ ಎಂದು ನಿಚ್ಚನಬಂಡಹಳ್ಳಿ ಗ್ರಾಮದ ರೈತ ವೆಂಕಟರಾಯಪ್ಪ ರೈತ ನೋವನ್ನು ವ್ಯಕ್ತಪಡಿಸಿದರು ಹಾಕಿದರು.

 

ಚೆಂಡು ಹೂ ಬೆಳೆಯಲು ರೈತ ಎಕರೆಗೆ ಕನಿಷ್ಠ ಅಂದ್ರೂ 1 ಲಕ್ಷ ರೂ. ಖರ್ಚು ಮಾಡಿರುತ್ತಾನೆ. ಪ್ರಕೃತಿ ವಿಕೋಪ ವಾದಾಗ ರೈತರನ್ನು ಸಂರಕ್ಷಿಸುವುದು ಸರ್ಕಾರದ ಹೊಣೆ. ಸರ್ಕಾರ ಬೆಳೆ ನಷ್ಟು ವಾಗಿರುವ ರೈತರಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ಗ್ರಾಮದ ಮುಖಂಡ ರವಿಕುಮಾರ್ ಒತ್ತಾಯಿಸಿದರು.

Loading

Leave a Reply

Your email address will not be published. Required fields are marked *

error: Content is protected !!