ದಿಢೀರ್ ಮಳೆಗೆ ತತ್ತರಿಸಿದ ಬಾಗೇಪಲ್ಲಿ..ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿ
1 min read
ಬಾಗೇಪಲ್ಲಿ : ಬಾಗೇಪಲ್ಲಿ ಯಲ್ಲಿ ಬುಧುವಾರ ಸಾಯಂಕಾಲ ಗಾಳಿ, ಮಿಂಚು, ಗುಡುಗು, ಸಿಡಿಲು ಸಹಿತ ಧಾರಕಾರ ಮಳೆ ಸುರಿದ ಪರಿಣಾಮ ರಸ್ತೆಗಳೆಲ್ಲ ಕೆರೆಯಂತಾಗಿ. ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ.. mಬಿರು ಬೇಸಿಗೆಯಲ್ಲೂ ಕೂಡ ರಾಜ್ಯಾಧ್ಯಂತ ಮಳೆ ಅಬ್ಬರಿಸುತ್ತಿದೆ. ಸಾರ್ವಜನಿಕರು ಭೀಕರ ಮಳೆಗೆ ತತ್ತರಿಸಿ ಹೋಗಿದ್ದಾರೆ. ಈಗಾಗಲೇ ನಗರದ ಅನೇಕ ಪ್ರದೇಶಗಳಲ್ಲಿ ಮಳೆ ಜೋರಾಗಿ ಸುರಿಯುತ್ತಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.
ಇದರಂತೆ ಪಟ್ಟಣದ ಅನೇಕ ತಗ್ಗು ಪ್ರದೇಶದ ಮನೆಗಳಿಗೆ ಭಾರಿ ಪ್ರಮಾಣದ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ. 9ನೇ ವಾರ್ಡಿನ ನಿವಾಸಿಯಾದ ಜ್ಯೋತಿ, ಎನ್ ಎಂಬುವರ ಮನೆಗೆ ಮಳೆ ನೀರು ಹರಿದು ಅವಾಂತರ ಶೃಷ್ಟಿ ಮಾಡಿದೆ ಅಲ್ಲದೇ ಅಪಾರ ಪ್ರಮಾಣದ ಹಾನಿ ಉಂಟಾಗಿದ್ದು. ಇಡಿ ರಾತ್ರಿ ತನ್ನ ಮೂರು ಜನ ಮಕ್ಕಳೊಂದಿಗೆ ನರಕಯಾತನೆ ಅನುಭವಿಸಿದ್ದಾರೆ . ಇದರ ಬಗ್ಗೆ ಜನಪ್ರತಿನಿಧಿಗಳ ಅಧಿಕಾರಿಗಳ ಸಹಾಯ ಹಸ್ತಕ್ಕೆ ಅಂಗಲಾಚಿದ್ದಾರೆ.
ವರದಿ. ಶಾಂತಿ
ಬಾಗೇಪಲ್ಲಿ.
