ತಿಮಿಂಗಿಲ ಕಪ್ಪೆಯನ್ನು ಲೆಕ್ಕಕ್ಕೆ ಇಟ್ಟುಕೊಳ್ಳುತ್ತದಾ..? ಕಾಂಗ್ರೆಸ್ ಅರ್ಥ ಮಾಡಿಕೊಳ್ಳಬೇಕು-ಛಲವಾದಿ ನಾರಾಯಣಸ್ವಾಮಿ
1 min read
ಬೆಂಗಳುರು : ಪಾಕಿಸ್ತಾನದ ವಿರುದ್ಧವಾಗಿ ಭಯೋತ್ಪಾದಕರ ನೆಲೆಗಳನ್ನು ನೆಲಸಮ ಮಾಡುವಲ್ಲಿ ಭಾರತದ ಸೇನೆ ಯಶಸ್ವಿಯಾಗಿದೆ ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು ಪಾಕಿಸ್ತಾನದ ೯ ಅಡುಗು ತಾಣಗಳನ್ನು ಛಿದ್ರಗೊಳಿಸಿದ ನಂತರ, ಪಾಕಿಸ್ತಾನ ಭಾರತದ ಜೊತೆ ಕೈ ಜೋಡಿಸಬೇಕಿತ್ತು.. ನಮ್ಮ ಹೋರಾಟ ಭಯೋತ್ಪಾದಕರ ನೆಲೆಗಳ ಮೇಲೆ.. ಏಪ್ರಿಲ್ 22ರಂದು 26 ಭಾರತೀಯರನ್ನು ಹತ್ಯೆ ಮಾಡಿದ್ರು.. ಭಾರತ ದೇಶ ಬಹುಕಾಲದಿಂದಲು ಭಯೋತ್ಪಾದನೆ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದೆ ಎಂದು ಹೇಳಿದರು.
ಪಾಕಿಸ್ತಾನದ ನೆಲೆಗಳ ಮೇಲೆ ಧ್ವಂಸ ಮಾಡಿದಾಗ, ಅವರಿಗೆ ಮಿಲಿಟರಿ ಗೌರವ ಕೊಡುವ ರೀತಿಯಲ್ಲಿ ಅಂತ್ಯಕ್ರಿಯೆ ಮಾಡಿದೆ. ಇದರಿಂದಲೇ ಪಾಕಿಸ್ತಾನ ಭಯೋತ್ಪಾದಕರ ನಾಡು ಎಂದು ಸಾಬೀತಾಗಿದೆ.. ಪಾಕಿಸ್ತಾನ ಕ್ಷಿಪಣಿ ಗಳಲ್ಲವನ್ನು ಭಾರತ ಹೊಡೆದುರುಳಿಸಿತು. ಆ ನಂತರ ಯಾವುದೇ ಕಾರಣಕ್ಕೂ ಯುದ್ದ ಬೇಡ ಎಂದು ಪಾಕಿಸ್ತಾನ ಕೇಳಿಕೊಂಡಿತ್ತು. ಅದಕ್ಕಾಗಿ ಇವಾಗ ವಿರಾಮದ ಪರಿಸ್ಥಿತಿ ಬಂದಿದೆ. ಆದರೆ ಇವಾಗ ಕಾಂಗ್ರೆಸ್ ನವರು ಕ್ಷುಲ್ಲಕ ರಾಜಕಾರಣ ಮಾಡ್ತಿದ್ದಾರೆ ಎಂದರು.
ಕುಂಟೆಯಲ್ಲಿರುವ ಕಪ್ಪೆ ಸಮುದ್ರದಲ್ಲಿರುವ ತಿಮಿಂಗಲವನ್ನು ಕೇಳ್ತಂತೆ ಏನ್ ನಡೀತ್ತಿದೆ ಅಂತಾ. ತಿಮಿಂಗಿಲ ಕಪ್ಪೆಯನ್ನು ಲೆಕ್ಕಕ್ಕೆ ಇಟ್ಟುಕೊಳ್ಳುತ್ತದಾ..? ಕಾಂಗ್ರೆಸ್ ನವರು ಕೂಡ ಇದನ್ನು ಅರ್ಥ ಮಾಡಿಕೊಳ್ಳಬೇಕು. ಇಂತಹದ್ದೆಲ್ಲವನ್ಬು ಪ್ರಶ್ನೆ ಮಾಡೋದು ಬಿಟ್ಟು, ಮೋದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಬೇಕಿತ್ತು. ಮೊದಲು ಯುದ್ದ ಬೇಡ ಎಂದವರು ನೀವು ಹೇಡಿಗಳು. ವಿರಾಮದ ಘೋಷಣೆ ಬಳಿಕ ಇಂದಿರಾಗಾಂಧಿ ಎತ್ತುತ್ತಿದ್ದೀರಿ.. ಪಿಓಕೆಯನ್ನು ಯಾಕೆ ನೀವು ಅವತ್ತು ಬಿಟ್ರಿ..? ನಮ್ಮ ಸೈನಿಕರನ್ನು ಕರೆದುಕೊಂಡು ಹೋದ್ರಲ್ಲ ಅವರನ್ನು ಬಿಟ್ರಾ..? ಸರ್ಜಿಕಲ್ ಸ್ರೈಕ್ ನ್ನು ಇಂದಿರಾಗಾಂಧಿ ಮಾಡಿದ್ರಾ..?
ಕಾಂಗ್ರೆಸ್ ನವರು ಸಣ್ಣತನ ಬಿಡಿ, ದೇಶಕ್ಕೆ ಗೌರವ ಕೊಡಿ. ಇವತ್ತಿನ ದೇಶ ಕೆಟ್ಟ ಪರಿಸ್ಥಿತಿಗೆ ಕಾಂಗ್ರೆಸ್ ನವರೇ ಕಾರಣ. ಭಯೋತ್ಪಾದನೆ ಕಾಂಗ್ರೆಸ್ ನವರ ಕೊಡುಗೆ. ಕಾಶ್ಮೀರ ಹದಗೆಡಲು ಕಾಂಗ್ರೆಸ್ ನವರೇ ಕಾರಣ.. ಆನೆ ಹೋಗ್ತಿದ್ರೆ ಕುನ್ನಿಗಳು ಬೌ ಬೌ ಅಂತಿದ್ದವಂತೆ. ಕುನ್ನಿಗಳಿಗೆ ಆನೆ ಉತ್ತರ ಕೊಡಲ್ಲ, ಆನೆ ಎಲ್ಲಿ ಉತ್ತರ ಕೊಡಬೇಕೋ ಅಲ್ಲಿ ಕೊಡುತ್ತದೆ. ಪ್ರಿಯಾಂಕ ಖರ್ಗೆ, ಕೃಷ್ಣ ಭೈರೇಗೌಡ ವಿವೇಕರು ಎಂದುಕೊಂಡಿದ್ವಿ. ಆದರೆ ಅವಿವೇಕರು ಎಂದುಕೊಂಡಿರಲಿಲ್ಲ ಎಂದು ಹೇಳಿದರು
