ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿದೆಯಾ ಲಕ್ಷಾಂತರ ರೂ ಅವ್ಯವಹಾರ..?
1 min read
https://youtu.be/Nh-7Z6eIsTo?si=2CqEGChIji0s4UGW
ತುರುವೇಕೆರೆ, ತಾಲೂಕಿನ ಸೀಗೆಹಳ್ಳಿ ಗ್ರಾಮದಲ್ಲಿ ಇರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಮಾಜಿ ನಿರ್ದೇಶಕ ಹರಳೆಕೆರೆ ಪುಟ್ಟೇಗೌಡ ನೆರ ಆರೋಪ ಮಾಡಿದರು, ,ಅವ್ಯವಹಾರ ನಡೆದಿರುವ ದಾಖಲೆಗಳೊಂದಿಗೆ ಬಹಿರಂಗ ಚರ್ಚೆಗೆ ಮಾಜಿ ನಿರ್ದೇಶಕ ಆಹ್ವಾನಿಸಿದರು. ಆದರೆ ಬಹಿರಂಗ ಸವಾಲ್ ಎದುರಿಸಲು ಹಾಜರಾಗಲಿಲ್ಲ ಮುರಳಿ ಕುಪ್ಪೆ ಶ್ರೀನಿವಾಸ್ ಮತ್ತು ರಮೇಶ್, ಇದರಿಂದಲೇ ತಿಳಿಯುತ್ತೆ ಅವ್ಯವಹಾರ ಆಗಿರುವುದಕ್ಕೆ ಅವರು ನಮ್ಮ ಸವಾಲನ್ನು ಸ್ವೀಕರಿಸದೆ ಇರುವುದು, ಇವರುಗಳಿಂದ ಅವ್ಯವಹಾರ ಆಗಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ, ಜೊತೆಗೆ ನನ್ನ ಬಳಿ ದಾಖಲೆ ಸಮೇತ ಸಾಕ್ಷಿಗಳಿವೆ ಕೂಡಲೇ ಇದರ ತನಿಖೆ ಆಗಲಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಮಾಜಿ ಅಧ್ಯಕ್ಷ ಪುಟ್ಟೇಗೌಡ ಆಗ್ರಹಿಸಿದರು, ಇದೇ ಸಂದರ್ಭದಲ್ಲಿ ದೊಡ್ಡ ನಂಜೇಗೌಡ ಯರದಹಳ್ಳಿ, ಬೆಟ್ಟಸ್ವಾಮಿ ಗೌಡ ಮಣೆ ಚೆಂಡೂರು, ಯಜಮಾನ್ ರಾಜಣ್ಣ, ವೀರಭದ್ರಯ್ಯ, ಇನ್ನು ಅನೇಕರು ಉಪಸ್ಥಿತರಿದ್ದರು.
