ರಾಷ್ಟ್ರದ ಏಕತೆಗೆ ವಿಪಕ್ಷ ಹೇಗಿರಬೇಕೆನ್ನುವುದನ್ನ ನಾವು ಜಗತ್ತಿಗೆ ತೋರಿಸಿದ್ದೇವೆ-ಬಿಕೆ ಹರಿಪ್ರಸಾದ್
1 min read
ಬೆಂಗಳೂರು : ಭಾರತದ ಸೈನ್ಯದ ಬಗ್ಗೆ ಎಲ್ಲಿರಗೂ ಹೆಮ್ಮೆ ಇದೆ. ದೇಶ ಸಂಕಷ್ಟಕ್ಕೆ ಸಿಕ್ಕಿದ್ದಾಗ ಹೋರಾಟ ಮಾಡಿರೋದು ಜಗತ್ತಿಗೆ ಗೊತ್ತಿದೆ ಎಂದು ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಹೇಳಿದರು. ಶಾಸಕರ ಭವನದಲ್ಲಿ ಮಾತನಾಡಿದ ಅವರು ಸೇನಾಧಿಕಾರಿಗಳಿಗೆ ಅಧಿಕಾರ ಕೊಟ್ಟ ನಂತರ ಪಾಕಿಸ್ತಾನದ ಹಲವೆಡೆ ಸ್ಟ್ರೈಕ್ ಮಾಡಿದ್ದಾರೆ. ನಾವೆಲ್ಲ ಒಗ್ಗಟ್ಟಿಂದ ದೇಶದ ಜೊತೆ ನಿಲ್ಲಬೇಕು, ಸರಿಯಾದ ಉತ್ತರ ಕೊಡಬೇಕು, ಇಷ್ಟಕ್ಕೆ ಇದು ಸಾಲೋದಿಲ್ಲ, ಪುಲ್ವಾಮ ಅದ ನಂತರ ಸರಿಯಾಗಿ ಕ್ರಮ ಆಗಿದ್ರೆ ಪೆಹಲ್ಗಾಮ್ ಆಗ್ತಿರಲಿಲ್ಲ, ಸರಿಯಾದ ಕ್ರಮವನ್ನ ತೆಗೆದು ಕೊಳ್ಳಬೇಕು ಎಂದು ಹೇಳಿದರು.
ಭಾರದ ಮೇಲೆ ದಾಳಿ ಮಾಡುವ ದೈರ್ಯ ಮಾಡದಂತೆ ಕ್ರಮ ಜರಿಗಿಸಬೇಕು, ರಾಷ್ಟ್ರದ ಏಕತೆಗೆ ವಿಪಕ್ಷ ಹೇಗಿರಬೇಕೆನ್ನುವುದನ್ನ ನಾವು ಜಗತ್ತಿಗೆ ತೋರಿಸಿದ್ದೇವೆ, ಈ ಹಿಂದೆ ಇಂದಿರಾ ಗಾಂಧಿ ರಾಜೀವ್ ಗಾಂಧಿ,ಮಹಾತ್ಮಾ ಗಾಂಧಿಜಿ ದೇಶಕ್ಕೆ ಬಲಿದಾನ ಮಾಡಿದ್ದಾರೆ, ವಿಪಕ್ಷದಿಂದ ಬಿಜೆಪಿ ಪಾಠ ಕಲಿಬೇಕು, ಶತ್ರಿವಿಗೆ ಸರಿಯಾದ ಉತ್ತರ ಕೊಡಲು ಮೋದಿ ಸರಿಯಾದ ಕ್ರಮ ತೆಗೆದು ಕೊಳ್ಳಬೇಕು, ಮೋದಿ ಬಿಹಾರ್ ,ಕೇರಳ,ಬಾಂಬೆ ಸುತ್ತೋದು ಬಿಟ್ಟು ಕ್ರಮ ಜರಿಗಿಸಲು ಸರಿಯಾದ ನಿರ್ಣಯ ತೆಗೆದುಕೊಳ್ಳಬೇಕು ಎಂದು ಹೇಳಿದರು.
